Site icon Vistara News

Monsoon Parliament Session: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಲೋಕಸಭೆಯಿಂದ ಸಸ್ಪೆಂಡ್!

Adhir Ranjan

Adhir Ranjan Chowdhury says 'better to vote for BJP than Trinamool', Congress reacts

ನವದೆಹಲಿ: ಲೋಕಸಭೆಯಲ್ಲಿ (Lok Sabha) ಕಾಂಗ್ರೆಸ್ ಪಕ್ಷದ ನಾಯಕರಾಗಿರುವ (Congress Leader Suspended) ಸಂಸದ ಅಧೀರ್ ರಂಜನ್ ಚೌಧರಿ (Adhir ranjan Chowdhury) ಅವರನ್ನು ಸದನದಿಂದ ಸಸ್ಪೆಂಡ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಸಚಿವರ ಮಾತಿಗೆ ಅಡ್ಡಿಪಡಿಸಿದ ಆರೋಪದ ಹಿನ್ನಲೆಯಲ್ಲಿ ಲೋಕಸಭಾ ಸ್ಪೀಕರ್ ಈ ನಿರ್ಧಾರ ಕೈಗೊಂಡಿದ್ದಾರೆ. ಲೋಕಸಭೆ ನಾಯಕರಾಗಿರುವ ಕಾಂಗ್ರೆಸ್ ಸಂಸದರೊಬ್ಬರನ್ನು ಸಸ್ಪೆಂಡ್ ಮಾಡಿರುವುದು ಇದೇ ಮೊದಲು. ಈ ವಿಷಯವು ಇನ್ನು ಮುಂದೆ ಚರ್ಚೆಗೆ ಹಕ್ಕುಬಾಧ್ಯತಾ ಸಮಿತಿಗೆ ಒಳಪಡಿಲಿದೆ(Monsoon Parliament Session).

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಸಸ್ಪೆಂಡ್ ಮಾಡುವ ನಿರ್ಣಯವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಮಂಡಿಸಿದರು. ಸದಸ್ಯ ಮತ್ತು ಅಧ್ಯಕ್ಷರ ಅಧಿಕಾರವನ್ನು ಸಂಪೂರ್ಣವಾಗಿ ಕಡೆಗಣಿಸಿ ಅಧೀರ್ ರಂಜನ್ ಚೌಧುರಿಯವರ ಒಟ್ಟು, ಉದ್ದೇಶಪೂರ್ವಕ ಮತ್ತು ಪುನರಾವರ್ತಿತ ದುಷ್ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಈ ಸದನವು ಅವರ ದುಷ್ಕೃತ್ಯದ ವಿಷಯವನ್ನು ಹೆಚ್ಚಿನ ತನಿಖೆಗಾಗಿ ಸದನದ ವಿಶೇಷಾಧಿಕಾರಗಳ ಸಮಿತಿಗೆ ಒಪ್ಪಿಸಿದೆ. ಸಮಿತಿಯು ಸದನಕ್ಕೆ ವರದಿಯನ್ನು ಸಲ್ಲಿಸುವರೆಗೂ ಅಧೀರ್ ರಂಜನ್ ಚೌಧರಿ ಅವರನ್ನು ಸದನದ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಧೀರ್ ರಂಜನ್ ಚೌಧರಿ ಸಸ್ಪೆಂಡ್ ಮಾಡುವ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಅಧೀರ್ ರಂಜನ್ ಚೌಧರಿ ಅವರು, ನನ್ನ ಮಾತುಗಳು ಯಾರನ್ನೂ ನೋಯಿಸುವುದು ಆಗಿರಲಿಲ್ಲ. ನಾನು ಯಾವುದೇ ತಪ್ಪು ಮಾತನಾಡಿಲ್ಲ ಎಂದು ಹೇಳಿದರು. ದಿನದ ಆರಂಭದಲ್ಲಿ ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಿದರು. ಈ ಕುರಿತು ಬಿಜೆಪಿ ಸದಸ್ಯರು ಸ್ಪೀಕರ್‌ ಅವರ ಗಮನಕ್ಕೆ ತಂದ ಬಳಿಕ, ಆಕ್ಷೇಪಾರ್ಹ ಹೇಳಿಕೆಯನ್ನು ಕಡತದಿಂದ ತೆಗೆಯಲಾಯಿತು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಲೋಪವನ್ನು ಗಮನಕ್ಕೆ ತಂದರು ಮತ್ತು ಸದಸ್ಯರಿಂದ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.

