Site icon Vistara News

Soldiers Dead: ಲಡಾಕ್‌ನಲ್ಲಿ ನದಿಗೆ ಬಿದ್ದ ಸೇನಾ ವಾಹನ, 9 ಸೈನಿಕರ ಸಾವು

9 Soliers feared dead while vehicle falls in to river

ನವದೆಹಲಿ: ಸೇನಾ ಯೋಧರಿದ್ದ ವಾಹನವು ನದಿಗೆ ಬಿದ್ದು, 9 ಸೈನಿಕರು ಮೃತಪಟ್ಟಿರುವ (Soldiers Dead) ಘಟನೆ ಲಡಾಕ್‌ನಲ್ಲಿ (Ladakh) ಶನಿವಾರ ಸಾಯಂಕಾಲ ನಡೆದಿದೆ. ಲೇಹ್‌ನಿಂದ (Leh City) 150 ಕಿಲೋ ಮೀಟರ್‌ ದೂರದಲ್ಲಿರುವ ಕಿಯಾರಿ (kiyari) ಎಂಬಲ್ಲಿ ಈ ದುರ್ಘಟನೆ ನಡೆದಿದೆ. ನದಿಗೆ ಬಿದ್ದಿರುವ ಸೇನಾ ವಾಹನದಲ್ಲಿ ಸುಮಾರು 10 ಸೈನಿಕರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿಯನ್ನು ಅಧಿಕಾರಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ. ಮೃತರ ಪೈಕಿ ಒಬ್ಬರು ಜ್ಯೂನಿಯರ್ ಕಮಿಷನ್ಡ್ ಆಫೀಸರ್(JCO) 8 ಯೋಧರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯೋಧರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಂಬನಿ ಮಿಡಿದಿದ್ದಾರೆ.

ಈ ಅಪಘಾತವು ಶನಿವಾರ ಸಂಜೆ 4.45 ನಿಮಿಷಕ್ಕೆ ಸಂಭವಿಸಿದೆ ಎಂದು ಲೇಹ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪಿಡಿ ನಿತ್ಯಾ ಅವರು ಹೇಳಿದ್ದಾರೆ. 9 ಯೋಧರು ಮೃತಪಟ್ಟಿದ್ದು, ಮತ್ತೊಬ್ಬ ಯೋಧನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಲಡಾಕ್‌ನ ಕಿಯಾರಿಯಲ್ಲಿ ಭಾರತೀಯ ಸೇನೆಯ ವಿಭಾಗೀಯ ಪ್ರಧಾನ ಕಚೇರಿ ಇದೆ.

ಸೇನಾ ಕಾನ್ವೆದಲ್ಲಿ ಒಟ್ಟು ಐದು ಟ್ರಕ್ ಪ್ರಯಾಣಿಸುತ್ತಿದ್ದವು. ಈ ಪೈಕಿ, ನಿಯಂತ್ರಣ ತಪ್ಪಿ ನದಿ ನೀರಿಗೆ ಬಿದ್ದ ಟ್ರಕ್‌ನಲ್ಲಿ ಜೆಸಿಒ ಸೇರಿ ಒಟ್ಟು 10 ಯೋಧರಿದ್ದರು. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರ ತಂಡವು ಸ್ಥಳಕ್ಕೆ ಭೇಟಿ ನೀಡಿ, ಗಾಯಾಳು ಯೋಧರನ್ನು ಸೇನಾ ಆಸ್ಪತ್ರೆಗೆ ದಾಖಲಿಸಿತು. ಈ ವೇಳೆ, 8 ಯೋಧರು ಮೃತಪಟ್ಟಿದ್ದಾರೆಂದು ಘೋಷಿಸಲಾಯಿತು. ಅಷ್ಟೊತ್ತಿಗೆ ಮತ್ತೊಬ್ಬ ಯೋಧ ಕೂಡ ಮೃತರಾಗಿದ್ದರು. ಒಟ್ಟು 9 ಯೋಧರು ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: ರಾಜೌರಿಯಲ್ಲಿ ಗುಹೆಯಲ್ಲಿ ಕುಳಿತು ಸ್ಫೋಟಕ ಎಸೆದ ಉಗ್ರರು; ಇಬ್ಬರು ಯೋಧರ ಸಾವು, ನಾಲ್ವರಿಗೆ ಗಾಯ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಘಟನೆಯ ಕುರಿತು ಟ್ವೀಟ್ ಮಾಡಿ, ಮೃತ ಯೋಧರ ಸೇವೆಯನ್ನು ಕೊಂಡಾಡಿದ್ದಾರೆ. ಲಡಾಕ್‌ನ ಲೇಹ್ ಸಮೀಪದಲ್ಲಿ ಸಂಭವಿಸಿದ ಅಪಘಾತದಲ್ಲಿ ಸೇನಾ ಸಿಬ್ಬಂದಿ ಸಾವಿನಿಂದ ದುಃಖಿತನಾಗಿದ್ದೇನೆ. ರಾಷ್ಟ್ರಕ್ಕೆ ಅವರು ನೀಡಿದ ಸೇವೆಯನ್ನು ನಾವೆಂದೂ ಮರೆಯುವುದಿಲ್ಲ. ಮೃತ ಯೋಧರ ಕುಟುಂಬದ ಸದಸ್ಯರೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version