Site icon Vistara News

AAP vs Delhi Lt Governor: ಡಿಸ್ಕಾಂಗಳಿಗೆ ಕೇಜ್ರಿವಾಲ್‌ ನಾಮಿನೇಟ್‌ ಮಾಡಿದ ಹೆಸರು ರದ್ದುಗೊಳಿಸಿದ ಸಕ್ಸೇನಾ, ಮತ್ತೆ ಜಟಾಪಟಿ ಶುರು

AAP VS Lt Governor

#image_title

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಗಾಗ ಲೆಫ್ಟಿನೆಂಟ್‌ ಗವರ್ನರ್‌ ಹಾಗೂ ಆಡಳಿತಾರೂಢ ಆಪ್‌ (AAP vs Delhi Lt Governor) ಮಧ್ಯೆ ಜಟಾಪಟಿ ನಡೆಯುತ್ತಲೇ ಇರುತ್ತವೆ. ಈಗ ಖಾಸಗಿ ವಿದ್ಯುತ್‌ ಸರಬರಾಜು ಕಂಪನಿಗಳಾದ ಡಿಸ್ಕಾಂಗಳಿಗೆ ಆಪ್‌ ಸರ್ಕಾರ ನಾಮನಿರ್ದೇಶನ ಮಾಡಿದ ಇಬ್ಬರ ಹೆಸರುಗಳನ್ನು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ವಜಾಗೊಳಿಸಿದ್ದು, ಮತ್ತೆ ಜಟಾಪಟಿ ಶುರುವಾಗಿದೆ.

ಡಿಸ್ಕಾಂಗಳಾದ ಬಿವೈಪಿಎಲ್‌ ಹಾಗೂ ಬಿಆರ್‌ಪಿಎಲ್‌ಗಳಿಗೆ ಆಪ್‌ ಸರ್ಕಾರವು ಪಕ್ಷದ ವಕ್ತಾರ ಜಾಸ್ಮಿನ್‌ ಶಾ ಹಾಗೂ ಆಪ್‌ ಸಂಸದ ಎನ್‌.ಡಿ.ಗುಪ್ತಾ ಪುತ್ರ ನವೀನ್‌ ಎನ್‌.ಡಿ ಗುಪ್ತಾ ಅವರ ಹೆಸರುಗಳನ್ನು ನಾಮನಿರ್ದೇಶನ ಮಾಡಿತ್ತು. ಆದರೆ, ಅಕ್ರಮವಾಗಿ ಸರ್ಕಾರವು ಹೆಸರುಗಳನ್ನು ನಾಮಿನೇಟ್‌ ಮಾಡಿದೆ ಎಂದು ಸಕ್ಸೇನಾ ಅವರು ನಾಮನಿರ್ದೇಶನವನ್ನು ರದ್ದುಗೊಳಿಸಿದ್ದಾರೆ. ಈಗ ನಾಮನಿರ್ದೇಶಿತರ ಬದಲು ಸರ್ಕಾರದ ಹಿರಿಯ ಅಧಿಕಾರಿಗಳು ಅವರ ಜಾಗದಲ್ಲಿ ಕೆಲಸ ಮಾಡಲಿದ್ದಾರೆ.

ಖಂಡನೆ ವ್ಯಕ್ತಪಡಿಸಿದ ಆಪ್‌

ವಿ.ಕೆ.ಸಕ್ಸೇನಾ ಅವರ ಕ್ರಮವನ್ನು ಆಪ್‌ ಖಂಡಿಸಿದೆ. “ದೆಹಲಿ ಸರ್ಕಾರಕ್ಕೆ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ನಾಮನಿರ್ದೇಶನ ಮಾಡುವ ಅಧಿಕಾರವಿದೆ. ಆದರೆ, ಸಕ್ಸೇನಾ ಅವರ ಕ್ರಮವು ಅಸಾಂವಿಧಾನಿಕವಾಗಿದೆ. ಅವರು ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿದ್ದಾರೆ. ಇದು ಕಾನೂನುಬಾಹಿರ ಕ್ರಮವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: Delhi Liquor Policy: ಆಪ್​ ವಿರುದ್ಧ ಬಿಜೆಪಿ ತೀವ್ರ ಪ್ರತಿಭಟನೆ; ಅರವಿಂದ್​ ಕೇಜ್ರಿವಾಲ್​ ಕಳ್ಳ ಎಂದು ಘೋಷಣೆ

Exit mobile version