Site icon Vistara News

Road Accident: ಮದುವೆಗೆ ಹೋಗಿದ್ದವರು ಮಸಣಕ್ಕೆ; ಕಾರು-ಟ್ರಕ್‌ ಡಿಕ್ಕಿಯಾಗಿ 9 ಜನ ಸಾವು

Road Accident

9 people killed in car-truck collision in Rajasthan's Jhalawar

ಜೈಪುರ: ರಾಜಸ್ಥಾನದ ಝಲವಾರ್‌ ಜಿಲ್ಲೆಯಲ್ಲಿ (Jhalawar District) ಭೀಕರ ಅಪಘಾತ (Road Accident) ಸಂಭವಿಸಿ 9 ಮಂದಿ ಮೃತಪಟ್ಟಿದ್ದಾರೆ. ಅಕ್ಲೇರಾ ಪ್ರದೇಶದ ಪಂಚೋಲಾ ಗ್ರಾಮದ ಬಳಿ ಕಾರು ಹಾಗೂ ಟ್ರಕ್‌ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.

ಶನಿವಾರ ರಾತ್ರಿ (ಏಪ್ರಿಲ್‌ 20) ಮದುವೆ ಮುಗಿಸಿಕೊಂಡು ಕಾರಿನಲ್ಲಿ ತೆರಳುವಾಗ ಅಕ್ಲೇರಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ 52 (NH 52) ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಕಾರಿಗೆ ವೇಗವಾಗಿ ಬಂದು ಟ್ರಕ್‌ ಡಿಕ್ಕಿಯಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಕೂಡಲೇ ಆಂಬುಲೆನ್ಸ್‌ ಮೂಲಕ ಜನರನ್ನು ರಕ್ಷಿಸಲು ಯತ್ನಿಸಲಾಯಿತಾದರೂ, ಅಷ್ಟೊತ್ತಿಗಾಗಲೇ 9 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

“ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಟ್ರಕ್‌ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ 9 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಟ್ರಕ್‌ ಚಾಲಕನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಝಲವಾರ್‌ ಎಸ್‌ಪಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಜಾರ್ಖಂಡ್‌ನ ನಿರ್ಸಾದಲ್ಲಿರುವ ಜಿಟಿ ರಸ್ತೆಯಲ್ಲಿ ಶನಿವಾರ (ಏಪ್ರಿಲ್‌ 20) ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಾಲಿವುಡ್‌ ನಟ ಪಂಕಜ್‌ ತ್ರಿಪಾಠಿ ಬಾವ ರಾಜೇಶ್‌ ತಿವಾರಿ ಮೃತಪಟ್ಟಿದ್ದಾರೆ. ಇನ್ನು ನಟನ ಸಹೋದರಿ ಸರಿತಾ ತಿವಾರಿ ಅವರು ಕೂಟ ಅಪಘಾತಕ್ಕೀಡಾಗಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ರಾಜೇಶ್‌ ತಿವಾರಿ ಹಾಗೂ ಸರಿತಾ ತಿವಾರಿ ಅವರು ಕಾರಿನಲ್ಲಿ ಪಶ್ಚಿಮ ಬಂಗಾಳದಿಂದ ಬಿಹಾರದ ಗೋಪಾಲ್‌ಗಂಜ್‌ಗೆ ತೆರಳುತ್ತಿದ್ದರು. ಶನಿವಾರ ಸಂಜೆ 4.30ರ ಸುಮಾರಿಗೆ ದೆಹಲಿ-ಕೋಲ್ಕೊತಾ ರಾಷ್ಟ್ರೀಯ ಹೆದ್ದಾರಿ ಬಳಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ. ಕಾರು ವೇಗವಾಗಿ ಚಲಿಸುತ್ತಿದ್ದ ಕಾರಣ ಡಿಕ್ಕಿಯಾಗುತ್ತಲೇ ನಜ್ಜುಗುಜ್ಜಾಗಿದೆ. ಇದರಿಂದಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Pankaj Tripathi: ಭೀಕರ ಅಪಘಾತ; ನಟ ಪಂಕಜ್‌ ತ್ರಿಪಾಠಿ ಬಾವ ನಿಧನ, ಸಹೋದರಿ ಸ್ಥಿತಿ ಗಂಭೀರ

Exit mobile version