ಶ್ರೀಹರಿಕೋಟ: ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಸಾಹಸ ಕೈಗೊಂಡಿದೆ. ಸೂರ್ಯ ಮೇಲ್ಮೈ ವಾತಾವರಣದ ಅಧ್ಯಯನಕ್ಕಾಗಿ ಕೈಗೊಂಡಿರುವ ಆದಿತ್ಯ ಎಲ್ 1 ಮಿಷನ್ ಯಶಸ್ವಿಯಾಗಿ ಉಡಾವಣೆಯಾಗಿದೆ. ಇದರೊಂದಿಗೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಆದಿತ್ಯ ಎಲ್ 1 ಮಿಷನ್‌ನ ಕ್ಷಣಕ್ಷಣದ (Aditya L1 Launch Live Updates) ಮಾಹಿತಿ ಇಲ್ಲಿದೆ.
ರಾಕೆಟ್‌ನಿಂದ ನೌಕೆಯ ಬೇರ್ಪಡಿಸುವಿಕೆಯ ಕಾರ್ಯ ಯಶಸ್ವಿ
ಆದಿತ್ಯ ಎಲ್ 1 ಮಿಷನ್ ಉಡಾವಣೆ ಬೆನ್ನಲ್ಲೇ ಪಿಎಸ್‌ಎಲ್‌ವಿ ಸಿ-57 ರಾಕೆಟ್‌ನಿಂದ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟಿದ್ದು, ನಿಗದಿತ ಕಕ್ಷೆಯತ್ತ ನೌಕೆಯನ್ನು ಸಾಗಿಸುವಿಲ್ಲ ಯಶಸ್ವಿಯಾಗಿದೆ. ಆದಿತ್ಯ ಎಲ್ 1 ಮಿಷನ್ ಈಗ ಎಲ್-1 ಕಕ್ಷೆಯತ್ತ ಸಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಮಾಹಿತಿ ನೀಡಿದ್ದಾರೆ.
ನಾಲ್ಕನೇ ಹಂತದ ಬೇರ್ಪಡಿಸುವಿಕೆಯೂ ಯಶಸ್ವಿ
ಆದಿತ್ಯ ಎಲ್ 1 ಮಿಷನ್ ಉಡಾವಣೆಯ ಒಂದು ಗಂಟೆಯ ಬಳಿಕ ಕೈಗೊಂಡ ನಾಲ್ಕನೇ ಹಂತದ ಬೇರ್ಪಡಿಸುವಿಕೆಯೂ ಯಶಸ್ವಿಯಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಮೂರನೇ ಹಂತದ ಬೇರ್ಪಡಿಸುವಿಕೆ ಯಶಸ್ವಿ
ಆದಿತ್ಯ ಎಲ್ 1 ಮಿಷನ್‌ನ ಮೂರನೇ ಹಂತದ ಬೇರ್ಪಡಿಸುವಿಕೆಯ ಕಾರ್ಯವೂ ಯಶಸ್ವಿಯಾಗಿದ್ದು, ಕೆಲವೇ ಕ್ಷಣಗಳಲ್ಲಿ ನಾಲ್ಕನೇ ಹಂತದ ಪ್ರಕ್ರಿಯೆ ನಡೆಯುತ್ತದೆ ಎಂದು ಇಸ್ರೋ ತಿಳಿಸಿದೆ.
ವಿಜ್ಞಾನಿಗಳಿಗೆ ಕಾಂಗ್ರೆಸ್ ಅಭಿನಂದನೆ
ಆದಿತ್ಯ ಎಲ್ 1 ಮಿಷನ್‌ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ ಇಸ್ರೋಗೆ ಕಾಂಗ್ರೆಸ್ ಅಭಿನಂದನೆ ಸಲ್ಲಿಸಿದೆ. “ಚಂದ್ರಯಾನ 3 ಬಳಿಕ ಆದಿತ್ಯ ಎಲ್ 1 ಮಿಷನ್‌ಅನ್ನೂ ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು” ಎಂದು ಪೋಸ್ಟ್ ಮಾಡಿದೆ.
ISRO ने देश को गौरवान्वित होने के अनेक मौके दिए हैं।
— Congress (@INCIndia) September 2, 2023
चंद्रयान-3 के बाद ISRO ने आदित्य L-1 को सफलतापूर्वक लॉन्च कर फिर से देश का मान बढ़ाया है।
देश के वैज्ञानिकों की इस अभूतपूर्व उपलब्धि पर समस्त कांग्रेस परिवार को गर्व है। ISRO की पूरी टीम को शुभकामनाएं।
जय हिंद 🇮🇳 pic.twitter.com/xzyKgwxQsh
ಗ್ರಹಣದ ಸಂದರ್ಭದಲ್ಲೂ ಅಧ್ಯಯನ
ಆದಿತ್ಯ ಎಲ್ 1 ಮಿಷನ್ ಗ್ರಹಣ ಸೇರಿ ಯಾವುದೇ ಸಂದರ್ಭದಲ್ಲೂ ಸೂರ್ಯನ ಮೇಲ್ಮೈನಲ್ಲಿ ಅಧ್ಯಯನ ನಡೆಸಲಿದೆ ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಇದು ಲ್ಯಾಗ್ರೇಂಜ್ ತಲುಪಲು 125 ದಿನ ಬೇಕಾಗುತ್ತದೆ.