Site icon Vistara News

Adani Hindenburg Row: ಅದಾನಿ ಗ್ರೂಪ್‌ ಬಗ್ಗೆ ಹಿಂಡನ್‌ಬರ್ಗ್‌ ವರದಿ, ತನಿಖೆಗೆ ಸುಪ್ರೀಂ ನೇತೃತ್ವದಲ್ಲಿಯೇ ಸಮಿತಿ ರಚನೆ

Adani Hindenburg Row

ನವದೆಹಲಿ: ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ ಕುರಿತು ಹಿಂಡನ್‌ಬರ್ಗ್‌ ವರದಿಯ (Adani Hindenburg Row) ಉಲ್ಲೇಖಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ನೀಡಿದ ವರದಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್‌, ತಾನೇ ಸಮಿತಿ ರಚಿಸುವುದಾಗಿ ತಿಳಿಸಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟಾದಂತಾಗಿದೆ.

“ಸಮಿತಿ ರಚನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹಲವು ತಜ್ಞರ ಹೆಸರುಗಳನ್ನು ಒಳಗೊಂಡ ಮುಚ್ಚಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಿದೆ. ಆದರೆ, ಪ್ರಕರಣದಲ್ಲಿ ಪಾರದರ್ಶಕತೆಯ ಅವಶ್ಯಕತೆ ಇರುವುದರಿಂದ ಕೇಂದ್ರದ ಶಿಫಾರಸುಗಳನ್ನು ತಿರಸ್ಕರಿಸಲಾಗುತ್ತಿದೆ. ಇದಕ್ಕೆ ಕೋರ್ಟ್‌ ಸಮ್ಮತಿ ನೀಡಿದರೆ, ಇದು ಸರ್ಕಾರ ರಚಿಸಿದ ಸಮಿತಿ ಎನಿಸುತ್ತದೆ. ಹಾಗಾಗಿ, ತನಿಖೆಗೆ ಸುಪ್ರೀಂ ಕೋರ್ಟ್‌ ನೇತೃತ್ವದಲ್ಲಿಯೇ ಸಮಿತಿ ರಚಿಸಲಾಗುತ್ತದೆ” ಎಂದು ಸ್ಪಷ್ಟಪಡಿಸಿದೆ.

ಭಾರತದ ಹೂಡಿಕೆದಾರರ ಹಿತದೃಷ್ಟಿಯಿಂದಾಗಿ ಸುಪ್ರೀಂ ಕೋರ್ಟ್‌ ಸಮಿತಿ ರಚಿಸಲಿದೆ ಎಂದು ತಿಳಿಸಿದೆ. ಗೌತಮ್‌ ಅದಾನಿ ಗ್ರೂಪ್‌ನಲ್ಲಿ ಭಾರತದ ನಾಗರಿಕರು ಹಣ ಹೂಡಿಕೆ ಮಾಡಿರುವುದರಿಂದ, ಅವರ ಸುರಕ್ಷತೆ ದೃಷ್ಟಿಯಿಂದಾಗಿ ತನಿಖೆಗೆ ಆದೇಶಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PIL) ಸಲ್ಲಿಸಲಾಗಿದೆ.

ಇದನ್ನೂ ಓದಿ: Adani HIndenburg Row: ಅದಾನಿ ಕೇಸ್‌; ಮುಚ್ಚಿದ ಲಕೋಟೆಯಲ್ಲಿ ನೀಡಿದ ಕೇಂದ್ರದ ವರದಿ ತಿರಸ್ಕರಿಸಿದ ಸುಪ್ರೀಂ

Exit mobile version