Site icon Vistara News

Viral Video | ಅಯೋಧ್ಯಾ ಜೈಲಿಂದ ಬಿಡುಗಡೆಯಾದ 98ರ ವೃದ್ಧನಿಗೆ, ಸನ್ಮಾನಿಸಿ ಬೀಳ್ಕೊಟ್ಟ ಪೊಲೀಸ್​

98 Year Old Man Released From Ayodhya Jail Video Viral

ಅಯೋಧ್ಯಾ: 5 ವರ್ಷಗಳ ನಂತರ ಉತ್ತರ ಪ್ರದೇಶದ ಅಯೋಧ್ಯಾ ಜೈಲಿನಿಂದ ಬಿಡುಗಡೆಯಾದ 98ವರ್ಷದ ವೃದ್ಧನಿಗೆ ಪೊಲೀಸ್ ಸಿಬ್ಬಂದಿ ಠಾಣೆಯಲ್ಲಿಯೇ ಸನ್ಮಾನ ಮಾಡಿ, ಕಳಿಸಿಕೊಟ್ಟಿದ್ದಾರೆ. ಉತ್ತರ ಪ್ರದೇಶ ಕಾರಾಗೃಹ ಡಿಜಿ ಆನಂದ್​ ಕುಮಾರ್ ಅವರು ತಮ್ಮ ಟ್ವಿಟರ್​​ನಲ್ಲಿ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಅಯೋಧ್ಯಾ ಜೈಲು ಜಿಲ್ಲಾ ಅಧೀಕ್ಷಕ ಶಶಿಕಾಂತ್ ಮಿಶ್ರಾ ಅವರ ನೇತೃತ್ವದಲ್ಲಿ ಆ ವೃದ್ಧರಿಗೆ ಚೆಂದನೆಯ ವಿದಾಯ ಕೊಟ್ಟಿದ್ದನ್ನು ವಿಡಿಯೊದಲ್ಲಿ ನೋಡಬಹುದು.

ಈ ವೃದ್ಧನ ಹೆಸರು ರಾಮ್​ ಸೂರತ್​ ಎಂದಾಗಿದ್ದು, ಕೆಲವು ಕ್ರಿಮಿನಲ್​ ಪ್ರಕರಣಗಳಡಿ ಐದು ವರ್ಷಗಳ ಹಿಂದೆ ಜೈಲು ಸೇರಿದ್ದರು. ಆಗಿನಿಂದಲೂ ಅಯೋಧ್ಯಾ ಜೈಲಿನಲ್ಲಿಯೇ ಇದ್ದರು. 2022ರ ಆಗಸ್ಟ್​​ಕ್ಕೆ ಅವರ ಶಿಕ್ಷೆ ಮುಗಿಯುವುದಿತ್ತು. ಆದರೆ ಅದಕ್ಕೂ ಮೊದಲು ಮೇ ತಿಂಗಳಲ್ಲಿ ರಾಮ್​ ಸೂರತ್​​ಗೆ ಕೊವಿಡ್​ 19 ಸೋಂಕು ತಗುಲಿದ ಕಾರಣ, 90 ದಿನಗಳ ಪೆರೋಲ್​ ನೀಡಲಾಗಿತ್ತು. ಹೀಗಾಗಿ ಅವರು ಜೈಲಿನಿಂದ ಹೊರಗೆ ಇದ್ದು ಚಿಕಿತ್ಸೆ ಪಡೆದರು. ಹೀಗೆ ಪೆರೋಲ್​ ಆಧಾರದ ಮೇಲೆ ಹೊರಗಿದ್ದ ಅವಧಿಯನ್ನು ಜೈಲಿನಲ್ಲಿ ಪೂರ್ತಿಗೊಳಿಸಿ, ಈಗ ಬಿಡುಗಡೆಯಾಗಿದ್ದಾರೆ.

ಈ 98 ವರ್ಷದ ವೃದ್ಧ ಜೈಲಿನಿಂದ ಬಿಡುಗಡೆಯಾದರೂ, ಅವರನ್ನು ಕರೆದೊಯ್ಯಲು ಯಾರೂ ಬರಲಿಲ್ಲ. ಹೀಗಾಗಿ ನಮ್ಮ ಠಾಣೆಯ ಜೀಪ್​​ನಲ್ಲೇ ಅವರನ್ನು ಕರೆದುಕೊಂಡು ಹೋಗಿ, ಮನೆಗೆ ಬಿಡಲಾಯಿತು ಎಂದೂ ಕಾರಾಗೃಹ ಡಿಜಿ ತಿಳಿಸಿದ್ದಾರೆ. ಇನ್ನು ಪೊಲೀಸ್​ ಸಿಬ್ಬಂದಿ ಆ ವೃದ್ಧನನ್ನು ಕೈ ಹಿಡಿದು ಜೀಪ್​ವರೆಗೆ ಕರೆದುಕೊಂಡು ಹೋಗಿ, ಕಳಿಸಿಕೊಟ್ಟಿದ್ದಾರೆ. ಈ ವಿಡಿಯೊ ಅನೇಕರಿಗೆ ಖುಷಿಕೊಟ್ಟಿದ್ದರೆ, ಇನ್ನೂ ಕೆಲವರು ‘ಅಷ್ಟು ಹಿರಿಯ ಜೀವವನ್ನು ಯಾಕಾದರೂ ಜೈಲಿನಲ್ಲಿ ಇಟ್ಟುಕೊಳ್ಳಬೇಕಿತ್ತು’? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬ್ಯಾಂಕ್​ ಅಕೌಂಟ್​ಗೆ ಪಾವತಿಯಾದ ಕೋಟ್ಯಂತರ ರೂಪಾಯಿ ತಂದಿಟ್ಟ ಸಂಕಷ್ಟ; ದುಬೈನಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಜೈಲುಶಿಕ್ಷೆ

Exit mobile version