Site icon Vistara News

Vande Bharat Trains: 6 ವರ್ಷದಲ್ಲಿ 80 ವಂದೇ ಭಾರತ್‌‌ ಸ್ಲೀಪರ್ ರೈಲು ತಯಾರಿ; 24 ಸಾವಿರ ಕೋಟಿ ರೂ. ಟೆಂಡರ್ ಯಾರಿಗೆ?

Discount In Vande Bharat Express Train

Indian Railways cuts train ticket prices of AC chair car trains including Vande Bharat by up to 25%

ನವದೆಹಲಿ: ದೇಶದಲ್ಲಿ ಈಗಾಗಲೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಓಡಾಟ ಆರಂಭವಾಗಿದೆ. ವೇಗದ ರೈಲುಗಳ ಓಡಾಟದಿಂದ ಜನರಿಗೆ ಸಮಯ ಉಳಿತಾಯವಾಗುವ ಜತೆಗೆ ಉತ್ಕೃಷ್ಟ ಮಟ್ಟದ ಸೌಕರ್ಯಗಳನ್ನೂ ನೀಡಲಾಗಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಮುಂದಿನ ಆರು ವರ್ಷದಲ್ಲಿ 80 ವಂದೇ ಭಾರತ್‌ ಸ್ಲೀಪರ್‌ ರೈಲುಗಳ (Vande Bharat Trains) ಉತ್ಪಾದನೆಗಾಗಿ ಗುತ್ತಿಗೆ ನೀಡಿದೆ. ಇದರಿಂದ ರೈಲು ಪ್ರಯಾಣಿಕರು ಮತ್ತಷ್ಟು ಉತ್ಕೃಷ್ಟ ಸೌಕರ್ಯಗಳನ್ನು, ಆಹ್ಲಾದಕರ ಪ್ರಯಾಣದ ಅನುಭವವನ್ನು ಪಡೆಯಲಿದ್ದಾರೆ.

ಹೌದು, ತೀತಾಗಢ ರೈಲ್‌ ಸಿಸ್ಟಮ್ಸ್‌ ಲಿಮಿಟೆಡ್‌ (TRSL) ಹಾಗೂ ಸರ್ಕಾರದ ಭಾರತ್‌ ಹೆವಿ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (BHEL) ಸಂಸ್ಥೆಗಳು ರೈಲ್ವೆ ಇಲಾಖೆಗೆ ಮುಂದಿನ ಆರು ವರ್ಷದಲ್ಲಿ ಅತ್ಯಾಧುನಿಕ 80 ವಂದೇ ಭಾರತ್‌ ಸ್ಲೀಪರ್‌ ರೈಲುಗಳನ್ನು ತಯಾರಿಸಿ ಕೊಡಲಿವೆ. “2029ರ ವೇಳೆಗೆ 80 ವಂದೇ ಭಾರತ್‌ ರೈಲುಗಳ ನಿರ್ಮಾಣಕ್ಕಾಗಿ ರೈಲ್ವೆ ಇಲಾಖೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದು ಎರಡೂ ಕಂಪನಿಗಳು ಜಂಟಿ ಪ್ರಕಟಣೆ ತಿಳಿಸಿವೆ.

ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಕ್ಷಣ

ವಂದೇ ಭಾರತ್‌ ಸ್ಲೀಪರ್‌ ರೈಲುಗಳ ನಿರ್ಮಾಣಕ್ಕಾಗಿ ರೈಲ್ವೆ ಇಲಾಖೆಯು 24 ಸಾವಿರ ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆ ನೀಡಿದೆ. ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದೇಶೀಯ ಕಂಪನಿಗಳಿಗೆ ರೈಲ್ವೆ ಇಲಾಖೆಯು ಇಷ್ಟೊಂದು ಬೃಹತ್‌ ಮೊತ್ತದ ಗುತ್ತಿಗೆ ನೀಡಿದೆ. ಎರಡೂ ಕಂಪನಿಗಳು 80 ರೈಲುಗಳನ್ನು ತಯಾರಿಸುವ ಜತೆಗೆ, ಮುಂದಿನ 35 ವರ್ಷಗಳವರೆಗೆ ನಿರ್ವಹಣೆಯನ್ನೂ ಮಾಡಲಿವೆ.

ಹೀಗಿರಲಿವೆ ಸ್ಪೀಪರ್‌ ರೈಲುಗಳು

  1. ಪ್ರತಿಯೊಂದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು 16 ಬೋಗಿ ಹೊಂದಿರುತ್ತದೆ
  2. ಒಂದು ರೈಲಿನಲ್ಲಿ ಸುಮಾರು 887 ಪ್ರಯಾಣಿಕರು ಸಂಚರಿಸಬಹುದು
  3. ಗಂಟೆಗೆ 160 ಕಿ.ಮೀ ವೇಗದಲ್ಲಿ ರೈಲುಗಳು ಸಂಚರಿಸಲಿವೆ

ಇದನ್ನೂ ಓದಿ: Vande Bharat Express : ಬೆಂಗಳೂರು-ಧಾರವಾಡ ನಡುವೆ ಜುಲೈನಿಂದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸಂಚಾರ, ಇಲ್ಲಿದೆ ಡಿಟೇಲ್ಸ್

ಗುತ್ತಿಗೆ ಪ್ರಕ್ರಿಯೆಯಲ್ಲಿ ದೇಶೀಯ ಟಿಆರ್‌ಎಸ್‌ಎಲ್‌ ಹಾಗೂ ಬಿಎಚ್‌ಇಎಲ್‌ ಕಂಪನಿಗಳು ಮಾತ್ರ ಭಾಗವಹಿಸಿದ್ದವು. ಕೊನೆಗೆ ಇದೇ ಎರಡು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. “ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಆತ್ಮನಿರ್ಭರ ಭಾರತ ಯೋಜನೆಯ ಯಶಸ್ಸಿಗಾಗಿ ನಾವು ಶ್ರಮಿಸುತ್ತೇವೆ. ಕೇಂದ್ರ ಸರ್ಕಾರದ ಮೇಕ್‌ ಇಂಡಿಯಾದ ಭಾಗವಾಗಿ ರೈಲುಗಳನ್ನು ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಎರಡೂ ಕಂಪನಿಗಳು ತಿಳಿಸಿವೆ.

Exit mobile version