Site icon Vistara News

Viral Photo | ತಿಂದಿದ್ದು ಹೆಚ್ಚಾಗಿ ನಿದ್ದೆ ಮಾಡಿದೆ; ಟ್ರೇನಿಂಗ್​​ನಲ್ಲಿ ಅಶಿಸ್ತು ತೋರಿದ ಹೆಡ್​ಕಾನ್​ಸ್ಟೆಬಲ್ ಕೊಟ್ಟ​ ಸ್ಪಷ್ಟನೆ ಇದು !

Head Constable

ಉತ್ತರ ಪ್ರದೇಶದ ಸುಲ್ತಾನಪುರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ಹೆಡ್​ಕಾನ್​ಸ್ಟೆಬಲ್​ವೊಬ್ಬರು ಎಡವಟ್ಟು ಮಾಡಿ, ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ತಪ್ಪಿಗೆ ಅವರು ಮೇಲಧಿಕಾರಿಗಳಿಗೆ ಕೊಟ್ಟ ಸ್ಪಷ್ಟನೆ ಪತ್ರ ವೈರಲ್ ಆಗುತ್ತಿದ್ದು, ‘ಅಬ್ಬಾ ಈ ಪೊಲೀಸಪ್ಪನ ಧೈರ್ಯವೇ !’ ಎಂದು ಉದ್ಘರಿಸುವಂತೆ ಮಾಡಿದೆ.

ತರಬೇತಿ ಶಾಲೆಯೆಂದರೆ ಅಲ್ಲಿ ವಿಪರೀತ ಶಿಸ್ತಿರುತ್ತದೆ. ಪೊಲೀಸ್​ ಸಿಬ್ಬಂದಿ ಮೈಮರೆಯುವಂತಿಲ್ಲ, ಊಟದಿಂದ ಬೆಳಗ್ಗೆ ಎದ್ದಾಗಿನಿಂದ, ಸಂಜೆವರೆಗೆ ಎಲ್ಲಿಯೂ, ಯಾವ ವಿಚಾರದಲ್ಲೂ ನಿರ್ಲಕ್ಷ್ಯ, ಅಶಿಸ್ತು ತೋರಿಸುವಂತಿಲ್ಲ. ಆದರೆ ಸುಲ್ತಾನಪುರ ತರಬೇತಿ ಶಾಲೆಯಲ್ಲಿ ಟ್ರೇನಿಂಗ್​ ಪಡೆಯುತ್ತಿದ್ದ ಹೆಡ್​ಕಾನ್​ಸ್ಟೆಬಲ್​ ರಾಮ್​ ಶರೀಫ್​ ಯಾದವ್​ ಅವರು ಸೋಮವಾರ, ತರಬೇತಿ ಮಧ್ಯೆ, ಹಗಲಲ್ಲೇ ಮಲಗಿ ನಿದ್ದೆ ಮಾಡಿಬಿಟ್ಟಿದ್ದರು. ಅದನ್ನು ನೋಡಿದ ಅವರ ಕಮಾಂಡರ್​, ‘ಹೀಗೆ ಟ್ರೇನಿಂಗ್​ ಮಧ್ಯೆ ನಿದ್ದೆ ಮಾಡುವುದೆಲ್ಲ ನಿರ್ಲಕ್ಷ್ಯದ ಪರಮಾವಧಿ. ಹಾಗಾಗಿ ನೀವಿದಕ್ಕೆ ಸ್ಪಷ್ಟನೆ ಕೊಡಬೇಕು’ ಎಂದು ಹೇಳಿದ್ದರು.

ಅದರಂತೆ ಹೆಡ್​ಕಾನ್​ಸ್ಟೆಬಲ್​ ಸ್ಪಷ್ಟನೆ ಕೊಟ್ಟಿದ್ದಾರೆ. ‘ನಾನು ಲಖನೌದಿಂದ ಈ ತರಬೇತಿ ಕೇಂದ್ರಕ್ಕೆ ಬಂದಿದ್ದೇನೆ. ಇಲ್ಲಿಗೆ ಬಂದ ನಂತರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ತಿನ್ನಲು ಸಾಕಷ್ಟು ಆಹಾರ ಸಿಗುತ್ತಿಲ್ಲ. ನನ್ನ ಹೊಟ್ಟೆ ಪೂರ್ತಿಯಾಗಿ ತುಂಬುತ್ತಲೂ ಇರಲಿಲ್ಲ. ಹೀಗಾಗಿ ಸೋಮವಾರ ಬೆಳಗ್ಗೆ ಎದ್ದು 25 ರೊಟ್ಟಿ, ಒಂದು ಪ್ಲೇಟ್​ ಅನ್ನ, ಎರಡು ಬಟ್ಟಲು​ ದಾಲ್​ ಮತ್ತು ಒಂದು ಬಟ್ಟಲು ತರಕಾರಿ ತಿಂದೆ. ಹೀಗೆ ಬೆಳಗ್ಗೆ ಬೆಳಗ್ಗೆ ನನ್ನ ಹೊಟ್ಟೆ ಭರ್ತಿಯಾದ ಕಾರಣ, ನನ್ನಲ್ಲಿ ಆಲಸ್ಯ ಮೂಡಿತು. ನಿದ್ದೆಯೂ ಬಂತು’ ಎಂದು ರಾಮ್ ಶರೀಫ್​ ಯಾದವ್​ ತಮ್ಮ ಮೇಲಧಿಕಾರಿಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ ‘ಇನ್ನೊಮ್ಮೆ ಇಂಥ ತಪ್ಪು ಮಾಡೋದಿಲ್ಲ, ದಯವಿಟ್ಟು ಕ್ಷಮಿಸಿ’ ಎಂದು ಕ್ಷಮೆಯನ್ನೂ ಕೇಳಿದ್ದಾರೆ.

ಇದನ್ನೂ ಓದಿ: Viral Photo | ಕೈಲಾಸ ಪರ್ವತದ ಟಾಪ್​ ಫ್ಲೋರ್​​ನಲ್ಲಿ ಹುಟ್ಟಿದ ಗಣೇಶನ ಆಧಾರ್​ ಕಾರ್ಡ್​ ಇದು !

Exit mobile version