Site icon Vistara News

Viral News | ನರೇಂದ್ರ ಮೋದಿ ಸುಂದರ ಕಲಾಕೃತಿ ರಚಿಸಿದ ನಟ ಮಯೂರ್‌ ವಕಾನಿ, ಅದ್ಭುತ ಎಂದ ಜನ

Modi Sculpture

ಮುಂಬೈ: ತಾರಕ್‌ ಮೆಹ್ತಾ ಕಾ ಉಲ್ಟಾ ಚಷ್ಮಾ (Taarak Mehta Ka Ooltah Chashmah) ಶೋ ಖ್ಯಾತಿಯ ನಟ ಮಯೂರ್‌ ವಕಾನಿ (Mayur Vakani) ಅವರು ಉತ್ತಮ ಶಿಲ್ಪ ಕಲಾವಿದರೂ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅವರು ರಚಿಸುವ ಕಲಾಕೃತಿ, ಕೆತ್ತನೆಯ ಕಸೂರಿಯು ಜನಮೆಚ್ಚುಗೆ ಪಡೆದಿದೆ. ಇದರ ಬೆನ್ನಲ್ಲೇ ಮಯೂರ್‌ ವಕಾನಿ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕಲಾಕೃತಿಯೊಂದನ್ನು ರಚಿಸಿದ್ದು, ಜನರಿಂದ ಭಾರಿ ಮೆಚ್ಚುಗೆ (Viral News) ಪಡೆದಿದೆ.

ನರೇಂದ್ರ ಮೋದಿ ಅವರ ಶಿಲ್ಪ ಕಲಾಕೃತಿಯ ಫೋಟೊಗಳನ್ನು ಮಯೂರ್‌ ವಕಾನಿ ಅವರು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. ಸೆಲ್ಫಿ ವಿತ್‌ ಮೋದಿ ಎಂಬ ಒಕ್ಕಣೆ ಹಾಕಿ ಫೋಟೊಗಳನ್ನು ಪೋಸ್ಟ್‌ ಮಾಡಿದ್ದು, ಫೋಟೊಗಳು ವೈರಲ್‌ ಆಗಿವೆ. ನರೇಂದ್ರ ಮೋದಿ ಅವರು ಕುಳಿತಿರುವ ಭಂಗಿಯಲ್ಲಿ ರಚಿಸಿದ ಕಲಾಕೃತಿ ಇದಾಗಿದ್ದು, ನಿಜವಾಗಿಯೂ ಮೋದಿ ಅವರೇ ಕುಳಿತಿದಿದ್ದಾರೇನೋ ಎಂಬಂತೆ ಭಾಸವಾಗುತ್ತದೆ. ಹಾಗಾಗಿ, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Viral Video | ವಂದೇ ಮಾತರಂ..; ನೂತನ ವಂದೇ ಭಾರತ್​ ರೈಲಿನಲ್ಲಿ ಬೆಂಗಳೂರು ಹುಡುಗನ ಕೊಳಲು ವಾದನ

Exit mobile version