Site icon Vistara News

ಬಾಲಕನ ಬಟ್ಟೆ ಬಿಚ್ಚಿ, ಥಳಿಸಿ ಜೈ ಶ್ರೀರಾಮ್​ ಎನ್ನುವಂತೆ ಬೆದರಿಸಿದ ಹುಡುಗರು; ವಿಡಿಯೊ ವೈರಲ್ ಮಾಡದಂತೆ ಪೊಲೀಸ್ ಸೂಚನೆ

A boy Being Stripped And Thrashed to Chant Jai Shri Ram

#image_title

ಭೋಪಾಲ್​: 11 ವರ್ಷದ ಮುಸ್ಲಿಂ ಬಾಲಕನೊಬ್ಬನಿಗೆ ಹೊಡೆದು, ಅವನ ಬಟ್ಟೆ ಬಿಚ್ಚಿಸಿ, ಅವನ ಬಾಯಲ್ಲಿ ಜೈ ಶ್ರೀರಾಮ್(Jai Shri Ram)​, ಪಾಕಿಸ್ತಾನ್​ ಮುರದಾಬಾದ್​ ಎಂದು ಘೋಷಣೆ ಕೂಗಿಸಲು ಪ್ರಯತ್ನಿಸಿದ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದ್ದು, ಈ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಥಳಿತದ ನೋವು ತಾಳಲಾರದೆ ಆ ಹುಡುಗ ನರಳುವುದನ್ನು ಮತ್ತು ಅವನನ್ನು ಹಿಡಿದು ಥಳಿಸುತ್ತಿವವರು ಒಂದೇ ಸಮನೆ ಜೈ ಶ್ರೀರಾಮ್​ ಮತ್ತು ಪಾಕಿಸ್ತಾನ್ ಮುರ್ದಾಬಾದ್ ಎಂದು ಹೇಳುವುದನ್ನು ವಿಡಿಯೊದಲ್ಲಿ ಕೇಳಬಹುದು. ವಿಡಿಯೊ ನೋಡಿದ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ‘ಈ ಸಮಾಜ ಎತ್ತ ಸಾಗುತ್ತಿದೆ?’ ಎಂದು ಪ್ರಶ್ನಿಸುತ್ತಿದ್ದಾರೆ.

ಇಂದೋರ್​​ನ ನಿಪಾಣಿಯಾ ಎಂಬ ಏರಿಯಾದಲ್ಲಿ ಈ ಮುಸ್ಲಿಂ ಬಾಲಕ ಆಟವಾಡುತ್ತಿದ್ದ. ಅವನತ್ತ ಹೋದ ಕೆಲವು ಅಪ್ರಾಪ್ತ ವಯಸ್ಸಿನ ಹುಡುಗರು (ಬಾಲಕನಿಗಿಂತ ವಯಸ್ಸಿನಲ್ಲಿ ದೊಡ್ಡವರು) ಅವನಿಗೆ ಆಟಿಕೆ ಕೊಡಿಸುವುದಾಗಿ ಹೇಳಿದರು. ನಮ್ಮೊಂದಿಗೆ ಬಾ, ಅಲ್ಲೊಂದು ಅಂಗಡಿಯಿದೆ. ಕಡಿಮೆ ಬೆಲೆಗೆ ಚೆಂದನೆಯ ಆಟಿಕೆಗಳು ಸಿಗುತ್ತವೆ ಎಂದು ಹೇಳಿ ಕರೆದುಕೊಂಡು ಹೋದರು. ಮುಸ್ಲಿಂ ಬಾಲಕನನ್ನು ಕರೆದುಕೊಂಡು ಮಹಾಲಕ್ಷ್ಮೀ ನಗರದ ಬಳಿ ಹೋದ ಬಳಿಕ ‘ಜೈಶ್ರೀರಾಮ್​’ ಕೂಗುವಂತೆ ಬಲವಂತ ಮಾಡಿದ್ದಾರೆ. ಅವನು ಒಪ್ಪದಾಗ ಬಟ್ಟೆಯನ್ನು ಬಿಚ್ಚಿಸಿ ಥಳಿಸಿದ್ದಾರೆ. ಅದು ಹೇಗೋ ಬಾಲಕ ಅವರಿಂದ ತಪ್ಪಿಸಿಕೊಂಡು, ಮನೆಗೆ ಬಂದು ತನ್ನ ಪಾಲಕರಿಗೆ ವಿಷಯ ತಿಳಿಸಿದ್ದಾನೆ. ಅವರು ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಚುನಾವಣಾ ಹೊಸ್ತಿಲಲ್ಲಿ ಮಂಗಳೂರಲ್ಲಿ ಮತ್ತೆ ಧರ್ಮ ದಂಗಲ್;‌ ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ

ಬಾಲಕನನ್ನು ಹಿಡಿದು, ಅವನ ಬಾಯಯಲ್ಲಿ ಧಾರ್ಮಿಕ ಘೋಷಣೆ ಕೂಗಿಸಲು ಯತ್ನಿಸಿದ ಹುಡುಗರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲು ಮಾಡಿದ್ದಾರೆ. ಅವರ ವಿರುದ್ಧ ಅಪಹರಣ, ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ. ಅಷ್ಟರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೇ, ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊವನ್ನು ಯಾರೂ ಶೇರ್ ಮಾಡಿಕೊಳ್ಳಬೇಡಿ, ಈಗಾಗಲೇ ಶೇರ್​ ಮಾಡಿಕೊಂಡವರೂ ಅದನ್ನು ಡಿಲೀಟ್​ ಮಾಡಿ. ಇದು ಕೋಮು ಸೌಹಾರ್ದತೆ ಕದಡುತ್ತದೆ ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ.

Exit mobile version