Site icon Vistara News

ರಣವೀರ್‌ ಸಿಂಗ್‌ ನಗ್ನತೆಗೂ, ಹಿಜಾಬ್‌ಗೂ ನಂಟು ಕಲ್ಪಿಸಿ ಆಕ್ರೋಶ ಹೊರಹಾಕಿದ ರಾಜಕೀಯ ನಾಯಕ !

Ranveer Singh

ಲಖನೌ: ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಇತ್ತೀಚೆಗೆ ಬೆತ್ತಲಾಗಿ ಫೋಟೋ ಶೂಟ್‌ ಮಾಡಿಸಿದ್ದಾರೆ. ಅವರ ನಗ್ನ ದೇಹದ ಫೋಟೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುವ ಜತೆಗೆ ಚರ್ಚೆಯನ್ನೂ ಹುಟ್ಟುಹಾಕಿದೆ. ಆದರೆ ಅದೇ ಫೋಟೋಕ್ಕೆ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ರಾಜಕೀಯ ಸ್ಪರ್ಶ ಕೊಟ್ಟಿದ್ದಾರೆ. ʼರಣವೀರ್‌ ನಗ್ನತೆಗೂ..ಮುಸ್ಲಿಂ ಯುವತಿಯರು ಧರಿಸುವ ಹಿಜಾಬ್‌ʼಗೂ ಲಿಂಕ್‌ ಮಾಡಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ʼಬೆತ್ತಲಾಗುವುದಕ್ಕೆ ಕಲೆ-ಸ್ವಾತಂತ್ರ್ಯ ಎಂದು ಹೆಸರು ಕೊಡುತ್ತೀರಿ, ಆದರೆ ಇಸ್ಲಾಂ ಸಂಪ್ರದಾಯದಡಿ ಹಿಜಾಬ್‌ ಧರಿಸುವುದನ್ನು ಯಾಕೆ ದಬ್ಬಾಳಿಕೆ ಮತ್ತು ತಾರತಮ್ಯ ಎಂದು ಪರಿಗಣಿಸುತ್ತೀರಿ?ʼ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದ ಕರಾವಳಿಯ ಕಾಲೇಜಿನಲ್ಲಿ ಶುರುವಾದ ಹಿಜಾಬ್‌ ವಿವಾದ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಕಾಲೇಜು ಕ್ಲಾಸ್‌ ರೂಮಿಗೆ ಬರುವಾಗ ಹಿಜಾಬ್‌ ತೆಗೆದಿಡಿ ಎಂದು ಕಾಲೇಜು ಪ್ರಾಂಶುಪಾಲರು ಹೇಳಿದ್ದೇ ದೊಡ್ಡಮಟ್ಟದ ವಿರೋಧ, ಪ್ರತಿಭಟನೆಗೆ ಕಾರಣವಾಗಿತ್ತು. ಅನೇಕ ಮುಸ್ಲಿಂ ಮುಖಂಡರು ಕಾಲೇಜಿನ ಈ ಕ್ರಮವನ್ನು ಖಂಡಿಸಿದ್ದರು. ಹಿಜಾಬ್‌ ಎಂಬುದು ಮುಸ್ಲಿಂ ಮಹಿಳೆಯರಿಗೆ ತುಂಬ ಅಗತ್ಯ. ಆದರೆ ಅದನ್ನು ಧರಿಸಬೇಡಿ ಎನ್ನುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎಂಬರ್ಥದ ಹೇಳಿಕೆಗಳನ್ನು ಅನೇಕರು ಕೊಟ್ಟಿದ್ದರು. ಸದ್ಯ ದೇಶದಲ್ಲಿ ಹಿಜಾಬ್‌ ಹೋರಾಟ, ಗಲಾಟೆ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. ಆದರೆ ಎಸ್‌ಪಿ ಅಬು ಅಜ್ಮಿ ಮಾತ್ರ ಅದನ್ನು ಮರೆತಂತೆ ಇಲ್ಲ.

ರಣವೀರ್‌ ಸಿಂಗ್ನ ನಗ್ನ ಫೋಟೋವನ್ನು ಮತ್ತು ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧವೆಂಬ ಬರಹಗಳುಳ್ಳ ಫೋಟೋವನ್ನ ಕೊಲ್ಯಾಜ್‌ ಮಾಡಿ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿರುವ ಅವರು, ʼಬೆತ್ತಲೆ ದೇಹಕ್ಕೆ ಕಲೆ ಮತ್ತು ಸ್ವಾತಂತ್ರ್ಯ ಎನ್ನುತ್ತಾರೆ. ಆದರೆ ಮುಸ್ಲಿಮರು ಅವರ ಸಂಸ್ಕೃತಿ ಪಾಲಿಸಲು ಅವಕಾಶ ಕೊಡುವುದಿಲ್ಲ. ಮೈಮುಚ್ಚುವ ಹಿಜಾಬ್‌ ದಬ್ಬಾಳಿಕೆ, ಧಾರ್ಮಿಕ ತಾರತಮ್ಯವೆಂಬ ಹೆಸರು ಪಡೆದಿದೆ. ಇದ್ಯಾವ ಸ್ವರೂಪದ ಸಮಾಜʼ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Ranveer Singh | ಸಾವಿರ ಜನರೆದುರೂ ಬೆತ್ತಲಾಗಬಲ್ಲೆ ಎಂದ ರಣವೀರ್‌ ಸಿಂಗ್‌

Exit mobile version