ಚಿಲ್ಲಕೊಂಡಯ್ಯಪಲ್ಲೆ(ಸತ್ಯಸಾಯಿ ಜಿಲ್ಲೆ): ಮಹಾರಾಷ್ಟ್ರದ ಸತ್ಯ ಸಾಯಿ ಜಿಲ್ಲೆಯ ಚಿಲ್ಲಕೊಂಡಯ್ಯಪಲ್ಲೆ ಎಂಬಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾವೊಂದಕ್ಕೆ ವಿದ್ಯುತ್ ಸ್ಪರ್ಶವಾಗಿ ಎಂಟು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುರುವಾರ ಮುಂಜನೆ ಈ ಘಟನೆ ನಡೆದಿದೆ. ಐವರು ಮಹಿಳೆಯರು ಸೇರಿ ಎಂಟು ಕಾರ್ಮಿಕರು ಆಟೋ ರಿಕ್ಷಾದಲ್ಲಿ ತಮ್ಮ ಹೊಲಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ವಿದ್ಯುತ್ ತಂತಿಗೆ ತಾಗಿ ದುರಂತ ಸಂಭವಿಸಿದೆ.
ಆಟೋರಿಕ್ಷಾ ಚಲಿಸುತ್ತಿದ್ದಾಗಲೇ ಅದರ ಮೇಲೆ ಹೈ ಟೆನ್ಶನ್ ವಿದ್ಯುತ್ ತಂತಿಗಳು ಬಿದ್ದವು ಎಂದು ಹೇಳಲಾಗಿದೆ. ಇದೇ ಭಾಗದಲ್ಲಿ ಇತ್ತೀಚೆಗೆ ಇದೇ ರೀತಿಯ ವಿದ್ಯುತ್ ತಂತಿ ಬಿದ್ದು ಬೈಕ್ನಲ್ಲಿ ಸಾಗುತ್ತಿದ್ದ ಇಬ್ಬರು ಯುವಕರು ಸುಟ್ಟು ಕರಕಲಾಗಿದ್ದರು.
ವಿದ್ಯುತ್ ತಂತಿ ತಗುಲುತ್ತಿದ್ದಂತೆಯೇ ಭಾರಿ ಆಟೋ ರಿಕ್ಷಾಕ್ಕೆ ಬೆಂಕಿ ಹತ್ತಿಕೊಂಡಿದೆ. ಕ್ಷಣ ಮಾತ್ರದಲ್ಲಿ ಧಗಧಗಿಸಿದ ರಿಕ್ಷಾದಿಂದ ಹೊರಬರಲು ಪ್ರಯಾಣಿಕರಿಗೆ ಸಾಧ್ಯವಾಗದೆ ಅವರು ಸುಟ್ಟು ಕರಕಲಾಗಿದ್ದಾರೆ.
ಇದನ್ನೂ ಓದಿ| ದೆಹಲಿ ಪಾರ್ಕಿಂಗ್ ಸ್ಥಳದಲ್ಲಿ ಭೀಕರ ಬೆಂಕಿ; ಸುಟ್ಟು ಕರಕಲಾದ ಎಲೆಕ್ಟ್ರಿಕ್ ವಾಹನಗಳು