Site icon Vistara News

Sanjay Singh: ರಾಜ್ಯಸಭೆಯಿಂದ ಆಪ್ ಸಂಸದ ಸಂಜಯ್ ಸಿಂಗ್ ಸಸ್ಪೆಂಡ್

Sanjay Singh

ನವದೆಹಲಿ: ರಾಜ್ಯಸಭೆ ಅಧ್ಯಕ್ಷರಿಗೆ (Rajya Sabha Chairman) ಅಗೌರವ ತೋರಿಸಿದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ(AAP)ಯ ಸಂಸದ ಸಂಜಯ್ ಸಿಂಗ್ (Sanjay Singh) ಅವರನ್ನು ಉಳಿದ ಮಳೆಗಾಲದ ಅಧಿವೇಶನದವರೆಗೆ ಅಮಾನತು (Suspend) ಮಾಡಲಾಗಿದೆ. ಸಂಜಯ್ ಸಿಂಗ್ ಅವರನ್ನು ಅಮಾನತುಗೊಳಿಸುವ ಸಂಬಂಧ ಸದನದ ನಾಯಕ ಪಿಯೂಷ್ ಗೋಯೆಲ್ (Piyush Goyal) ಅವರು ನಿರ್ಣಯ ಮಂಡಿಸಿದರು. ಈ ನಿರ್ಣಯಕ್ಕೆ ಸದನವು ಧ್ವನಿಮತದ ಮೂಲಕ ಒಪ್ಪಿಗೆ ನೀಡಿತು. ನಿರ್ಣಯವನ್ನು ಅಂಗೀಕರಿಸುವ ಮುನ್ನ ರಾಜ್ಯಸಭೆ ಚೇರ್ಮನ್ನರಾದ ಜಗದೀಪ್ ಧನಕರ್ (Rajya Sabha chairman Jagdeep Dhankhar) ಅವರು ಸಿಂಗ್ ಅವರ ವರ್ತನೆಯನ್ನು ಖಂಡಿಸಿದರು.

ಆಪ್ ಸದಸ್ಯ ಸಂಜಯ್ ಸಿಂಗ್ ಅವರನ್ನು ಸಸ್ಪೆಂಡ್ ಮಾಡಿದ ಬಳಿಕ ಸದನದ ಕಲಾಪವನ್ನು 2 ಗಂಟೆಯವರೆಗೂ ಚೇರ್ಮನ್ನರಾದ ಜಗದೀಪ್ ಧನಕರ್ ಅವರು ಮುಂದೂಡಿದರು. ಸಂಜಯ್ ಸಿಂಗ್ ಅವರ ಅಮಾನತನ್ನು ಖಂಡಿಸಿ ಪ್ರತಿಪಕ್ಷಗಳು ಗದ್ದಲ ಮಾಡುತ್ತಿದ್ದರಿಂದ ಅನಿವಾರ್ಯವಾಗಿ ಚೇರ್ಮನ್ನರು ಕಲಾಪವನ್ನು ಮುಂದೂಡಬೇಕಾಯಿತು. ಈ ಮಧ್ಯೆ, ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರು ಹೇಳಿಕೆಯನ್ನು ನೀಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದವನ್ನು ಮುಂದುವರಿಸಿದವು.

ಈ ಸುದ್ದಿಯನ್ನೂ ಓದಿ: Assembly Session : 10 ಬಿಜೆಪಿ ಸದಸ್ಯರು ಸಸ್ಪೆಂಡ್; ಎಳೆದು ಹೊರಹಾಕಿದ ಮಾರ್ಷಲ್‌

ಮಧ್ಯಾಹ್ನ 12 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರ ಹಿಂಸಾಚಾರ ಕುರಿತು ಸದನದಲ್ಲಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿದರು. ಗಲಾಟೆಯ ನಡುವೆ ರಾಜ್ಯಸಭೆ ಚೇರ್ಮನ್ ಜಗದೀಪ್ ಧನಕರ್ ಅವರು, ಪ್ರಶ್ನೋತ್ತರ ಅವಧಿ ಕಲಾಪವನ್ನು ನಡೆಸುವುದಾಗಿ ಘೋಷಿಸಿದರು. ಅದರಂತೆ, ಕೆಲವು ನಿಮಿಷಗಳ ಪ್ರಶ್ನೋತ್ತರ ಕಲಾಪವನ್ನು ನಡೆಸಲಾಯಿತು. ಈ ವೇಳೆ, ಆಪ್ ನಾಯಕ ಸಂಜಯ್ ಸಿಂಗ್ ಅವರು ಸ್ಪೀಕರ್ ಪೀಠದೆದುರು ಬಂದು, ಅಧ್ಯಕ್ಷರತ್ತ ಬೆರಳು ತೋರಿಸಲಾರಂಭಿಸಿದುರ. ತಮ್ಮ ಸ್ಥಾನಕ್ಕೆ ವಾಪಸ್ ಹೋಗುವಂತೆ ಸೂಚಿಸಲಾಯಿತು. ಅವರು ಹೋಗದೇ ಇದ್ದಾಗ, ಸಂಜಯ್ ಅವರನ್ನು ಅಮಾನತು ಮಾಲಾಯಿತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version