ಸಿಕಂದರಾಬಾದ್: ತೆಲಂಗಾಣದ ಇ-ಬೈಕ್ ಶೋರೂಮ್‌ನಲ್ಲಿ ನಡೆದ ಬೆಂಕಿ ಆಕಸ್ಮಿಕ ದುರ್ಘಟನೆಯಲ್ಲಿ 8 ಮಂದಿ ನಿಧನರಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಸಿಕಂದರಾಬಾದ್‌ನ ಪಾಸ್‌ಪೋರ್ಟ್ ಕಚೇರಿಯ ಸಮೀಪದಲ್ಲಿರುವ ಇ-ಬೈಕ್ ಚಾರ್ಜಿಂಗ್ ಸ್ಟೇಶನ್ ಹಾಗೂ ಹೋಟೆಲ್‌ನಲ್ಲಿ ಈ ದುರ್ಘಟನೆ ನಡೆದಿದೆ. ಕಟ್ಟಡದ ಕೆಳಗಿನ ಭಾಗದಲ್ಲಿ ಇ- ಬೈಕ್ ಚಾರ್ಜಿಂಗ್ ಸ್ಟೇಶನ್ ಇದ್ದು, ಅಲ್ಲಿ ಹುಟ್ಟಿಕೊಂಡ ಬೆಂಕಿ ಮೇಲಿರುವ ಹೋಟೆಲ್ ಅನ್ನು ವ್ಯಾಪಿಸಿ ಈ ದುರ್ಘಟನೆ ಸಂಭವಿಸಿದೆ.
ರಾತ್ರಿ ಹತ್ತು ಗಂಟೆ ಸುಮಾರಿಗೆ ಬೆಂಕಿ ಹುಟ್ಟಿಕೊಂಡಿತು. ಹೊಗೆಯನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಅಗ್ನಿಶಾಮಕದಳಕ್ಕೆ ಕರೆ ಮಾಡುವಷ್ಟರಲ್ಲಿ ಅನಾಹುತ ನಡೆದಿತ್ತು. ಸತ್ತವರಲ್ಲಿ ಒಬ್ಬರು ಮಹಿಳೆ. ಪೊಲೀಸರು ತಿಳಿಸಿದ ಪ್ರಕಾರ, ಇ-ಚಾರ್ಜಿಂಗ್ ಸರ್ಕಿಟ್‌ನಲ್ಲಿ ಉಂಟಾದ ಪ್ರಮಾದದಿಂದ ಬೆಂಕಿ ವ್ಯಾಪಿಸಿದೆ. 24 ಮಂದಿ ಹೋಟೆಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದು, ಇವರಲ್ಲಿ ಎಂಟು ಮಂದಿ ಸತ್ತಿದ್ದಾರೆ. ಬಹುತೇಕ ಮೊದಲ ಹಾಗೂ ಎರಡನೇ ಮಹಡಿಯಲ್ಲಿದ್ದವರು ಸತ್ತಿದ್ದಾರೆ. ನಾಲ್ಕು ಮಹಡಿಗಳ ಕಟ್ಟಡ ಇದಾಗಿದ್ದು, ಮೂರು ಮತ್ತು ನಾಲ್ಕನೇ ಮಹಡಿಯಲ್ಲಿದ್ದವರು ಸ್ಥಳಿಯರ ಸಹಾಯದಿಂದ ಜಿಗಿದು ಪಾರಾಗಿದ್ದಾರೆ.
ಇದನ್ನೂ ಓದಿ | Rain News | ಮನೆ ಕುಸಿದು ಯುವಕ ಸಾವು, ಅಪ್ಪ-ಅಮ್ಮನನ್ನು ಬೇರೆಡೆ ಬಿಟ್ಟು ಬಂದು ಮನೆ ಪ್ರವೇಶಿಸಿದಾಗ ನಡೆಯಿತು ದುರಂತ