ಅಹ್ಮದಾಬಾದ್: ಗುಜರಾತ್‌ನ ಅಹ್ಮದಾಬಾದ್ ನಗರದ ಮೂಲಕ ಹಾದು ಹೋಗಿರುವ ಸರ್ಕೇಜ್-ಗಾಂಧಿನಗರ ಹೆದ್ದಾರಿಯಲ್ಲಿರುವ ಇಸ್ಕಾನ್ ಫ್ಲೈಓವರ್ ಮೇಲೆ ಬುಧವಾರ ತಡರಾತ್ರಿ ಭಾರಿ ಅಪಘಾತ ಸಂಭವಿಸಿದೆ. ಬೇರೊಂದು ಅಪಘಾತವನ್ನು ನಿಂತು ನೋಡುತ್ತಿದ್ದ ಜನರ ಮೇಲೆ ವೇಗವಾಗಿ ಬಂದ ಜಾಗ್ವಾರ್ ಕಾರು (Car Accident) ಹರಿದಿದ್ದು, 13 ಜನ ಮೃತಪಟ್ಟಿದ್ದಾರೆ. ಹಾಗೆಯೇ, 20 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ತಡರಾತ್ರಿ 1.30ರ ಸುಮಾರಿಗೆ ಇಸ್ಕಾನ್ ಫ್ಲೈಓವರ್ ಮೇಲೆ ಟ್ರಕ್ ಹಾಗೂ ಎಸ್‌ಯುವಿ ಕಾರು ಅಪಘಾತಕ್ಕೀಡಾಗಿದ್ದು, ಇದನ್ನು ನೋಡುತ್ತ ಹಲವು ಜನ ನಿಂತಿದ್ದಾರೆ. ಇದೇ ವೇಳೆ ಗಂಟೆಗೆ 100 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಬಂದ ಜಾಗ್ವಾರ್ ಕಾರು ಜನರ ಮೇಲೆ ಹರಿದಿದೆ. ಇಬ್ಬರು ಪೊಲೀಸರು, ಆರು ವಿದ್ಯಾರ್ಥಿಗಳು ಸೇರಿ ಒಟ್ಟು 9 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ 20 ಜನರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ನಜ್ಜುಗುಜ್ಜಾದ ಕಾರು
#WATCH | Ahmedabad, Gujarat | An accident took place at the ISKCON flyover on Sarkhej-Gandhinagar (SG) highway. pic.twitter.com/r4r9ghl3VF
— ANI (@ANI) July 20, 2023
“ಕಾರು ಗುದ್ದಿದ ರಭಸಕ್ಕೆ ಜನ 25-30 ಅಡಿ ದೂರದಲ್ಲಿ ಬಿದ್ದಿದ್ದಾರೆ. ಸ್ಥಳದಲ್ಲೇ ಆರು ಮಂದಿ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಕಾರಿನ ಚಾಲಕನನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಭೀಕರ ಅಪಘಾತ
Ahmedabad, Gujarat | An accident took place at the ISKCON flyover on Sarkhej-Gandhinagar (SG) highway. pic.twitter.com/0xVFL147Xd
— ANI (@ANI) July 20, 2023
ಇದನ್ನೂ ಓದಿ: Road Accident : ಅಪಘಾತವಾಗಿ ಗಂಟೆಗಟ್ಟಲೆ ನರಳಿದರೂ ಕೈಕಟ್ಟಿ ನೋಡಿದ ಜನ!
ಸಾರ್ವಜನಿಕರ ಪ್ರಕಾರ, ಜನರ ಮೇಲೆ ಹರಿದ ಕಾರು 160 ಕಿ.ಮೀ ವೇಗದಲ್ಲಿತ್ತು ಎಂದು ತಿಳಿದುಬಂದಿದೆ. ಹೆಚ್ಚಿನ ಜನ ಬೇರೊಂದು ಅಪಘಾತವಾಗಿದ್ದನ್ನು ನೋಡುತ್ತ ನಿಂತಿದ್ದು, ವೇಗವಾಗಿ ಬರುತ್ತಿದ್ದ ಕಾರನ್ನು ಗಮನಿಸುವಷ್ಟರಲ್ಲೇ ಗುದ್ದಿದೆ. ಚಾಲಕ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡ ಕಾರಣ ಭೀಕರವಾಗಿ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಅಹ್ಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಭೀಕರ ಅಪಘಾತ ಇದಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.