Site icon Vistara News

ಭಾರತ್ ಜೋಡೋ ಯಾತ್ರೆ ಸೇರಿಕೊಂಡ ಆದಿತ್ಯ ಠಾಕ್ರೆ; ರಾಹುಲ್​ ಗಾಂಧಿ ಪಕ್ಕದಲ್ಲಿ ಹೆಜ್ಜೆಹಾಕಿದ ಉದ್ಧವ್​ ಪುತ್ರ

Aaditya Thackeray Joined Bharat Jodo Yatra In Maharashtra

ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್​ ಜೋಡೋ ಯಾತ್ರೆ ಮಹಾರಾಷ್ಟ್ರವನ್ನು ತಲುಪಿದೆ. ರಾಹುಲ್ ಗಾಂಧಿ ಜತೆ ಸ್ಥಳೀಯ ಪ್ರಮುಖರು, ಜನಸಾಮಾನ್ಯರು, ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಹೆಜ್ಜೆಹಾಕುತ್ತಿದ್ದಾರೆ. ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ನವೆಂಬರ್​ 7ರ ರಾತ್ರಿ ಪ್ರವೇಶ ಮಾಡಿರುವ ಭಾರತ್​ ಜೋಡೋ ಯಾತ್ರೆ ಸದ್ಯ ಹಿಂಗೋಲಿಯಲ್ಲಿದ್ದು, ಅಲ್ಲಿ ಶಿವಸೇನೆ ನಾಯಕ, ಮಾಜಿ ಸಚಿವ ಆದಿತ್ಯಠಾಕ್ರೆ (ಮಾಜಿ ಸಿಎಂ ಉದ್ಧವ್ ಠಾಕ್ರೆ ಪುತ್ರ) ಕೂಡ ರಾಹುಲ್​ ಗಾಂಧಿ ಜತೆ ಹೆಜ್ಜೆಹಾಕಿದ್ದಾರೆ. ಅಷ್ಟೇ ಅಲ್ಲ, ಶಿವಸೇನೆ ಪ್ರಮುಖರಾದ ಅಂಬಾದಾಸ್​ ದನ್ವೆ, ಸಚಿನ್​ ಅಹಿರ್​ ಮತ್ತಿತರರೂ ಭಾರತ್ ಜೋಡೋ ಯಾತ್ರೆ ಸೇರಿಕೊಂಡಿದ್ದಾರೆ. ‘ಭಾರತ್ ಜೋಡೋ ಯಾತ್ರೆ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಇದು ರಾಜಕೀಯಕ್ಕೂ ಮೀರಿದ ಪರಿಕಲ್ಪನೆಯನ್ನು ಒಳಗೊಂಡಿದೆ.

ಭಾರತ್​ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಆದಿತ್ಯ ಠಾಕ್ರೆ ಅವರು ರಾಹುಲ್​ ಗಾಂಧಿ ಪಕ್ಕವೇ ನಡೆದಿದ್ದಾರೆ. ಜನರೆಡೆಗೆ ಕೈಬೀಸುತ್ತ ಹೆಜ್ಜೆಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಈಗ ಶಿವಸೇನೆ ಇಬ್ಭಾಗವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಶಿಂಧೆ ಬಣ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿದೆ. ಇತ್ತ ಉದ್ಧವ್​ ಠಾಕ್ರೆ ಬಣ ಅಧಿಕಾರ ಕಳೆದುಕೊಂಡಿದ್ದರೂ, ಕಾಂಗ್ರೆಸ್​ನೊಂದಿಗೆ ಸ್ನೇಹವನ್ನು ಉಳಿಸಿಕೊಂಡಿದೆ. ಅದಕ್ಕೆ ಸಾಕ್ಷಿಯಾಗಿ ಈಗ ಆದಿತ್ಯ ಠಾಕ್ರೆ ಭಾರತ್​ ಜೋಡೋ ಯಾತ್ರೆ ಸೇರಿದ್ದಾರೆ.

ಭಾರತ್​ ಜೋಡೋ ಯಾತ್ರೆಗೆ ಸೇರಿಕೊಳ್ಳುವಂತೆ ಕಾಂಗ್ರೆಸ್​ನಿಂದ ಉದ್ಧವ್ ಠಾಕ್ರೆಯವರಿಗೂ ಆಹ್ವಾನ ಹೋಗಿತ್ತು. ಆದರೆ ಅವರಿನ್ನೂ ಆಗಮಿಸಿಲ್ಲ. ಇನ್ನು ಎನ್​ಸಿಪಿ ನಾಯಕರಾದ ಸುಪ್ರಿಯಾ ಸುಲೆ, ಜಿತೇಂದ್ರ ಅಹ್ವದ್​ ಕೂಡ ರಾಹುಲ್​ ಗಾಂಧಿ ಪಾದಯಾತ್ರೆಯಲ್ಲಿ ಸೇರಿಕೊಂಡು, ಸ್ವಲ್ಪ ದೂರ ಹೆಜ್ಜೆಹಾಕಿದ್ದರು. ಮಹಾರಾಷ್ಟ್ರದಲ್ಲಿ ಒಟ್ಟು 382 ಕಿಮೀ ದೂರವನ್ನು ಯಾತ್ರಿಗಳು ಕ್ರಮಿಸಬೇಕಿದೆ. ಇಲ್ಲಿ ಒಟ್ಟು 15 ವಿಧಾನಸಭಾ ಕ್ಷೇತ್ರಗಳನ್ನು ಮತ್ತು ಆರು ಲೋಕಸಭಾ ಕ್ಷೇತ್ರಗಳನ್ನು ಯಾತ್ರೆ ಒಳಗೊಳ್ಳಲಿದ್ದು, ನವೆಂಬರ್​ 20ಕ್ಕೆ ಮಹಾರಾಷ್ಟ್ರದಿಂದ ನಿರ್ಗಮಿಸಲಿದೆ.

ಇದನ್ನೂ ಓದಿ: Bharat Jodo Yatra | ಭಾರತ್​ ಜೋಡೋ ಯಾತ್ರೆ ಮಧ್ಯೆ ರಾಹುಲ್​ ಗಾಂಧಿ ಡಾನ್ಸ್​, ಡೋಲು ವಾದನ !

Exit mobile version