ವಿದಿಶಾ: ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಹಳ್ಳಿಯೊಂದರಲ್ಲಿ 8 ವರ್ಷದ ಮಗುವೊಂದು ಸುಮಾರು 60 ಅಡಿ ಆಳದ ತೆರೆದ ಬೋರ್‌ವೆಲ್‌ಗೆ ಬಿದ್ದಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಮಂಗಳವಾರ ಮಧ್ಯಾಹ್ನ 11 ಗಂಟೆಗೆ ಮಗು ಬಾವಿಗೆ ಬಿದ್ದಿದ್ದು, 43 ಅಡಿ ಆಳದಲ್ಲಿ ಸಿಕ್ಕಿಹಾಕಿಕೊಂಡಿದೆ. ಸ್ಥಳೀಯ ಎಸ್ಪಿ ತಿಳಿಸಿರುವ ಪ್ರಕಾರ, ಬೋರ್‌ವೆಲ್ ಒಳಗಿರುವ ಮಗುವಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಮಗುವಿನ ಸ್ಥಿತಿಗತಿ ತಿಳಿಯಲು ವೆಬ್‌ಕ್ಯಾಮ್ ಅನ್ನು ಕೂಡ ಒಳಗೆ ಕಳಿಸಲಾಗಿದೆ. ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ಬೋರ್‌ವೆಲ್‌ನ ಪಕ್ಕದಲ್ಲಿ 34 ಅಡಿ ಆಳದ ಗುಂಡಿಯನ್ನು ತೋಡಿ, ಒಂದು ಬದಿಯಿಂದ ಮಗುವನ್ನು ಸಮೀಪಿಸುವ ಯತ್ನ ನಡೆದಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಸೋಮವಾರ ನಡೆದ ಇಂಥದೇ ಇನ್ನೊಂದು ಘಟನೆಯಲ್ಲಿ, ಮಧ್ಯಪ್ರದೇಶದ ಅಹ್ಮದ್ನಗರ ಜಿಲ್ಲೆಯಲ್ಲಿ, 5 ವರ್ಷದ ಮಗುವೊಂದು 200 ಅಡಿ ಆಳದ ತೆರೆದ ಕೊಳವೆಬಾವಿಯಲ್ಲಿ ಬಿದ್ದಿತ್ತು. ಅದನ್ನು ರಕ್ಷಿಸುವ ಹೊತ್ತಿಗಾಗಲೇ ಮಗು ಮೃತಪಟ್ಟಿತ್ತು.
ಇದನ್ನೂ ಓದಿ: Borewell irrigation | ನೋಡ ನೋಡುತ್ತಿದ್ದಂತೆ ಕುಸಿಯಿತು ಬೋರ್‌ವೆಲ್; ರೈತನಿಗೆ ಲಕ್ಷಾಂತರ ರೂ. ನಷ್ಟ