Site icon Vistara News

Cooling Tower Demolition: 85 ಮೀಟರ್‌ ಎತ್ತರದ ಕೂಲಿಂಗ್‌ ಟವರ್‌ 7 ಸೆಕೆಂಡ್‌ನಲ್ಲಿ ನೆಲಸಮ, ವಿಡಿಯೊ ನೋಡಿ

85-metre-tall cooling tower reduced to ashes within 7 seconds in Surat

85-metre-tall cooling tower reduced to ashes within 7 seconds in Surat

ಗಾಂಧಿನಗರ: ನೊಯ್ಡಾದಲ್ಲಿ ನಿರ್ಮಿಸಲಾಗಿದ್ದ ಅವಳಿ ಕಟ್ಟಡಗಳನ್ನು ಅಪಾರ ಪ್ರಮಾಣದ ಸ್ಫೋಟಕಗಳನ್ನು ಬಳಸಿ ನೆಲಸಮಗೊಳಿಸಿದ ಬೆನ್ನಲ್ಲೇ ಗುಜರಾತ್‌ನ ಸೂರತ್‌ನಲ್ಲಿ 85 ಮೀಟರ್‌ ಎತ್ತರದ ಕೂಲಿಂಗ್‌ ಟವರ್‌ಅನ್ನು (Cooling Tower Demolition) ಮಂಗಳವಾರ (ಮಾರ್ಚ್‌ 21) ಕೇವಲ 7 ಸೆಕೆಂಡ್‌ಗಳಲ್ಲಿ ನೆಲಸಮಗೊಳಿಸಲಾಗಿದೆ. ಮಂಗಳವಾರ ಬೆಳಗ್ಗೆ 11.10ರ ಸುಮಾರಿಗೆ 220 ಕೆ.ಜಿ ಸ್ಫೋಟಕಗಳನ್ನು ಬಳಸಿ ನೆಲಸಮಗೊಳಿಸಲಾಗಿದೆ.

ಕೂಲಿಂಗ್‌ ಟವರ್‌ ಎಂದರೆ ಸಿಲಿಂಡರ್‌ ಆಕಾರದ ಕಾಂಕ್ರೀಟ್ ಗೋಪುರವಾಗಿದ್ದು, ನೀರು ತಂಪಾಗಿಸಲು ಹಾಗೂ ಕೈಗಾರಿಕಾ ಪ್ರಕ್ರಿಯೆಯಿಂದ ಉಗಿಯನ್ನು ಘನೀಕರಿಸಲು ಬಳಸಲಾಗುತ್ತದೆ. ಬೃಹತ್‌ ಗೋಪುರವನ್ನು ಅಪಾರ ಪ್ರಮಾಣದ ಸ್ಫೋಟಕ ಬಳಸಿ ನೆಲಸಮಗೊಳಿಸಿದ ಕಾರಣ, ಗೋಪುರ ಧರೆಗುರುಳಿದ ಕೆಲವೇ ಕ್ಷಣಗಳಲ್ಲಿ ಭಾರಿ ಪ್ರಮಾಣದ ಧೂಳು ಕಾಣಿಸಿಕೊಂಡಿದೆ. ಹಾಗೆಯೇ, ಕಟ್ಟಡ ಕುಸಿಯುವ ಭಾರಿ ಶಬ್ದ ಕೇಳಿಸಿದೆ.

ನೆಲಸಮದ ವಿಡಿಯೊ ನೋಡಿ

ತಾಪಿ ನದಿ ತೀರದಲ್ಲಿರುವ ಕೂಲಿಂಗ್‌ ಟವರ್‌ ಸುತ್ತಲಿನ 250-300 ಮೀಟರ್‌ ವ್ಯಾಪ್ತಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿತ್ತು. ಸ್ಫೋಟಕ ತಜ್ಞರು ಗೂಪುರದ ಸುತ್ತಲೂ ಸ್ಫೋಟಕಗಳನ್ನು ಅಳವಡಿಸಿದ್ದರು. ಈ ಟವರ್‌ ಗುಜರಾತ್‌ ರಾಜ್ಯ ವಿದ್ಯುತ್‌ ನಿಗಮದ 135 ಮೆಗಾ ವ್ಯಾಟ್‌ ಸಾಮರ್ಥ್ಯದ ಘಟಕದ ಭಾಗವಾಗಿತ್ತು. ಇದನ್ನು 1993ರಲ್ಲಿ ನಿರ್ಮಿಸಲಾಗಿತ್ತು.

ಟವರ್‌ ನೆಲಸಮಕ್ಕೆ ಕಾರಣವೇನು?

ತಾಂತ್ರಿಕ ಹಾಗೂ ವಾಣಿಜ್ಯಿಕ ಕಾರಣಗಳಿಗಾಗಿ ಬೃಹತ್‌ ಟವರ್‌ಅನ್ನು ನೆಲಸಮಗೊಳಿಸಲಾಗಿದೆ. 2017ರಲ್ಲಿಯೇ ಕೇಂದ್ರೀಯ ವಿದ್ಯುತ್‌ ಪ್ರಾಧಿಕಾರವು ಇದರ ನೆಲಸಮಕ್ಕೆ ಅನುಮೋದನೆ ನೀಡಿತ್ತು. ಅದರಂತೆ, 2021ರ ಸೆಪ್ಟೆಂಬರ್‌ನಲ್ಲಿ ಟವರ್‌ ನೆಲಸಮ ಪ್ರಕ್ರಿಯೆ ಆರಂಭವಾಗಿತ್ತು. ಅದರಂತೆ, ಟವರ್‌ಅನ್ನು ಯಶಸ್ವಿಯಾಗಿ ನೆಲಸಮಗೊಳಿಸಲಾಗಿದೆ.

ನೊಯ್ಡಾದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಅವಳಿ ಕಟ್ಟಡಗಳನ್ನು 2022ರ ಆಗಸ್ಟ್‌ 28ರಂದು ಸುಪ್ರೀಂ ಕೋರ್ಟ್‌ ಆದೇಶದಂತೆ ನೆಲಸಮಗೊಳಿಸಲಾಗಿದೆ. ಸುಮಾರು 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಎರಡೂ ಗಗನಚುಂಬಿ ಕಟ್ಟಡಗಳನ್ನು 20 ಕೋಟಿ ರೂ. ವ್ಯಯಿಸಿ, 3,700 ಕೆಜಿ ಸ್ಫೋಟಕಗಳನ್ನು ಬಳಸಿ ಧರೆಗುರುಳಿಸಲಾಗಿತ್ತು.

ಇದನ್ನೂ ಓದಿ: Twin Towers Demolition | 9 ಸೆಕೆಂಡ್‌ಗಳಲ್ಲಿ ನೋಯ್ಡಾದ ಅವಳಿ ಕಟ್ಟಡ ನೆಲಸಮ!

Exit mobile version