ನವದೆಹಲಿ: ಕಾಂಗ್ರೆಸ್ (Congress Party) ನೇತೃತ್ವದ ಇಂಡಿಯಾ ಕೂಟಕ್ಕೆ (INDIA Bloc) ಮತ್ತೊಂದು ಹೊಡೆತ ಬಿದ್ದಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸ್ವತಂತ್ರ ಸ್ಪರ್ಧೆಯನ್ನು ಘೋಷಿಸಿದ ಬೆನ್ನಲ್ಲೇ ಆಪ್ (aam aadmi party) ನಾಯಕ ಹಾಗೂ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ (CM Arvind Kejriwal) ಅವರು ಕೂಡ, ಚಂಡೀಗಢ ಹಾಗೂ ಪಂಜಾಬ್‌ನಲ್ಲಿ (Punjab and Chandigarh) ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರು ಅಧಿಕೃತವಾಗಿ ಕೂಟದಿಂದ ಹೊರ ಬಿದ್ದಂತಾಗಿದೆ(Lok Sabha Election 2024).
ಪಂಜಾಬ್‍ನ 13 ಹಾಗೂ ಚಂಡೀಗಢನ ಒಂದು ಲೋಕಸಭೆ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಾರ್ಟಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಘೋಷಣೆ ಮಾಡಿದ್ದಾರೆ.
AAP राष्ट्रीय संयोजक @ArvindKejriwal का ऐलान‼️
— AAP (@AamAadmiParty) February 10, 2024
Punjab: 13
Chandigarh: 1
सभी 14 Loksabha Seats पर चुनाव लड़ेगी AAP
“हाथ जोड़ कर लोगों से आशीर्वाद माँगता हूँ,
झाड़ू का बटन दबाकर AAP को 14 की 14 Seats जिताएं।” pic.twitter.com/zzQL1DlTnR
ದೆಹಲಿ ಮುಖ್ಯಮಂತ್ರಿಯ ಹೇಳಿಕೆಯು ಪ್ರತಿಪಕ್ಷಗಳ ಗುಂಪಿನಲ್ಲಿ ಮತ್ತಷ್ಟು ಗೊಂದಲವನ್ನು ಹೆಚ್ಚಿಸಲಿದೆ. ಈಗಾಗಲೇ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಪಕ್ಷವು ಪಶ್ಚಿಮ ಬಂಗಾಳದಲ್ಲಿ ತನ್ನ ಪಕ್ಷವು ಏಕಾಂಗಿಯಾಗಿ ಹೋಗಲಿದೆ ಎಂದು ಘೋಷಣೆ ಮಾಡಿದ್ದಾರೆ. ಈ ಕೂಟ ರಚನೆಯ ಪ್ರಮುಖರಲ್ಲಿ ಒಬ್ಬರಾಗಿದ್ದ ನಿತೀಶ್ ಕುಮಾರ್ ಅವರು ಕುಮಾರ್ ಅವರು ಕಳೆದ ತಿಂಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ ಬದಲಾಗಿದ್ದಾರೆ.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಒಪ್ಪಂದದ ಲಕ್ಷಣಗಳು ಕಂಡು ಬಂದಿದ್ದರೂ ಉತ್ತರ ಪ್ರದೇಶದಲ್ಲಿ ಇನ್ನೂ ಪರಿಸ್ಥಿತಿ ಅಸ್ಪಷ್ಟವಾಗಿದೆ. ಆದರೆ, ಮತ್ತೊಂದು ಇಂಡಿಯಾ ಕೂಟದ ಮಿತ್ರಪಕ್ಷ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳವು ಎನ್‌ಡಿಎ ಜೊತೆ ಕೈಜೋಡಿಸಲಿದೆ. ಜಯಂತ್ ಚೌಧರಿ ಅವರ ತಾತ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿದೆ. ಈ ಘೋಷಣೆ ಬಳಿಕ ಜಯಂತ್ ಚೌಧರಿ ಅವರು ಎನ್‌ಡಿಎ ಜತೆ ಹೋಗುವುದಾಗಿ ಘೋಷಣೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Lok Sabha Pre Poll Survey: ಬಿಹಾರದಲ್ಲಿ ಎನ್‌ಡಿಎಗೆ 32, ಇಂಡಿಯಾ ಕೂಟಕ್ಕೆ 8 ಸ್ಥಾನ ಎಂದ ಸಮೀಕ್ಷೆ