Site icon Vistara News

Andhra Pradesh Stampede | ಚಂದ್ರಬಾಬು ನಾಯ್ಡು ರೋಡ್‌ ಶೋ ವೇಳೆ ಕಾಲ್ತುಳಿತ, 8 ಜನರ ಸಾವು, 7 ಮಂದಿಗೆ ಗಾಯ

Stampede In Chandrababu Naidu Roadshow

ಹೈದರಾಬಾದ್:‌ ಅಮರಾವತಿಯಲ್ಲಿ ತೆಲುಗು ದೇಶಂ ಪಕ್ಷದ (TDP) ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ರೋಡ್‌ ಶೋ ನಡೆಸುವ ವೇಳೆ ಭಾರಿ ಕಾಲ್ತುಳಿತ (Andhra Pradesh Stampede) ಸಂಭವಿಸಿದ್ದು, ಎಂಟು ಜನ ಮೃತಪಟ್ಟಿದ್ದಾರೆ. ಹಾಗೆಯೇ, ಏಳು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆಲ್ಲೂರು ಜಿಲ್ಲೆ ಕಂದಕೂರು ಪಟ್ಟಣದಲ್ಲಿ ಚಂದ್ರಬಾಬು ನಾಯ್ಡು ಅವರು ರೋಡ್‌ ಶೋ ನಡೆಸುತ್ತಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಜನ ಭಾಗವಹಿಸಿದ್ದು, ಇದೇ ವೇಳೆ ನೂಕುನುಗ್ಗಲು ಉಂಟಾಗಿದೆ. ನೂಕುನುಗ್ಗಲು ಹೆಚ್ಚಾದ ಬಳಿಕ ಕಾಲ್ತುಳಿತ ಉಂಟಾಗಿದ್ದು, ಒಂದಷ್ಟು ಜನ ಕಾಲುವೆಗೆ ಬಿದ್ದಿದ್ದಾರೆ. ಇದರಿಂದಾಗಿ ಮಹಿಳೆಯೊಬ್ಬರು ಸೇರಿ ಎಂಟು ಜನ ಮೃತಪಟ್ಟಿದ್ದಾರೆ. ಈಗಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

10 ಲಕ್ಷ ರೂ. ಪರಿಹಾರ ಘೋಷಣೆ
ಕಾಲ್ತುಳಿತ ಸಂಭವಿಸುತ್ತಲೇ ಚಂದ್ರಬಾಬು ನಾಯ್ಡು ಅವರು ಸಭೆಯನ್ನು ರದ್ದುಗೊಳಿಸಿದರು. ಹಾಗೆಯೇ, ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಸ್ಥರಿಗೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರ ಚಿಕಿತ್ಸೆಗೆ ಸಕಲ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ದುರಂತದ ಕುರಿತು ಚಂದ್ರಬಾಬು ನಾಯ್ಡು ಬೇಸರ ವ್ಯಕ್ತಪಡಿಸಿದ್ದು, ಮೃತರಿಗೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ | Bharat Jodo Yatra| ಭಾರತ್​ ಜೋಡೋ ಯಾತ್ರೆಯಲ್ಲಿ ಕಾಲ್ತುಳಿತ; ಕೆ ಸಿ ವೇಣುಗೋಪಾಲ್​​ಗೆ ಗಾಯ

Exit mobile version