ಗಾಂಧಿನಗರ: ಸುಮಾರು 10 ವರ್ಷ ಹಳೆಯ ಅತ್ಯಾಚಾರ ಪ್ರಕರಣದಲ್ಲಿ ಸ್ವಘೋಷಿತ ದೇವ ಮಾನವ ಆಸಾರಾಮ್ ಬಾಪು(Asaram Bapu)ಗೆ ಸ್ಥಳೀಯ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ. ಜತೆಗೆ, 50 ಸಾವಿರ ರೂ. ದಂಡವನ್ನು ವಿಧಿಸಿದೆ. ಸೋಮವಾರವಷ್ಟೇ ಗಾಂಧಿನಗರ ಸೆಷನ್ಸ್ ಕೋರ್ಟ್ ರೇಪ್ ಕೇಸಿನಲ್ಲಿ ಆಸಾರಾಮ್ ಬಾಪು ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಸೂರತ್ ಮೂಲದ ಮಹಿಳೆಯನ್ನು ಅಹಮದಾಬಾದ್‌ನ ಮೊಟೇರಾದಲ್ಲಿರುವ ಆಶ್ರಮದಲ್ಲಿ ಅತ್ಯಾಚಾರ ಮಾಡಿರುವ ಆರೋಪವನ್ನು ಆಸಾರಾಮ್ ಬಾಪು ಎದುರಿಸುತ್ತಿದ್ದರು. ಇನ್ನೂ ಕೆಲ ಪ್ರಕರಣಗಳಲ್ಲಿ ಈಗಾಗಲೇ ಆಸಾರಾಮ್‌ಗೆ ಶಿಕ್ಷೆ ಪ್ರಕಟವಾಗಿದೆ.
2018ರ ಏಪ್ರಿಲ್ 25ರಂದು ಜೋಧ್‌ಪುರ ಕೋರ್ಟ್ ಆಸಾರಾಮ್‌ಗೆ ಬಾಲಕಿಯ ಅತ್ಯಾಚಾರ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೇ ಕೇಸ್‌ನಲ್ಲಿ ಆತನ ಇಬ್ಬರು ಸಹಚರರಿಗೆ 20 ವರ್ಷ ಜೈಲು ಶಿಕ್ಷೆಯಾಗಿದೆ. 2013ರ ಆಗಸ್ಟ್ 15ರ ರಾತ್ರಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಬಾಲಕಿ ದೂರು ದಾಖಲಿಸಿದ್ದಳು. ಉತ್ತರಪ್ರದೇಶ ಮೂಲದ ಬಾಲಕಿ, ಆಸಾರಾಮ್‌ನ ಆಶ್ರಮದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಳು.
ಇದನ್ನೂ ಓದಿ: 15 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಎಸಗಿ, ಆಕೆ ಗರ್ಭ ಧರಿಸುವಂತೆ ಮಾಡಿದ ತಂದೆಗೆ ಜೀವನಪರ್ಯಂತ ಜೈಲು
2002ರಲ್ಲಿ ದಾಖಲಾದ ಮತ್ತೊಂದು ರೇಪ್ ಕೇಸ್‌ನಲ್ಲೂ ಆಸಾರಾಮ್ ಬಾಪುಗೆ 20 ವರ್ಷ ಜೈಲು ಶಿಕ್ಷೆಯಾಗಿದೆ. ಗುಜರಾತ್‌ನ ಸೂರತ್‌ನಲ್ಲೂ ಒಂದು ರೇಪ್ ಕೇಸ್ ದಾಖಲಾಗಿದೆ. 2013ರ ಸೆಪ್ಟೆಂಬರ್ 1ರಂದು ಇಂದೋರ್‌ನಲ್ಲಿ ಆಸಾರಾಮ್‌ನನ್ನು ಬಂಧಿಸಲಾಗಿತ್ತು. ಬಳಿಕ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿತ್ತು.