Site icon Vistara News

Indian Railways : ಭಾರತ ಗೌರವ ಯಾತ್ರಾ ರೈಲಿನಲ್ಲಿ ಕಲುಷಿತ ಆಹಾರ ಸೇವಿಸಿ 90 ಮಂದಿ ಅಸ್ವಸ್ಥ

Gauvarav Yatra

ನವದೆಹಲಿ: ಚೆನ್ನೈನಿಂದ ಗುಜರಾತ್​ನ ಪಾಲಿಟಾನಾಗೆ ತೆರಳುತ್ತಿದ್ದ ಭಾರತ್ ಗೌರವ್ ಯಾತ್ರಾ ವಿಶೇಷ ಪ್ಯಾಕೇಜ್ ರೈಲಿನಲ್ಲಿ (Indian Railways) ಪ್ರಯಾಣಿಸುತ್ತಿದ್ದ ಸುಮಾರು 90 ಪ್ರಯಾಣಿಕರು ಮಂಗಳವಾರ ರಾತ್ರಿ ಖಾಸಗಿಯಾಗಿ ಪೂರೈಕೆಯಾದ ಊಟವನ್ನು ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಇದಕ್ಕೆ ರೈಲ್ವೆ ಇಲಾಖೆಯ ಹೊಣೆಯಲ್ಲ ಎಂಬುದಾಗಿ ಇಲಾಖೆಯ ಸಾರ್ವಜನಿಕ ಸಂಪರ್ಕ ಇಲಾಖೆ ಹೇಳಿದೆ. ಇದೇ ವೇಳೆ ಪ್ರಯಾಣಿಕ ಹಿತರಕ್ಷಣೆಗಾಗಿ ಮಾಡಿದ್ದೇವೆ ಎಂಬುದಾಗಿಯೂ ಹೇಳಿದೆ.

ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗುಜರಾತ್​ನ ಪಾಲಿಟಾನಾಗೆ ಖಾಸಗಿಯಾಗಿ ಕಾಯ್ದಿರಿಸಲಾಗಿದ್ದ ಭಾರತ್ ಗೌರವ್ ಯಾತ್ರಾ ವಿಶೇಷ ರೈಲಿನಲ್ಲಿ ಈ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.ಊಟ ಮಾಡಿದ ಬಳಿಕ ಪ್ರಯಾಣಿಕರು ಹೊಟ್ಟೆ ನೋವು, ವಾಂತಿ, ತಲೆತಿರುಗುವಿಕೆ ಮತ್ತು ಅತಿಸಾರದಿಂದ ಬಳಲಿದ್ದಾರೆ. ನಂತರ ಪುಣೆ ರೈಲ್ವೆ ನಿಲ್ದಾಣದಲ್ಲಿ ರೈಲಿನ ತುರ್ತು ನಿಲುಗಡೆ ಮಾಡಿದ್ದಾರೆ ಎಂದು ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಶಿವರಾಜ್ ಮನಸ್ಪುರೆ ತಿಳಿಸಿದ್ದಾರೆ.

ಸೋಲಾಪುರ ಮತ್ತು ಪುಣೆ ನಡುವೆ ಘಟನೆ ನಡೆದಿದೆ. ಬೋಗಿಯಲ್ಲಿದ್ದ ಸುಮಾರು 80 ರಿಂದ 90 ಪ್ರಯಾಣಿಕರು ಸೇವಿಸಿದ ಆಹಾರ ಕಲುಷಿತಗೊಂಡಿತ್ತ ಎಂದು ಅವರು ಹೇಳಿದ್ದಾರೆ. ಅವರು ಹೊಟ್ಟೆ ನೋವು, ವಾಕರಿಕೆ, ಭೇದಿ ಮತ್ತು ತಲೆನೋವಿನ ಬಗ್ಗೆ ಮಾಹಿತಿ ನೀಡಿದರು ಎಂದು ಅಧಿಕಾರಿ ತಿಳಿಸಿದ್ದಾರೆ.

