Site icon Vistara News

New Airports: ಮತ್ತೆ ಹೊಸ 9 ವಿಮಾನ ನಿಲ್ದಾಣಗಳ ನಿರ್ಮಾಣ ಎಂದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ

Flight delay problem, war rooms will set up in 6 metro Airports

ನವದೆಹಲಿ: ಮುಂದಿನ ಎರಡು ವರ್ಷಗಳಲ್ಲಿ ಇನ್ನೂ 9 ವಿಮಾನ ನಿಲ್ದಾಣಗಳನ್ನು (New Airport) ಉತ್ತರ ಪ್ರದೇಶದಲ್ಲಿ (uttar Pradesh) ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು (Union Minister Jyotiraditya Scindia) ಹೇಳಿದ್ದಾರೆ. ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಪೂರಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರವು ನಾಗರಿಕ ವಿಮಾನಯಾನ ವಲಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಬಂದ ಮೊದಲು 65 ವರ್ಷದಲ್ಲಿ ಕೇವಲ 65 ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿತ್ತು. ಕಳೆದ 9 ವರ್ಷದಲ್ಲಿ 75 ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ. ಇದರೊಂದಿಗೆ ಒಟ್ಟು ವಿಮಾನ ನಿಲ್ದಾಣಗಳ ಸಂಖ್ಯೆ 149ಕ್ಕೆ ಏರಿಕೆಯಾಗಿದೆ. ಇದಲ್ಲಿ ವಿಮಾ ನಿಲ್ದಾಣಗಳು, ಹೆಲೆಪೋರ್ಟ್ಸ್ ಮತ್ತು ವಾಟರ್‌ಡ್ರೋಮ್ಸ್ ಕೂಡ ಸೇರಿವೆ ಎಂದು ಅವರು ತಿಳಿಸಿದ್ದಾರೆ.

65 ವರ್ಷಗಳಲ್ಲಿ ಕೇವಲ ಮೂರು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಆದರೆ ಪ್ರಸ್ತುತ ಸರ್ಕಾರವು 2014 ರಿಂದ 12 ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿದೆ. 65 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಕೇವಲ 6 ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿತ್ತು. ಮೋದಿ ಸರ್ಕಾರವು ಕಳೆದ 9 ವರ್ಷದಲ್ಲಿ ಮತ್ತೆ ಮೂರು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ನಾವು ಮುಂದಿನ ಎರಡು ವರ್ಷಗಳಲ್ಲಿ 9 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಲಿದ್ದೇವೆ. ಆಗ ಉತ್ತರ ಪ್ರದೇಶದಲ್ಲಿ ಇರುವ ವಿಮಾನ ನಿಲ್ದಾಣಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಮೀರತ್ ವಿಮಾನ ನಿಲ್ದಾಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 115 ಎಕರೆ ಭೂಮಿಯನ್ನು ಒದಗಿಸಿದ ನಂತರ ವಿಎಫ್‌ಆರ್ (ವಿಷುಯಲ್ ಫ್ಲೈಟ್ ರೇಟಿಂಗ್) ಬಳಸಿ ಎಟಿಆರ್ ವಿಮಾನದೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು ಎಂದು ಹೇಳಿದರು.

ಮೀರತ್ ಪರವಾನಗಿ ಪಡೆಯದ ವಿಮಾನ ನಿಲ್ದಾಣವಾಗಿದೆ ಮತ್ತು ಆರ್‌ಸಿಎಸ್ ವಿಮಾನಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆಗಾಗಿ ಉಡಾನ್ ಯೋಜನೆಯಡಿ ಮೂರನೇ ಸುತ್ತಿನ ಬಿಡ್ಡಿಂಗ್‌ನಲ್ಲಿ ಗುರುತಿಸಲಾಗಿದೆ ಎಂದು ಸಿಂಧಿಯಾ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಉಡಾನ್ 4.2 ಸುತ್ತಿನ ಬಿಡ್ಡಿಂಗ್‌ನ ಅಡಿಯಲ್ಲಿ, ಮೀರತ್-ಲಕ್ನೋ-ಮೀರತ್ ಮಾರ್ಗವನ್ನು ಫ್ಲೈಬಿಗ್‌ಗೆ 19-ಆಸನಗಳ ಮಾದರಿಯ ವಿಮಾನ ಮತ್ತು ವಾರಕ್ಕೆ 133 ಆಸನಗಳ ಆರ್‌ಸಿಎಸ್ ವಿಮಾನಗಳ ಕಾರ್ಯಾಚರಣೆಗಾಗಿ ನೀಡಲಾಗಿದೆ. ವಿಮಾನ ನಿಲ್ದಾಣವು ಸಿದ್ಧವಾದ ನಂತರ ಮತ್ತು ಪರವಾನಗಿ ಪಡೆದ ನಂತರ ಮಾತ್ರ, ಆಯ್ದ ಏರ್‌ಲೈನ್ಸ್ ಆಪರೇಟರ್ ಮೀರತ್ ವಿಮಾನ ನಿಲ್ದಾಣದಿಂದ ಆರ್‌ಸಿಎಸ್ ವಿಮಾನಗಳನ್ನು ಪ್ರಾರಂಭಿಸಬಹುದು ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: ದುಬೈನಲ್ಲಿ ಶೀಘ್ರ ಜಗತ್ತಿನ ಅತಿದೊಡ್ಡ, ಜನನಿಬಿಡ ವಿಮಾನ ನಿಲ್ದಾಣ!

Exit mobile version