ನವದೆಹಲಿ: ಗೌತಮ್ ಅದಾನಿ ಅವರು ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬುದರ ಬಗ್ಗೆ ಹಿಂಡನ್‌ಬರ್ಗ್ ವರದಿ (Adani HIndenburg Row) ಪ್ರಕರಣದ ಕುರಿತು ಕೇಂದ್ರ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ನೀಡಿದ ವರದಿ ಸ್ವೀಕರಿಸಲು ಸುಪ್ರೀಂ ಕೋರ್ಟ್ ನಕಾರ ವ್ಯಕ್ತಪಡಿಸಿದೆ.
ಗೌತಮ್ ಅದಾನಿ ಕುರಿತು ಹಿಂಡನ್‌ಬರ್ಗ್ ಬಹಿರಂಗಪಡಿಸಿದ ವರದಿಯ ಉಲ್ಲೇಖಗಳ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂಬುದಾಗಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು ಕೇಂದ್ರದ ಮುಚ್ಚಿದ ಲಕೋಟೆಯ ವರದಿಯನ್ನು ನಿರಾಕರಿಸಿದೆ. ಪಿಐಎಲ್ ಕುರಿತು ಪ್ರತಿಕ್ರಿಯೆ ನೀಡಬೇಕು ಎಂದು ಇದಕ್ಕೂ ಮೊದಲು ಕೇಂದ್ರ ಸುಪ್ರೀಂ ಸೂಚಿಸಿತ್ತು.
“ಭಾರತೀಯ ಹೂಡಿಕೆದಾರರ ಸುರಕ್ಷತೆ ದೃಷ್ಟಿಯಿಂದಾಗಿ ಪ್ರಕರಣದಲ್ಲಿ ಪಾರದರ್ಶಕತೆಯ ಅವಶ್ಯಕತೆ ಇದೆ. ಹಾಗಾಗಿ, ಲಕೋಟೆಯಲ್ಲಿರುವ ಹೆಸರುಗಳು, ವರದಿಗಳನ್ನು ಬಹಿರಂಗವಾಗಿಯೇ ಕೋರ್ಟ್‌ಗೆ ತಿಳಿಸಬೇಕು. ಪ್ರಕರಣದ ಕುರಿತು ಜನರಿಗೆ ಸತ್ಯ ತಿಳಿಯಬೇಕು. ನಾವು ಮುಚ್ಚಿದ ಲಕೋಟೆಯನ್ನು ಸ್ವೀಕರಿಸುವುದಿಲ್ಲ” ಎಂದು ಕೋರ್ಟ್ ಹೇಳಿತು. ಹಾಗೆಯೇ, ಪ್ರಕರಣದ ಕುರಿತು ತನಿಖೆಗೆ ಸಮಿತಿ ರಚಿಸುವ ಬಗೆಗಿನ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ.
ಇದನ್ನೂ ಓದಿ: Adani group : ಹಿಂಡೆನ್‌ಬರ್ಗ್ ಎಫೆಕ್ಟ್: ಅದಾನಿ ಹೈಡ್ರೋಜನ್‌ನಲ್ಲಿ ಹೂಡಿಕೆಗೆ ಫ್ರಾನ್ಸ್‌ನ ಟೋಟಲ್ ಎನರ್ಜೀಸ್ ಹಿಂದೇಟು