ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್ ಆಫ್ ಎಂಜಿನಿಯರಿಂಗ್ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು ಆತಂಕಕ್ಕೀಡಾಗುವಂತಾಗಿದೆ. ವಿದ್ಯಾರ್ಥಿನಿಯೊಬ್ಬಳು ವಿವಿ ಹಾಸ್ಟೆಲ್‌ನ ಬಾತ್‌ರೂಮ್‌ನಲ್ಲಿ ವಿದ್ಯಾರ್ಥಿನಿಯರ ನೂರಾರು ಬೆತ್ತಲೆ ಫೋಟೊಗಳನ್ನು (Photos) ತೆಗೆದು, ವಿಡಿಯೊಗಳನ್ನು (videos) ರೆಕಾರ್ಡ್ ಮಾಡಿ, ಅವುಗಳನ್ನು ತನ್ನ ಬಾಯ್‌ಫ್ರೆಂಡ್‌ಗೆ ಶೇರ್ ಮಾಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವತಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಮೇ 5ರಂದು ಈ ಕುರಿತು ವಿದ್ಯಾರ್ಥಿಯೊಬ್ಬ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ ಪ್ರಕರಣ ಬಯಲಾಗಿದೆ. “ಪ್ರತಿಷ್ಠಿತ ಸಿಒಇಪಿ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ನೂರಾರು ವಿದ್ಯಾರ್ಥಿನಿಯರು ಬಾತ್‌ರೂಮ್‌ನಲ್ಲಿ ಸ್ನಾನ ಮಾಡುವಾಗ ಅವರ ಫೋಟೊಗಳನ್ನು ತೆಗೆದು, ವಿಡಿಯೊ ರೆಕಾರ್ಡ್ ಮಾಡಿದ್ದಾಳೆ ಎಂಬ ಭಯಾನಕ ಸಂಗತಿ ಬಯಲಾಗಿದೆ. ಇಷ್ಟಾದರೂ ವಿಶ್ವವಿದ್ಯಾಲಯವು ಪೊಲೀಸರಿಗೆ ದೂರು ನೀಡಿಲ್ಲ. ಇದರಿಂದಾಗಿ, ಗರ್ಲ್ಸ್ ಹಾಸ್ಟೆಲ್‌ನ ನೂರಾರು ವಿದ್ಯಾರ್ಥಿನಿಯರಿಗೆ ಆತಂಕ ಎದುರಾಗಿದೆ. ಅವರು ಹಾಸ್ಟೆಲ್‌ನಲ್ಲಿ ಇರಲು ಕೂಡ ಭಯಪಡುವಂತಾಗಿದೆ” ಎಂದು ವಿಡಿಯೊ ಪೋಸ್ಟ್ ಮಾಡಿದ್ದ. ಇದಾದ ಬಳಿಕ ಪ್ರಕರಣವು ಗಂಭೀರ ಸ್ವರೂಪ ಪಡೆದಿದೆ.
Students of COEP Technological University Pune have claimed that an MMS scandal happened in their girls hostel.
— पाकीट तज्ञ (मोदी का परिवार) (@paakittadnya) May 6, 2024
More than 900 objectionable videos were leaked. The warden rusticated the culprits and the case was closed. But the students are demanding Police Action.
The video… pic.twitter.com/Xtdk4ROS4O
ಯಾವಾಗ ವಿದ್ಯಾರ್ಥಿನಿಯೊಬ್ಬಳು ಪ್ರಕರಣದ ಕುರಿತು ಪೋಸ್ಟ್ ಮಾಡಿದಳೋ, ಅದಾದ ಬಳಿಕ ಜನರಿಂದ ಭಾರಿ ಟೀಕೆಗಳು ವ್ಯಕ್ತವಾದವು. ಕೊನೆಗೆ ಎಚ್ಚೆತ್ತ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಪೊಲೀಸರಿಗೆ ದೂರು ನೀಡಿದೆ. ಹಾಗೆಯೇ, ಪ್ರಕರಣದ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಿದೆ. ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರ ಪೋಷಕರು ಕೂಡ ಪ್ರಕರಣದ ಕುರಿತು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಹಾಸ್ಟೆಲ್ ವಿದ್ಯಾರ್ಥಿನಿಯರ ಪ್ರಕಾರ, ಮತ್ತೊಬ್ಬ ವಿದ್ಯಾರ್ಥನಿಯು ಪ್ರತಿದಿನ ಹಾಸ್ಟೆಲ್ ಬಾತ್‌ರೂಮ್‌ನಲ್ಲಿ ಯುವತಿಯರು ಸ್ನಾನ ಮಾಡು ಫೋಟೊಗಳನ್ನು ತೆಗೆದು, ವಿಡಿಯೊಗಳನ್ನು ಮಾಡಿ, ತನ್ನ ಬಾಯ್‌ಫ್ರೆಂಡ್‌ಗೆ ಕಳುಹಿಸುತ್ತಿದ್ದಳು ಎಂದು ತಿಳಿದುಬಂದಿದೆ. ಮೇ 1ರಂದು ವಿದ್ಯಾರ್ಥಿನಿಯು ಬಾತ್‌ರೂಮ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡುವ ಕುರಿತು ಕೆಲ ವಿದ್ಯಾರ್ಥಿನಿಯರಿಗೆ ಸುಳಿವು ಸಿಕ್ಕಿದೆ. ಕೂಡಲೇ ವಿಷಯವು ಎಲ್ಲೆಡೆ ಹರಡಿದೆ. ಇದಾದ ಬಳಿಕ ಅವರು ವಿವಿ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.