ನವದೆಹಲಿ: ಆಗಸ್ಟ್ 10ರಂದು ತೆರೆ ಕಂಡಿರು ಜೈಲರ್ ಸಿನಿಮಾ (Jailer Movie) ಅದ್ಭುತವಾಗಿ ಪ್ರದರ್ಶವಾಗುತ್ತಿದೆ. ಗಳಿಕೆಯಲ್ಲಿ ಹಲವು ದಾಖಲೆಗಳನ್ನು ಮುರಿಯುತ್ತಿದೆ. ಜೈಲರ್ ಪಾತ್ರಧಾರಿ, ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಅವರು ಎಂದಿನಂತೆ ತಮ್ಮ ಅಧ್ಯಾತ್ಮ ಪ್ರಯಾಣವನ್ನು ಆಗಸ್ಟ್ 9ರಿಂದಲೇ ಆರಂಭಿಸಿದ್ದಾರೆ. ಇದರ ಭಾಗವಾಗಿ ಅವರು ರಿಷಿಕೇಶ್(Rishikesh), ಬದ್ರಿನಾಥ್ (Badrinath), ದ್ವಾರಕಾ (Dwaraka) ಮತ್ತು ಬಾಬಜೀ ಗುಹೆಗಳಿಗೆ ಭೇಟಿ ನೀಡುತ್ತಿದೆ. ಈ ಮಧ್ಯೆ, ರಜನಿ ಅವರನ್ನು ಭೇಟಿಯಾಗಲು ಅವರ ಅಭಿಮಾನಿಯೊಬ್ಬ (Rajanikanth’s Fan) ಚೆನ್ನೈಯಿಂದ ಉತ್ತಾರಖಂಡಕ್ಕೆ (Chennai to Uttarakhand) 55 ದಿನಗಳ ಕಾಲ ನಡೆದುಕೊಂಡೇ ಬಂದಿದ್ದಾನೆ!
ರಜನಿಕಾಂತ್ ಅವರು ಮೊದಲಿಗೆ ಸ್ವಾಮಿ ದಯಾನಂದ ಸರಸ್ವತಿ ಆಶ್ರಮಕ್ಕೆ ಭೇಟಿ ನೀಡಿ, ಗುರುಗಳಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವೇಳೆ, ಚಿಕ್ಕ ಅಧ್ಯಾತ್ಮಿಕ ಭಾಷಣವನ್ನೂ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದಾದ ಬಳಿಕ, ರಜನಿಕಾಂತ್ ಅವರು ಬದ್ರಿನಾಥ್‌ಗೆ ತೆರಳಿದ್ದಾರೆ. ಅಲ್ಲಿ ಅವರಿಗೆ ಭರ್ಜರಿ ಸ್ವಾಗತ ದೊರೆತಿದೆ. ವ್ಯಾಸ ಗುಹೆಗೆ ಭೇಟಿ ನೀಡಿದ ಬಳಿಕ, ಆಲ್ಮೋಸ್ಟ್ 2 ಗಂಟೆ ನಡೆದು ಮಹಾಅವತಾರ್ ಬಾಬಾಜಿ ಗುಹೆ ತಲುಪಿ, ಧ್ಯಾನ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Jailer Movie: ‘ಪೊನ್ನಿಯನ್ ಸೆಲ್ವನ್-2’ ದಾಖಲೆ ಧೂಳಿಪಟ, ಅತಿ ಹೆಚ್ಚು ಗಳಿಕೆ ಮಾಡಿದ ‘ಜೈಲರ್’!
55 ದಿನ ನಡೆದುಕೊಂಡು ಬಂದ ಅಭಿಮಾನಿ
ರಜನಿ ಅವರನ್ನು ಭೇಟಿ ಮಾಡಲು ಅವರ ಅಭಿಮಾನಿಯೊಬ್ಬ ಚೆನ್ನೈನಿಂದ ಉತ್ತರಾಖಂಡಕ್ಕೆ 55 ದಿನಗಳ ಕಾಲ ನಡೆದುಕೊಂಡು ಬಂದಿದ್ದಾನೆ. ಆ ಅಭಿಮಾನಿಗೆ ರಜನಿ ಅವರು ಆರ್ಥಿಕವಾಗಿಯೂ ಸಹಾಯ ಮಾಡಿದರು. ತಣ್ಣನೆಯ ವಾತಾವರಣದಲ್ಲಿ ಅವನು ಮರದ ಕೆಳಗೆ ಮಲಗಿದ್ದಾಗ ರಜನಿ ಸನ್ಯಾಸಿಯೊಂದಿಗೆ ಸಣ್ಣ ಸ್ಥಳಕ್ಕೆ ಹೋಗಲು ಸಹಾಯ ಮಾಡಿದರು.
ಸಿನಿಮಾದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.