Site icon Vistara News

Yoga Day 2022 | 75-75-75 ಯೋಗ ಸಂಭ್ರಮ, ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಸಮರ್ಪಣೆ

ನವ ದೆಹಲಿ: ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದೊಂದಿಗೆ ಮಿಳಿತಗೊಂಡಿದೆ. ಇದನ್ನು ಸಂಭ್ರಮಿಸುವುದಕ್ಕಾಗಿ ೭೫ ಕೇಂದ್ರ ಸಚಿವರ ನೇತೃತ್ವದಲ್ಲಿ ೭೫ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲಿ ಯೋಗ ದಿನಾಚರಣೆ ಅದ್ಧೂರಿಯಾಗಿ ನಡೆಯಿತು.

ಮಾನವತೆಗಾಗಿ ಯೋಗ ಎನ್ನುವ ಘೋಷ ವಾಕ್ಯದೊಂದಿಗೆ ಆಚರಿಸುತ್ತಿರುವ ಈ ಬಾರಿಯ ಯೋಗ ದಿನಾಚರಣೆ ಇಡೀ ಮನುಕುಲವನ್ನು ಸಂಕಟದಿಂದ, ಸಮಸ್ಯೆಗಳಿಂದ ಮುಕ್ತಗೊಳಿಸುವ ಶಕ್ತಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ಹೇಳಿದರು. ಈ ಬಾರಿ ಯೋಗ ದಿನವನ್ನು ಚಾರಿತ್ರಿಕ ಮತ್ತು ಪಾರಂಪರಿಕ ಕೇಂದ್ರದಲ್ಲಿ ನಡೆಸಬೇಕು ಎನ್ನುವ ಕಾರಣಕ್ಕಾಗಿ ಪ್ರಧಾನ ಕಾರ್ಯಕ್ರಮಕ್ಕಾಗಿ ಮೈಸೂರನ್ನು ಆಯ್ಕೆ ಮಾಡಲಾಗಿದೆ.

ಬಿಜೆಪಿಯಿಂದ ೭೫೦೦೦ ಕಡೆ

ಭಾರತೀಯ ಜನತಾ ಪಕ್ಷ ದೇಶದಲ್ಲಿ ೭೫೦೦೦ ಕಡೆಗಳಲ್ಲಿ ಯೋಗ ದಿನಾಚರಣೆ ನಡೆಯಿತು. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ನೋಯಿಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ, ಕಾನೂನು ಸಚಿವ ಕಿರಣ್‌ ರಿಜಿಜು ಅವರು ಅರುಣಾಚಲ ಪ್ರದೇಶದ ಡೋಂಗ್‌ನಲ್ಲಿ ಯೋಗ ದಿನದ ಸಾರಥ್ಯ ವಹಿಸಿದರು. ಭಾರತ, ಚೀನಾ, ಮ್ಯಾನ್ಮಾರ್‌ಗಳು ಜತೆಗೂಡುವ ಗಡಿಭಾಗದಲ್ಲಿರುವ ಗ್ರಾಮ ಇದು.

ಗೃಹ ಸಚಿವ ಅಮಿತ್‌ ಶಾ ಅವರು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಪ್ರಸಿದ್ಧ ಜ್ಯೋತಿರ್ಲಿಂಗ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಕೊಯಮತ್ತೂರಿನಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು.

ಇದನ್ನೂ ಓದಿ | Yoga Day in Mysore: ಜಗತ್ತಿನ ಸರ್ವ ಸಮಸ್ಯೆಗಳ ಪರಿಹಾರಕ್ಕೆ ಯೋಗವೇ ಪರಮೋಚ್ಚ ಮಂತ್ರ ಎಂದ ಮೋದಿ

Exit mobile version