ಹೈದರಾಬಾದ್: ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ 70 ವರ್ಷದ ಮಹಿಳೆಯೊಬ್ಬರ ಮೇಲೆ 20ಕ್ಕೂ ಅಧಿಕ ಕೋತಿಗಳು ದಾಳಿ (Monkeys Attack In Telangana) ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಾರ್ಚ್ 3ರಂದು ಘಟನೆ ನಡೆದಿದೆ. ಮಹಿಳೆಯನ್ನು ಚತರಬೊಯಿನ ನರಸವ್ವ ಎಂಬುದಾಗಿ ಗುರುತಿಸಲಾಗಿದೆ.
ಕಾಮರೆಡ್ಡಿ ಜಿಲ್ಲೆ ರಾಮರೆಡ್ಡಿ ಗ್ರಾಮದ ತಮ್ಮ ಮನೆಯಲ್ಲಿ ವೃದ್ಧೆಯು ಪಾತ್ರೆ ತೊಳೆಯುತ್ತಿದ್ದರು. ಇದೇ ವೇಳೆ ಕೋತಿಗಳು ಏಕಾಏಕಿ ದಾಳಿ ನಡೆಸಿವೆ. ಮಹಿಳೆಯು ಸಹಾಯ ಮಾಡಿ ಎಂದ ಜೋರಾಗಿ ಕೂಗಿದರೂ ಅಕ್ಕಪಕ್ಕದ ಮನೆಯವರು ಕೋತಿಗಳಿಗೆ ಹೆದರಿ ರಕ್ಷಣೆಗೆ ಮುಂದಾಗಿಲ್ಲ. ಸಂಬಂಧಿಕರ ಮದುವೆಗೆ ಹೋಗಿದ್ದ ಮಗಳು ಮನೆಗೆ ಬರುವಷ್ಟರಲ್ಲಿ ವೃದ್ಧೆಯು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಪುತ್ರಿಯು ಅವರನ್ನು ಆಸ್ಪತ್ರೆಗೆ ಸಾಗಿಸಿದರು ಎಂದು ತಿಳಿದುಬಂದಿದೆ.
ಮಹಿಳೆಯ ಬೆನ್ನು, ಎದೆ ಸೇರಿ ಹಲವೆಡೆ ಗಂಭೀರವಾಗಿ ಗಾಯಗಳಾಗಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ. ಕೋತಿಗಳ ನಿಯಂತ್ರಣ ಕುರಿತು ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Monkey shot dead : ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿ ಕಚ್ಚುತ್ತಿದ್ದ ಹುಚ್ಚು ಕೋತಿಗೆ ಗುಂಡಿಕ್ಕಿ ಹತ್ಯೆ