ಲೂಧಿಯಾನ: ಪರಿಚಯದ ಬಾಲಕಿಯೊಬ್ಬಳನ್ನು ಮನೆಗೆ ಕರೆಸಿದ ಮೂವರು ಬಾಲಕರು ಸೇರಿದಂತೆ ಐವರು ಅತ್ಯಾಚಾರ (Sexual Assault) ಮಾಡಿದ ಘಟನೆ ಲೂಧಿಯಾನದಲ್ಲಿ ನಡೆದಿದೆ. ಬಾಲಕಿಯ ತಾಯಿ ನೀಡಿದ ದೂರಿನನ್ವಯ ಪೊಲೀಸರು ಮೂವರನ್ನು ಪೋಕ್ಸೊ ಕಾಯ್ದೆಯಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನಿಬ್ಬರು ತಲೆ ಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಬಾಲಕರೆಲ್ಲರೂ ಶಾಲೆ ಹೋಗುವುದನ್ನು ಬಿಟ್ಟು ಅಲೆಯುತ್ತಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳು ಮೂರು ದಿನಗಳಿಂದ ಖಿನ್ನತೆಗೆ ಒಳಗಾಗಿರುವುದನ್ನು ಗಮನಿಸಿದ ಬಾಲಕಿಯ ತಾಯಿ ಪ್ರಶ್ನಿಸಿದ್ದಾರೆ. ಆ ವೇಳೆ ಆಕೆ ತನ್ನನ್ನು ಪರಿಚಯದ ಬಾಲಕನೊಬ್ಬ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿರುವುದನ್ನು ತಿಳಿಸಿದ್ದಳು. ಪರಿಚಯದ ಬಾಲಕ ತನ್ನ ಕಾಲೊನಿಯ ಮನೆಯೊಂದಕ್ಕೆ ಕರೆದಿದ್ದ. ನಾನು ಹೋದಾಗ ಅಲ್ಲಿ ಇನ್ನೂ ನಾಲ್ಕು ಮಂದಿ ಇದ್ದರು. ಬೆದರಿದ ನಾನು ವಾಪಸ್ ಬರಲು ಯತ್ನಿಸಿದಾಗ ಕೂಡಿ ಹಾಕಿ ಅತ್ಯಾಚಾರ ಮಾಡಿದರು ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಇದನ್ನೂ ಓದಿ : ಹಲವು ಜೀವಗಳನ್ನು ಉಳಿಸಿ ಉಸಿರು ತೊರೆದ 16 ತಿಂಗಳ ಮಗು! ಅತ್ಯಂತ ಕಿರಿಯ ವಯಸ್ಸಿನ ಅಂಗದಾನಿ
ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಕಾಲೊನಿಗೆ ಹೋಗಿದ್ದಾರೆ. ಈ ವೇಳೆ ಐವರೂ ಜತೆಯಾಗಿದ್ದರು. ಅವರಲ್ಲಿ ಮೂವರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಪೊಲೀಸರು ಸುತ್ತುವರಿದು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ಇಬ್ಬರು ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.