ವೈದ್ಯರಿಂದ ತುರ್ತು ನೆರವು

“ಪುಣೆ ನಿಲ್ದಾಣದಲ್ಲಿ, ಮೂರು ವೈದ್ಯಕೀಯ ತಂಡಗಳು, 15 ರೈಲ್ವೆ ವೈದ್ಯರು ಮತ್ತು ಸಿಬ್ಬಂದಿಯ, 13 ಖಾಸಗಿ ವೈದ್ಯರು ಮತ್ತು ಸಿಬ್ಬಂದಿ ಮತ್ತು ಎಂಟು ಎನ್​ಜಿಒ ಕಾರ್ಯಕರ್ತರು ನೆರವು ಕಾರ್ಯದಲ್ಲಿ ತೊಡಗಿದ್ದಾರೆ. ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ನಾಲ್ಕು ಮುಖ್ಯ ಆರೋಗ್ಯ ನಿರೀಕ್ಷಕರು ಸಹ ಕೆಲಸ ಮಾಡುತ್ತಿದ್ದಾರೆ” ಎಂದು ರೈಲ್ವೆ ಪಿಆರ್​ಒ ಮಾಹಿತಿ ನೀಡಿದ್ದಾರೆ.

ರೈಲು ಮಂಗಳವಾರ ರಾತ್ರಿ 11.27 ಕ್ಕೆ ಪುಣೆ ಪ್ಲಾಟ್ ಫಾರ್ಮ್ ಸಂಖ್ಯೆ 2 ಕ್ಕೆ ಬಂದು 12.29 ಕ್ಕೆ ಹೊರಟಿತ್ತು. ಕೋಚ್ ನಂ. ಬಿ 11ರಲ್ಲಿ ವಾಂತಿ, ಹೊಟ್ಟೆ ನೋವು, ಭೇದಿ ಹೊಂದಿರುವ ಕೆಲವು ಪ್ರಯಾಣಿಕರನ್ನು ವೈದ್ಯರ ತಂಡವು ಗಮನಿಸಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಗಂಡ ಹೆಂಡತಿ ಜಗಳದಿಂದಾಗಿ ರೇಮಂಡ್ ಕಂಪನಿಗೆ 1500 ಕೋಟಿ ರೂ. ನಷ್ಟ!

ರೈಲ್ವೆ ಪಿಆರ್​ಒ ಪ್ರಕಾರ, ಆಹಾರವನ್ನು ರೈಲ್ವೆ ಅಥವಾ ಐಆರ್​ಸಿಟಿಸಿ ಸಿಬ್ಬಂದಿ ಪೂರೈಸಿಲ್ಲ/ ಆದರೆ ಖಾಸಗಿಯಾಗಿ ಸಂಗ್ರಹಿಸಲಾಗಿದೆ ಎಂದು ಮನಸ್ಪುರೆ ಹೇಳಿದರು. ರೈಲ್ವೆ ಸಚಿವಾಲಯದ ಪ್ರಕಾರ, ಖಾಸಗಿ ಪೂರೈಕೆದಾರರೊಬ್ಬರು ಈ ಸೇವೆಯನ್ನು ನಿರ್ವಹಿಸುತ್ತಿದ್ದಾರೆ. ಸಚಿವಾಲಯವು ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಎಲ್ಲಾ 90 ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆಯ ನಂತರ ಸಾಮಾನ್ಯ ಸುಧಾರಿಸಿಕೊಂಡಿದ್ದಾರೆ ಎಂದು ಮನಸ್ಪುರೆ ಭರವಸೆ ನೀಡಿದ್ದಾರೆ. ಯಾವುದೇ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ, ಅವರೆಲ್ಲರೂ ಅದೇ ರೈಲಿನಲ್ಲಿ ತಮ್ಮ ಪ್ರಯಾಣವನ್ನು ಮುಂದುವರೆಸಿದ್ದಾರೆ ಎಂದು ಹೇಳಿದ್ದಾರೆ. “ರೈಲು 50 ನಿಮಿಷಗಳ ನಂತರ ಹೊರಟಿತು. ಎಲ್ಲಾ ಪ್ರಯಾಣಿಕರ ಸ್ಥಿತಿ ಸ್ಥಿರವಾಗಿದೆ” ಎಂದು ಅವರು ಹೇಳಿದರು.

Exit mobile version