ಅವಿಶ್ವಾಸ ನಿರ್ಣಯವನ್ನು ಗೆದ್ದ ನರೇಂದ್ರ ಮೋದಿ

ಮಣಿಪುರ ಹಿಂಸಾಚಾರದ ಕುರಿತು ಲೋಕಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, ಮಣಿಪುರದಲ್ಲಿ ಶಾಂತಿ ಸ್ಥಾಪನೆ ಹಾಗೂ ಅಭಿವೃದ್ಧಿಗೆ ನಾವು ಬದ್ಧ ಎಂದು ಹೇಳಿದರು. “ಮಣಿಪುರವು ನಮ್ಮ ಅವಿಭಾಜ್ಯ ಅಂಗವಾಗಿದೆ. ಮಣಿಪುರದ ವಿಷಯದಲ್ಲಿ ನಾವು ನಿರ್ಲಕ್ಷ್ಯ ವಹಿಸಲು ಸಾಧ್ಯವೇ ಇಲ್ಲ. ಮಣಿಪುರ ಜನರ ರಕ್ಷಣೆಯೇ ನಮ್ಮ ಆದ್ಯತೆ” ಎಂದು ಹೇಳಿದರು. ಮತ್ತೊಂದೆಡೆ, ಮೋದಿ ಸುದೀರ್ಘ ಭಾಷಣದ ಬಳಿಕ ಅವಿಶ್ವಾಸ ಗೊತ್ತುವಳಿಯಲ್ಲಿ ಕೇಂದ್ರ ಸರ್ಕಾರ (No Confidence Motion) ಗೆಲುವು ಸಾಧಿಸಿತು. ಅವಿಶ್ವಾಸ ನಿರ್ಣಯವನ್ನು ಧ್ವನಿಮತಕ್ಕೆ ಹಾಕಲಾಯಿತು. ಈ ನಿರ್ಣಯದಲ್ಲಿ ಪ್ರತಿಪಕ್ಷಗಳಿಗೆ ಸೋಲಾದರೆ, ಆಡಳಿತ ಪಕ್ಷ ಗೆಲುವು ಸಾಧಿಸಿತು. ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಮೋದಿ ಯೋಜನೆಗಳ ಬಗ್ಗೆ ಮಾತನಾಡಿದರು. ಕೊನೆಗೆ ಅವಿಶ್ವಾಸ ನಿರ್ಣಯ ಗೆದ್ದರು.

ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದು, ಅವಿಶ್ವಾಸ ಗೊತ್ತುವಳಿ ಮಂಡಿಸಿದ ಬಳಿಕ ಮೋದಿ ಮಣಿಪುರದ ಕುರಿತು ಮಾತನಾಡಿದರು. “ಮಣಿಪುರದಲ್ಲಿ ನಮ್ಮ ಮಾತೆಯರ ಗೌರವಕ್ಕೆ ಧಕ್ಕೆಯಾಗಿದೆ. ಹಿಂಸೆಯ ಘಟನೆಗಳು ನಡೆದಿವೆ. ಕಳೆದ ಆರು ವರ್ಷದಿಂದ ಮಣಿಪುರದಲ್ಲಿ ಬಿಜೆಪಿ ಸರ್ಕಾರವಿದೆ. ಇದುವರೆಗೆ ಶಾಂತಿ ಸ್ಥಾಪನೆಗೆ ಹಲವು ರೀತಿಯಲ್ಲಿ ಪ್ರಯತ್ನಿಸಲಾಗುವುದು” ಎಂದು ಹೇಳಿದರು.

ರಾಜಕೀಯ ಬೇಡ ಎಂದು ಮನವಿ

ಈ ಸುದ್ದಿಯನ್ನೂ ಓದಿ: No Confidence Motion: 2024ರಲ್ಲೂ ಪ್ರತಿಪಕ್ಷಗಳಿಗೆ ನಿದ್ದೆ ಇಲ್ಲ; ಸಂಸತ್ತಿನಿಂದಲೇ ಚುನಾವಣೆ ಪ್ರಚಾರ ಆರಂಭಿಸಿದ ಮೋದಿ

“ಮಣಿಪುರದಲ್ಲಿ ನಡೆದ ಘಟನೆಗಳ ಬಗ್ಗೆ ನಮಗೆ ಖಂಡಿತವಾಗಿಯೂ ದುಃಖವಾಗಿದೆ. ಆದರೆ, ಎಲ್ಲರೂ ಕೂಡಿ ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸೋಣ. ಯಾರೂ ಮಣಿಪುರದ ಮಣ್ಣನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಬಾರದು ಎಂದು ಮನವಿ ಮಾಡುತ್ತೇನೆ. ಮಣಿಪುರದ ಏಳಿಗೆಗೆ ನಾವು ಇನ್ನಿಲ್ಲದಂತೆ ಶ್ರಮಿಸಿದ್ದೇವೆ. ಮುಂದೆಯೂ ಅದೇ ರೀತಿಯಲ್ಲಿ ಮುನ್ನಡೆಯುತ್ತೇವೆ. ಇದುವರೆಗೆ ದೇಶದ ಅಭಿವೃದ್ಧಿ ಸೇರಿ ಹಲವು ವಿಷಯಗಳ ಕುರಿತು ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ” ಎಂದು ಹೇಳುತ್ತ ಮೋದಿ ಅವರು ಭಾಷಣ ಮುಗಿಸಿದರು

Exit mobile version