ನವದೆಹಲಿ: ಸಂಸತ್ ಆವರಣದಲ್ಲಿ ರಾಜ್ಯಸಭೆ ಆಮ್ ಆದ್ಮಿ ಪಕ್ಷದ ಸದಸ್ಯ ರಾಘವ್ ಛಡ್ಡಾ (Raghav Chadha) ಅವರಿಗೆ ಕಾಗೆಯೊಂದು ಕುಕ್ಕಿದೆ. ಸಂಸತ್ ಅಧಿವೇಶನದ ಕಲಾಪ ಮುಂದೂಡಿದ ಬಳಿಕ ಸಂಸತ್ ಆವರಣಕ್ಕೆ ಬಂದ ರಾಘವ್ ಛಡ್ಡಾ ಅವರು ಮೆಟ್ಟಿಲುಗಳ ಮೇಲೆ ಬಂದು ಫೋನ್‌ನಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ ಕಾಗೆಯೊಂದು ಅವರಿಗೆ ಕುಕ್ಕಿ ಹೋಗಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ರಾಘವ್ ಛಡ್ಡಾ ಅವರು ಫೊನ್‌ನಲ್ಲಿ ಮಾತನಾಡುವಾಗ ಏಕಾಏಕಿ ಹಾರಿ ಬಂದ ಕಾಗೆಯು, ಅವರಿಗೆ ಕುಕ್ಕಿದೆ. ಇದರಿಂದ ಕೆಲಸ ನಿಮಿಷಗಳವರೆಗೆ ರಾಘವ್ ಛಡ್ಡಾ ಅವರು ಗಲಿಬಿಲಿಗೊಂಡಿದ್ದರು. ಕಾಗೆ ಕುಕ್ಕಿದ ಕಾರಣ ಅವರಿಗೆ ಯಾವುದೇ ಗಾಯಗಳು ಆಗಿಲ್ಲ ಎಂದು ತಿಳಿದುಬಂದಿದೆ.
झूठ बोले कौवा काटे 👇
— BJP Delhi (@BJP4Delhi) July 26, 2023
आज तक सिर्फ सुना था, आज देख भी लिया कौवे ने झूठे को काटा ! pic.twitter.com/W5pPc3Ouab
ಟಾಂಗ್ ಕೊಟ್ಟ ಬಿಜೆಪಿ
ರಾಘವ್ ಛಡ್ಡಾ ಅವರಿಗೆ ಕಾಗೆ ಕುಕ್ಕಿರುವ ಫೋಟೊ ವೈರಲ್ ಆಗುತ್ತಲೇ ಬಿಜೆಪಿ ಟಾಂಗ್ ನೀಡಿದೆ. “ಜೂಟ್ ಬೋಲೆ ಕೌವಾ ಕಾಟೆ” (ಸುಳ್ಳು ಹೇಳಿದವರಿಗೆ ಕಾಗೆ ಕುಕ್ಕುತ್ತದೆ-Jooth Bole Kauwa Kaate) ಎಂಬ ಗಾದೆಮಾತನ್ನು ಬಳಸಿ ಬಿಜೆಪಿ ದೆಹಲಿ ಘಟಕವು ಕುಟುಕಿದೆ. ಅಲ್ಲದೆ, “ನಾವು ಇದುವರೆಗೆ ಸುಳ್ಳು ಹೇಳಿದವರಿಗೆ ಕಾಗೆ ಕುಕ್ಕುತ್ತದೆ ಎಂಬ ಮಾತನ್ನು ಕೇಳಿದ್ದೇವೆ. ಆದರೆ, ಈಗ ಸುಳ್ಳು ಹೇಳುವವರಿಗೆ ಕಾಗೆ ಕುಕ್ಕುತ್ತದೆ ಎಂಬುದನ್ನು ನೋಡಿದ್ದೇವೆ” ಎಂದು ವ್ಯಂಗ್ಯ ಮಾಡಿದೆ.
ಇದನ್ನೂ ಓದಿ: Raghav Chadha : ಬಾಲಿವುಡ್‌ಗೂ ಎಂಟ್ರಿ ಕೊಡ್ತಾರಾ ಆಪ್ ಎಂಪಿ ರಾಘವ್ ಛಡ್ಡಾ? ಫೋಟೊ ವೈರಲ್
ದೆಹಲಿ ಬಿಜೆಪಿ ಘಟಕವು ಫೋಟೊವನ್ನು ಟ್ವೀಟ್ ಮಾಡುತ್ತಲೇ ನೂರಾರು ಜನ ಪ್ರತಿಕ್ರಿಯಿಸಿದ್ದಾರೆ. “ಕಾಗೆ ಕುಕ್ಕಲು ಕೂಡ ನರೇಂದ್ರ ಮೋದಿ ಕಾರಣರಾಗಿದ್ದಾರೆ. ಕಾಗೆಯೂ ಮೋದಿ ಜತೆ ಕೈಜೋಡಿಸಿದೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, “ಪರಿಣಿತಿ ಚೋಪ್ರಾ ಜತೆ ರಾಘವ್ ಛಡ್ಡಾ ಮಾತನಾಡುತ್ತಿದ್ದರು ಎನಿಸುತ್ತದೆ” ಎಂಬುದಾಗಿ ಕಾಲೆಳೆದಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ, “ನರೇಂದ್ರ ಮೋದಿ ಅವರು ಇದುವರೆಗೆ ಒಂದೂ ಸುಳ್ಳು ಹೇಳಿಲ್ಲ. ಹಾಗಾಗಿ ಅವರಿಗೆ ಕಾಗೆ ಕುಕ್ಕಿಲ್ಲ” ಎಂದು ವ್ಯಂಗ್ಯ ಮಾಡಿದ್ದಾರೆ.