ನವದೆಹಲಿ: ಚಂಡೀಗಢ ಮೇಯರ್ ಚುನಾವಣೆಯಲ್ಲಿ (Chandigarh Mayor Election) ಆಪ್ ಅಭ್ಯರ್ಥಿ ಅಧಿಕೃತವಾಗಿ ಗೆದ್ದ ಅಭ್ಯರ್ಥಿ (AAP Candidate Winner) ಎಂದು ಸುಪ್ರೀಂ ಕೋರ್ಟ್ (Supreme Court) ಘೋಷಿಸಿದೆ. ಈ ಮೂಲಕ ಭಾರತೀಯ ಜನತಾ ಪಾರ್ಟಿ (BJP Party) ಭಾರೀ ಮುಖಭಂಗ ಎದುರಿಸಿದೆ. ಕಳೆದ ತಿಂಗಳು ನಡೆದ ಮೇಯರ್ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಬಿಜೆಪಿಯ ಪದಾಧಿಕಾರಿ ಅನಿಲ್ ಮಸಿಹ್ (Anil Maish) ಅವರು, ಆಪ್ ಅಭ್ಯರ್ಥಿ ಪರವಾಗಿ ಚಲಾವಣೆಯಾಗಿದ್ದ 8 ಮತಗಳನ್ನು ವಿರೂಪಗೊಳಿಸಿ, ಅಸಿಂಧು ಘೋಷಿಸಿದ್ದರು. ಪರಿಣಾಮ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಈ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಆಪ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಮಧ್ಯೆ, ಚುನಾವಣಾಧಿಕಾರಿಯಾಗಿ ಅನಿಲ್ ಮಸಿಹ್ ನ್ಯಾಯಾಂಗ ನಿಂದನೆಯ ಪ್ರಕರಣ ಎದುರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ.
Chandigarh mayoral polls: Supreme Court takes into note that all invalidated eight ballots have votes cast in favour of the AAP Mayor Candidate Kuldeep Kumar. https://t.co/Eg3WDMRiPJ
— ANI (@ANI) February 20, 2024
ಆಪ್ ಅಭ್ಯರ್ಥಿ ಕುಲ್ದೀಪ್ ಕುಮಾರ್ ಅಧಿಕೃತ ಗೆದ್ದ ಅಭ್ಯರ್ಥಿ ಎಂದು ಘೋಷಿಸುವ ಮೊದಲು ಸುಪ್ರೀಂ ಕೋರ್ಟ್, ಚಂಡೀಗಢ ಮೇಯರ್ ಚುನಾವಣೆಯಲ್ಲಿ ಅಸಿಂಧುಗೊಳಿಸಲಾಗಿದ್ದ ಮತಗಳನ್ನು ಸಿಂಧುಗೊಳಿಸಿತ್ತು. ಈ ಎಂಟೂ ಮತಗಳು ಆಪ್ ಅಭ್ಯರ್ಥಿ ಕುಲ್ದೀಪ್ ಕುಮಾರ್ ಪರವಾಗಿ ಚಲಾವಣೆಯಾಗಿದ್ದವು.
ಮಂಗಳವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್, ಕಳೆದ ತಿಂಗಳು ನಡೆದ ಮೇಯರ್ ಚುನಾವಣೆಯ ಮರು ಮತ ಎಣಿಕೆಗೆ ಸೂಚಿಸಲಾಗುವುದು ಎಂದು ಹೇಳಿತ್ತು. ಚುನಾವಣೆ ವೇಳೆ, ಆಪ್ ಪರವಾಗಿ ಚಲಾವಣೆಯಾಗಿದ್ದ ಎಲ್ಲ ಎಂಟು ಮತಗಳು ವಿರೂಪಗೊಂಡಿದ್ದವು ಎಂದು ಚುನಾವಣಾಧಿಕಾರಿಯಾಗಿದ್ದ ಅನಿಲ್ ಮಸಿಹ್ ಅವರು ಹೇಳಿದ್ದರು. ಚುನಾವಣೆ ವೇಳೆ, ಅಧಿಕಾರಿಯು ಮತ ಪತ್ರಗಳನ್ನು ಗುರುತು ಮಾಡುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ನೇತೃತ್ವದ ಪೀಠವು, ಎಲ್ಲ ಎಂಟು ಮತಪತ್ರಗಳನ್ನು ಮರು ಪರಿಶೀಲಿಸಿತು. ಅಲ್ಲದೇ, ಅನಿಲ್ ಮಸಿಹ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಚುನಾವಣಾಧಿಕಾರಿಯಾಗಿದ್ದ ಮಸಿಹ್ ಅವರು ಹೇಗೆ ಎಂಟು ಮತಪತ್ರಗಳನ್ನು ವಿರೂಪಗೊಳಿಸಿದರು ಎಂಬುದನ್ನು ವಿಚಾರಣೆ ಮಾಡುವ ಮೂಲಕ ಸುಪ್ರೀಂ ಕೋರ್ಟ್ ತನ್ನ ವಿಚಾರಣೆಯನ್ನು ಆರಂಭಿಸಿದು. ವಿರೂಪಗೊಳಿಸಿದ ಮತಪತ್ರಗಳ ಖಾತ್ರಿಗಾಗಿ ಹಾಗೆ ಮಾಡಿದೆ ಎಂದು ಮಸಿಹ್ ಹೇಳಿದರು.
ನಿನ್ನೆ ಈ ಬ್ಯಾಲೆಟ್ ಪೇಪರ್ ಅನ್ನು ವಿರೂಪಗೊಳಿಸಲಾಗಿದೆ ಎಂದು ನೀವು ಹೇಳಿದ್ದೀರಿ. ನಮಗೆ ಎಲ್ಲಿ ತೋರಿಸುತ್ತೀರಾ?” ಅವರು ಎಂಟು ಮತಪತ್ರಗಳನ್ನು ಮಸಿಹ್ ಮತ್ತು ಅವರ ವಕೀಲರಿಗೆ ಮತ್ತು ವಿಚಾರಣೆಯಲ್ಲಿ ಇತರ ಪಕ್ಷಗಳಿಗೆ ತೋರಿಸಿ ಮುಖ್ಯ ನ್ಯಾಯಮೂರ್ತಿ ಕೇಳಿದರು.
ಎಲ್ಲಾ ಎಂಟು ಮಂದಿ ಕುಲದೀಪ್ ಕುಮಾರ್‌ಗೆ (ಎಎಪಿ ಅಭ್ಯರ್ಥಿ) ಮುದ್ರೆಯನ್ನು ಒತ್ತಿದ್ದಾರೆ. ಮತಗಳು ಕುಮಾರ್‌ಗೆ ಚಲಾವಣೆಯಾದವು. ಅವರು (ಮಸಿಹ್) ಏನು ಮಾಡುತ್ತಾರೆ ಎಂದರೆ… ಅವರು ಒಂದೇ ಸಾಲನ್ನು ಹಾಕುತ್ತಾರೆ. ವೀಡಿಯೊದಲ್ಲಿ ನೋಡಿದಂತೆ ಕೇವಲ ಒಂದು ಸಾಲು ಎಂದು ಪೀಠ ಹೇಳಿತು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಕುಮಾರ್ ಪರ ನ್ಯಾಯವಾದಿ ಅಭಿಷೇಕ್ ಸಿಂಘ್ವಿ ಅವರು, ಮಸಿಹ್ ಅವರ ಕೃತ್ಯವು ನ್ಯಾಯಾಂಗ ನಿಂದನೆಯಾಗುತ್ತದೆ. ಇದೊಂದು ಹೀನಾತಿಹೀನ ಅಪರಾಧ ಎಂದು ಅವರು ಹೇಳಿದರು. ಕೋರ್ಟ್ ಕೂಡ ನ್ಯಾಯಂಗ ನಿಂದನೆ ಎಂದು ಅಭಿಪ್ರಾಯಪಟ್ಟಿತು.
ಈ ಸುದ್ದಿಯನ್ನೂ ಓದಿ: Supreme Court: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಆಫ್ ಪರ ಚಲಾವಣೆಯಾಗಿದ್ದ 8 ಮತಗಳು ಸಿಂಧು