ಚೆನ್ನೈ: ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಸಂಸ್ಥಾಪಕ ವಿಜಯಕಾಂತ್ (Vijayakanth Passes Away) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಗುರುವಾರ (ಡಿ.28) ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಗುರುವಾರ ಮುಂಜಾನೆ ಅವರ ಪಕ್ಷದ ಡಿಎಂಡಿಕೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ.
ವಿಜಯಕಾಂತ್ ಅವರಿಗೆ 71 ವರ್ಷ ವಯಸಾಗಿತ್ತು. ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಕೋವಿಡ್‌ನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್ ನಂತರ ಅವರಿಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದು, ಅವರ ಪತ್ನಿ ಪ್ರೇಮಲತಾ ಅವರು ಕೆಲವು ಹಿಂದೆ ಪಕ್ಷದ ಅಧಿಕಾರವನ್ನು ವಹಿಸಿಕೊಂಡಿದ್ದರು.
ಇದನ್ನೂ ಓದಿ: ಶಿಕ್ಷಣಪ್ರೇಮಿ, ಏಕೀಕರಣ ಹೋರಾಟಗಾರ ಮಾರುತಿರಾವ್ ಮಾಲೆ ನಿಧನ
Some Men Never Die! Rest in Power Captain! 💔 #Vijayakanth pic.twitter.com/hpDHho0wuX
— Madan Gowri (@madan3) December 28, 2023
Heart Breaking News For All Kollywood Fans😭💔#RIPVijayakanth #Vijayakanthpic.twitter.com/84ggQPGgrW
— Mᴜʜɪʟツ𝕏 (@MuhilThalaiva) December 28, 2023
ಕಾಜಾ ನಿರ್ದೇಶಿಸಿದ ಇನಿಕ್ಕುಮ್ ಇಳಮೈ (1979) ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರು. ವೃತ್ತಿಜೀವನದಲ್ಲಿ, ವಿಜಯಕಾಂತ್ ಅವರು ಅಮ್ಮನ್ ಕೋಯಿಲ್ ಕಿಜಕ್ಕಲೆ, ಚಿನ್ನ ಗೌಂಡರ್, ವೈದೇಗಿ ಕತಿರುಂಡಾಲ್, ವಲ್ಲರಸು, ವನತೈ ಪೋಲಾ, ಕ್ಯಾಪ್ಟನ್ ಪ್ರಭಾಕರನ್, ಉಳವು ತುರೈ, ಕಣ್ಣುಪಾದ ಪೋಕುತಯ್ಯ, ರಮಣ, ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2015ರ ತಮಿಳು ಚಲನಚಿತ್ರ ‘ಸಗಪ್ತಂ’ನಲ್ಲಿ ಕೊನೆಯದಾಗಿ ಕಾಣಿಸಿಕೊಂಡರು.