Site icon Vistara News

FTII President: ನಟ, ನಿರ್ದೇಶಕ ಆರ್ ಮಾಧವನ್ ಎಫ್‌ಟಿಐಐನ ನೂತನ ಅಧ್ಯಕ್ಷ

R Madhavan

ನವದೆಹಲಿ: ಇತ್ತೀಚೆಗಷ್ಟೇ ಅತ್ಯುತ್ತಮ ಸಿನಿಮಾ (Best Film) ರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವ ‘ರಾಕೆಟ್ರಿ’ ಚಿತ್ರದ ನಿರ್ದೇಶಕ, ನಟ ಆರ್‌ ಮಾಧವನ್ (Actor R Madhavan) ಅವರನ್ನು ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (President of Film and Television Institute of India – FTII) ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅವರು ಎಫ್‌ಟಿಐಐನ ಆಡಳಿತ ಮಂಡಳಿಯ ಚೇರ್ಮನ್ನರಾಗಿಯೂ ಕೆಲಸ ಮಾಡಲಿದ್ದಾರೆ. ಈ ವಿಷಯವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ (Union Minister Anurag Thakur) ಅವರು ಘೋಷಣೆ ಮಾಡಿದ್ದು, ನಟ ಮಾಧವನ್ ಧನ್ಯವಾದ ತಿಳಿಸಿದ್ದಾರೆ. ಪ್ರಸಿದ್ಧ ಚಿತ್ರಕರ್ಮಿ ಶೇಖರ್ ಕಪೂರ್ (Shekhar Kapur) ಅವರು ಈಗ ಪ್ರಸ್ತುತ ಎಫ್‌ಟಿಐಐ ಅಧ್ಯಕ್ಷರಾಗಿದ್ದಾರೆ(FTII President). ಅವರು 2020ರ ಸೆಪ್ಟೆಂಬರ್ 30ರಂದು ನೇಮಕಗೊಂಡಿದ್ದರು. ಶೇಖರ್ ಅವರ ಸ್ಥಾನಕ್ಕೆ ಈಗ ಮಾಧವನ್ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಎಕ್ಸ್‌(ಈ ಹಿಂದಿ ಟ್ವಿಟರ್) ವೇದಿಕೆಯಲ್ಲಿ ಪೋಸ್ಟ್ ಮಾಡಿ, ಈ ವಿಷಯವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಖಚಿತಪಡಿಸಿದ್ದಾರೆ. ಅಲ್ಲದೇ, ಎಫ್‌ಟಿಐಐನ ಅಧ್ಯಕ್ಷರಾಗಿ ನೇಮಕಗೊಂಡಿರುವ ಹಾಗೂ ರಾಷ್ಟ್ರಪ್ರಶಸ್ತಿ ಗೆದ್ದಿರುವ ನಟ ಮಾಧವನ್‌ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.

ಎಫ್‌ಟಿಐಐನ ಅಧ್ಯಕ್ಷರಾಗಿ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದಕ್ಕಾಗಿ ಆರ್ ಮಾಧವನ್‌ ಅವರಿಗೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಅಪಾರ ಅನುಭವ ಮತ್ತು ಬಲವಾದ ನೈತಿಕತೆಯು ಈ ಸಂಸ್ಥೆಯನ್ನು ಶ್ರೀಮಂತಗೊಳಿಸುತ್ತದೆ, ಧನಾತ್ಮಕ ಬದಲಾವಣೆಗಳನ್ನು ತರುತ್ತದೆ ಮತ್ತು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ನನಗೆ ಖಾತ್ರಿಯಿದೆ. ನಿಮಗೆ ನನ್ನ ಶುಭಾಶಯಗಳು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: BBC documentary: ಪುಣೆ FTIIನಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ; ಫೋಟೋ ಶೇರ್​ ಮಾಡಿದ ವಿದ್ಯಾರ್ಥಿಗಳು, ಗೊತ್ತೇ ಇಲ್ಲ ಎಂದ ಸೆಕ್ಯೂರಿಟಿ

ಅನುರಾಗ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಎಫ್‌ಟಿಐಐನ ನೂತನ ಅಧ್ಯಕ್ಷ, ನಟ ಮಾಧವನ್ ಅವರು, ನನಗೆ ಈ ಗೌರವ ನೀಡಿದ್ದಕ್ಕೆ ತುಂಬ ಧನ್ಯವಾದಗಳು. ಎಲ್ಲರ ನಿರೀಕ್ಷೆಗಳನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುವೆ ಎಂದು ಅವರು ಹೇಳಿದ್ದಾರೆ. ರಾಕೆಟ್ರಿ-ನಂಬಿಯಾರ್ ಎಫೆಕ್ಟ್ ಸಿನಿಮಾದ ಮೂಲಕ ನಟ ಮಾಧವನ್ ಅವರು ನಿರ್ದೇಶನಕ್ಕೆ ಇಳಿದಿದ್ದರು. ಅವರ ತಮ್ಮ ಮೊದಲ ಪ್ರಯತ್ನದಲ್ಲೇ ರಾಷ್ಟ್ರ ಪ್ರಶಸ್ತಿ ಕೂಡ ಗಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version