ಹೈದರಾಬಾದ್: ಡ್ರಗ್ಸ್ ಪ್ರಕರಣಕ್ಕೆ (Drugs Case) ಸಂಬಂಧಿಸಿದಂತೆ ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಅವರ ಸಹೋದರ ಅಮನ್ ಪ್ರೀತ್ ಸಿಂಗ್ (Aman Preet Singh) ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ. ಹೈದರಾಬಾದ್ ಹೊರವಲಯದಲ್ಲಿರುವ ರಾಜೇಂದ್ರ ನಗರದಲ್ಲಿ ರಾಜೇಂದ್ರ ನಗರ ಪೊಲೀಸರು ಹಾಗೂ ವಿಶೇಷ ಕಾರ್ಯಾಚರಣೆಗಳ ತಂಡವು (SOT) ಜಂಟಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 2 ಕೋಟಿ ರೂ. ಮೌಲ್ಯದ 200 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಅಮನ್ ಪ್ರೀತ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಹೈದರಾಬಾದ್‌ಗೆ ಮಾದಕವಸ್ತುವನ್ನು ಸಾಗಿಸಿದ್ದು, ಹಣಕಾಸು ವಹಿವಾಟು ಸೇರಿ ಹಲವು ಆರೋಪಗಳಲ್ಲಿ ಅಮನ್ ಪ್ರೀತ್ ಸಿಂಗ್ ಅವರನ್ನು ಬಂಧಿಸಲಾಗಿದೆ. ಅಮನ್ ಪ್ರೀತ್ ಸಿಂಗ್ ಸೇರಿ 30 ಜನರ ಬಳಿ ಡ್ರಗ್ಸ್ ಇರುವ ಕುರಿತು ನಿಖರ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಪ್ರಕರಣದಲ್ಲಿ, ಅಮನ್ ಪ್ರೀತ್ ಸಿಂಗ್, ಅನಿಕೇತ್ ರೆಡ್ಡಿ, ಪ್ರಸಾದ್, ಮಧುಸೂದನ್ ಹಾಗೂ ನಿಖಿಲ್ ದಮನ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
Heroine Rakul Preet Singh's younger brother arrested in drug case
— Congress for Telangana (@Congress4TS) July 15, 2024
డ్రగ్స్ కేసులో హీరోయిన్ రకుల్ ప్రీత్ సింగ్ తమ్ముడు అరెస్ట్
అమన్ దీప్ గ్యాంగ్ నుంచి 2 కోట్ల రూపాయల విలువైన డ్రగ్స్ను పట్టుకొన్నా సైబరాబాద్ పోలీసులు.#SayNotoDrugs pic.twitter.com/sRDWQUqidx
ಐವರನ್ನೂ ಬಂಧಿಸಿರುವ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಹಾಜರುಪಡಿಸಲಿದ್ದಾರೆ. ವೈದ್ಯಕೀಯ ಪರೀಕ್ಷೆಯ ಬಳಿಕ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಅಮನ್ ಪ್ರೀತ್ ಸಿಂಗ್ ಕೂಡ ಡ್ರಗ್ಸ್ ಸೇವಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. “ಮೊದಲಿಗೆ ಐವರು ಗ್ರಾಹಕರನ್ನು ನಾವು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಯುರಿನ್ ಟೆಸ್ಟ್ ಕಿಟ್ ಮೂಲಕ ತಪಾಸಣೆ ನಡೆಸಿದಾಗ, ಪಾಸಿಟಿವ್ ರಿಪೋರ್ಟ್ ಬಂದಿತು. ಬಳಿಕ ಅವರನ್ನು ವಶಕ್ಕೆ ಪಡೆಯಲಾಯಿತು. ಈಗ ಐವರನ್ನೂ ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗುವುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿಗಿ ನೀಡಿದ್ದಾರೆ.
2021 ಹಾಗೂ 2022ರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸದಂತೆ ರಕುಲ್ ಪ್ರೀತ್ ಸಿಂಗ್ ಅವರನ್ನು ಇದಕ್ಕೂ ಮೊದಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇ.ಡಿ ಅಧಿಕಾರಿಗಳು ರಕುಲ್ ಪ್ರೀತ್ ಸಿಂಗ್ ಅವರಿಗೆ ಸಮನ್ಸ್ ನೀಡಿ, ಅವರನ್ನು ಕರೆಸಿಕೊಂಡು ಹೇಳಿಕೆ ದಾಖಲಿಸಿಕೊಂಡಿದ್ದರು. ಮಾದಕವಸ್ತು ಸಾಗಣೆ ಹಾಗೂ ಸೇವನೆ ಪ್ರಕರಣದಲ್ಲಿ ರಕುಲ್ ಪ್ರೀತ್ ಸಿಂಗ್ ಸೇರಿ ರಾಣಾ ದಗ್ಗುಬಾಟಿ, ನವದೀಪ್, ರವಿತೇಜ ಸೇರಿ ಹಲವರ ಹೆಸರುಗಳು ಕೇಳಿಬಂದಿದ್ದವು.
ಇದನ್ನೂ ಓದಿ: Rakul Preet Singh: ರಕುಲ್ ಪ್ರೀತ್ ಸಿಂಗ್ ವಿವಾಹದ ಇನ್ನಷ್ಟು ಫೋಟೊಗಳು ರಿವೀಲ್!