ಬೆಂಗಳೂರು: ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಶನ್ನಲ್ಲಿ ನವೆಂಬರ್ 11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಸಿರುನಿಶಾನೆ ತೋರಿಸಿದ್ದಾರೆ. ದೇಶದಲ್ಲಿಯೇ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆಯನ್ನು ಹೊಂದಿದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆಧುನಿಕ ಸೌಕರ್ಯಗಳನ್ನೂ ಹೊಂದಿದೆ. ಇದೀಗ ಲೋಕಾರ್ಪಣೆಗೊಂಡಿರುವ ಬೆಂಗಳೂರು-ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ದೇಶದ ಐದನೇ ವಂದೇ ಭಾರತ್ ಟ್ರೇನ್ ಆಗಿದೆ.
ಹೀಗೆ ನೂತನವಾಗಿ ಲೋಕಾರ್ಪಣೆಗೊಂಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಒಂದು ವಿಶೇಷ ಸನ್ನಿವೇಶ ನಿರ್ಮಾಣವಾಗಿತ್ತು. ರೈಲು ಲೋಕಾರ್ಪಣೆಯಾಗುತ್ತಿದ್ದಂತೆ ಅದರಲ್ಲಿ 12 ವರ್ಷದ ಬಾಲಕನೊಬ್ಬ ವಂದೇ ಮಾತರಂ ಹಾಡನ್ನು ಕೊಳಲಿನಲ್ಲಿ ನುಡಿಸಿದ್ದಾನೆ. ಈ ವಿಡಿಯೊವನ್ನು ರೈಲ್ವೆ ಇಲಾಖೆ ಅಧಿಕಾರಿ ಅನಂತ್ ರೂಪನಗುಡಿ ಎಂಬುವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೊಳಲು ಬಾರಿಸಿದ ಹುಡುಗನ ಹೆಸರು ಅಪ್ರಮೇಯ ಶೇಷಾದ್ರಿ ಎಂದಾಗಿದ್ದು, ಬೆಂಗಳೂರು ನಿವಾಸಿಯಾಗಿದ್ದಾರೆ. ಈ ವೇಳೆ ಒಂದಷ್ಟು ಪ್ರಯಾಣಿಕರು ಆ ರೈಲಿನ ಮೇಲೆ ಕುಳಿತಿದ್ದರೆ, ಮತ್ತೊಂದಷ್ಟು ಜನ ಹುಡುಗನ ಬೆನ್ನಹಿಂದೆ ನಿಂತಿದ್ದನ್ನು ನೋಡಬಹುದು. ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಬಹುವಾಗಿ ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: Modi in Bengaluru | ಮೋದಿ ಚಾಲನೆ ನೀಡಿದ ವಂದೇ ಭಾರತ್ ರೈಲಿನ ಡೀಟೇಲ್ಸ್ ಇಲ್ಲಿದೆ