Site icon Vistara News

Sambhaji Bhide | ಹಣೆಗೆ ಕುಂಕುಮ ಹಚ್ಚಿಲ್ಲ, ನಿನ್ನ ಜತೆ ಮಾತನಾಡಲ್ಲ! ಹೀಗೆ ಹೇಳಿ ವಿವಾದಕ್ಕೆ ಸಿಲುಕಿದ್ದು ಯಾರು?

Sambhaji Bhide

ಮುಂಬೈ: ಮಹಾರಾಷ್ಟ್ರದ ಪ್ರಖ್ಯಾತ ಹಾಗೂ ವಿವಾದಾತ್ಮಕ ಸಾಮಾಜಿಕ ಕಾರ್ಯಕರ್ತ ಸಂಭಾಜಿ ಭಿಡೆ (Sambhaji Bhide) ಅವರು, ಹಣೆಗೆ ಕುಂಕುಮ ಹಚ್ಚಿಕೊಳ್ಳದ ಪತ್ರಕರ್ತೆಯೊಂದಿಗೆ ಮಾತನಾಡಲು ನಿರಾಕರಿಸುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ದಕ್ಷಿಣ ಮುಂಬೈನಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಭೇಟಿಯಾಗಿ ಹೊರ ಬಂದ ಸಮಾಂಭಾಜಿ ಭಿಡೆ ಅವರನ್ನು ಪತ್ರಕರ್ತೆ ಮಾತನಾಡಿಸಲು ಮುಂದಾದಾಗ ಈ ಪ್ರತಿಕ್ರಿಯೆ ನೀಡಿದ್ದಾರೆ. ಈ ಎಲ್ಲ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಡಿಯೋ ಬೈಟ್ ತೆಗೆದುಕೊಳ್ಳಲು ಬರುವ ಮುಂಚೆ ಹಣೆಗೆ ಕುಂಕುಮ ಹಚ್ಚಿಕೊಂಡ ಬರಬೇಕು ಎಂದು ಸಂಭಾಜಿ ಭಿಡೆ ಹೇಳುವ ಮಾತುಗಳು ವಿಡಿಯೋದಲ್ಲಿ ದಾಖಲಾಗಿವೆ. ಇದೇ ಕಾರಣಕ್ಕೆ ಪತ್ರಕರ್ತೆ ಜತೆ ಮಾತನಾಡಲು ನಿರಾಕರಿಸಿದ್ದಾರೆ. ಮಾತ್ರವಲ್ಲದೇ, ಮಹಿಳೆ ಭಾರತಮಾತೆಗೆ ಸಮಾನ. ಕುಂಕುಮವಿಲ್ಲದೇ ಆಕೆ ವಿಧವೆ ತರಹ ಕಾಣಬಾರದು. ಭಾರತ ಮಾತೆ ವಿಧವೆಯಲ್ಲ ಎಂದೂ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಂದ್ರಶೇಖರ್ ಅವರು ಭಿಡೆಗೆ ನೋಟಿಸ್ ನೀಡಿ ಈ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ನೀಡಿದ್ದಾರೆ. ಕರ್ಮಠ ಸಂಪ್ರದಾಯಿವಾದಿಯಾಗಿರುವ ಭಿಡೆ ತಮ್ಮ ಮಾತಿನ ಮೂಲಕ ಅನೇಕ ಬಾರಿ ವಿವಾದಕ್ಕೆ ಕಾರಣವಾಗಿದ್ದಾರೆ. 2008ರಲ್ಲಿ ತಮ್ಮ ತೋಟದ ಮಾವು ಸೇವಿಸಿದ ಮಹಿಳೆಯರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆಂದು ಹೇಳುವ ಮೂಲಕ ಕೆಂಗೆಣ್ಣಿಗೆ ಗುರಿಯಾಗಿದ್ದರು.

ಇದನ್ನೂ ಓದಿ | Priyank Kharge | ʻಲಂಚ-ಮಂಚʼ ಸಂಕಷ್ಟ; ಮಹಿಳಾ ಆಯೋಗಕ್ಕೆ ಎಎಪಿ ದೂರು

Exit mobile version