Site icon Vistara News

Heart Attack In Kanpur | ಕಾನ್ಪುರದಲ್ಲಿ ಹೃದಯಾಘಾತದಿಂದ ವಾರದಲ್ಲಿ 98, ಒಂದೇ ದಿನ 14 ಜನ ಸಾವು, ಏನಿದಕ್ಕೆ ಕಾರಣ?

Heart Attack

ಲಖನೌ: ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿ ಹೃದಯಾಘಾತದಿಂದ (Heart Attack In Kanpur) ಮೃತಪಡುವವರ ಸಂಖ್ಯೆ ಏಕಾಏಕಿ ಹೆಚ್ಚಾಗಿದೆ. ಅದರಲ್ಲೂ, ಕಳೆದ ಒಂದು ವಾರದಲ್ಲಿ ಹೃದಯಾಘಾತದಿಂದ 98 ಜನ ಮೃತಪಟ್ಟಿದ್ದಾರೆ. ಜನವರಿ 7ರಂದು 14 ಜನ ಮೃತಪಟ್ಟಿದ್ದು, ನಗರದಾದ್ಯಂತ ಆತಂಕ ಹೆಚ್ಚಾಗಿದೆ.

ಶೀತ ಗಾಳಿ, ಭಾರಿ ಚಳಿಯಿಂದಾಗಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಎಲ್‌ಪಿಎಸ್‌ ಹಾರ್ಟ್‌ ಡಿಸೀಸ್‌ ಇನ್‌ಸ್ಟಿಟ್ಯೂಟ್‌ನಲ್ಲಿಯೇ ಕಳೆದ ಶನಿವಾರ 14 ಜನ ಮೃತಪಟ್ಟಿದ್ದಾರೆ. ಅತಿಯಾದ ಚಳಿಯಿಂದಾಗಿ ಇವರಿಗೆ ಹೃದಯಾಘಾತ ಸಂಭವಿಸಿದ್ದು, ಆರು ಜನ ಚಿಕಿತ್ಸೆ ನೀಡುವಾಗಲೇ ಮೃತಪಟ್ಟರೆ, ಉಳಿದವರು ಆಸ್ಪತ್ರೆಗೆ ಕರೆತರುವುದರ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.

ಶನಿವಾರ ಒಂದೇ ದಿನ 54 ಜನರಿಗೆ ಹೃದಯಾಘಾತ ಸಂಭವಿಸಿದ್ದು, ಕಾರ್ಡಿಯಾಲಜಿ ಎಮರ್ಜನ್ಸಿಗೆ ಶಿಫ್ಟ್‌ ಮಾಡಲಾಗಿದೆ. ಹಾರ್ಟ್‌ ಡಿಸೀಸ್‌ ಇನ್‌ಸ್ಟಿಟ್ಯೂಟ್‌ ಒಂದರಲ್ಲಿಯೇ ಹೃದಯಾಘಾತಕ್ಕೀಡಾದ 604 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ. ಉತ್ತರ ಭಾರತವು ಚಳಿಗೆ ತತ್ತರಿಸಿದ್ದು, ದೆಹಲಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ | Heart attack | ಕೇವಲ 12 ವರ್ಷದ ಬಾಲಕ ಹೃದಯಾಘಾತದಿಂದ ಮೃತ್ಯು, ಮಲಗಿದ್ದಾಗಲೇ ಕಾಡಿತು ಎದೆ ನೋವು

Exit mobile version