ಮುಂಬೈ: ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.75ರಷ್ಟು ನಗರ ಭಾರತೀಯರು 2023ರಲ್ಲಿ ಉತ್ತಮ ಜೀವನದ (Better life in 2023) ನಿರೀಕ್ಷೆಯಲ್ಲಿದ್ದಾರೆಂಬ ಸಂಗತಿಯು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. 2022ರಲ್ಲಿ ಡಿಸೆಂಬರ್‌ನಲ್ಲಿ YouGov ಈ ಬಗ್ಗೆ ಸಮೀಕ್ಷೆ ಕೈಗೊಂಡಿತ್ತು. ಈ ಸಮೀಕ್ಷೆಯಲ್ಲಿ ಸುಮಾರು 1006 ನಗರವಾಸಿಗಳು ಪಾಲ್ಗೊಂಡಿದ್ದರು.
ಶೇ.75 ಜನರು 2023ರಲ್ಲಿ ತಮ್ಮ ಜೀವನ ಉತ್ತಮವಾಗುವ ನಿರೀಕ್ಷೆ ಎಂದು ಹೇಳಿಕೊಂಡಿದ್ದರೆ, ಶೇ.21 ಜನರು ಅಂಥ ವ್ಯತ್ಯಾಸವೇನೂ ಆಗುವುದಿಲ್ಲ. ಕೇವಲ 4 ಪ್ರತಿಶತ ಜನರು 2023ರಲ್ಲಿ ತಮ್ಮ ಜೀವನ ಇನ್ನಷ್ಟು ಹದಗೆಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಶೇ.63ರಷ್ಟು ಭಾರತೀಯ 2022 ತಮ್ಮ ಪಾಲಿಗೆ ಉತ್ತಮ ವರ್ಷವಾಗಿತ್ತು ಎಂದೂ ಹೇಳಿಕೊಂಡಿದ್ದಾರೆ.
ಸಾಂಕ್ರಾಮಿಕ ರೋಗವು ಕಳೆದ ಕೆಲವು ವರ್ಷಗಳಿಂದ ಅವರನ್ನು ಹೆಚ್ಚು ಸಮತೋಲಿತವಾಗಿಸಿದೆ ಎಂದು ಶೇ.25ರಷ್ಟು ಭಾರತೀಯರು ತಿಳಿಸಿದ್ದಾರೆ. ಶೇ. 18 ಜನರು ಸಾಂಕ್ರಾಮಿಕ ರೋಗದ ನಂತರ ಹೆಚ್ಚು ಜಾಗರೂಕರಾಗಿದ್ದೇವೆ ಎಂದು ಭಾವಿಸಿದ್ದಾರೆ. ಶೇ.13ರಷ್ಟು ಜನರು ಮುಂಬರುವ ದಿನಗಳ ಬಗ್ಗೆ ಹೆಚ್ಚು ಆಶಾವಾದಿಗಳಾಗಿದ್ದಾರೆ ಎಂಬ ಸಂಗತಿಯೂ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ಇದನ್ನೂ ಓದಿ | Gautam Adani | ಅದಾನಿ ಸೇರಿದಂತೆ 3 ಮಂದಿ ಭಾರತೀಯರು ಫೋರ್ಬ್ಸ್ ಏಷ್ಯಾ ದಾನಿಗಳ ಪಟ್ಟಿಯಲ್ಲಿ