Site icon Vistara News

Aditya L1 Launch Live Updates: ರಾಕೆಟ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟ ಆದಿತ್ಯ ಎಲ್‌ 1 ಮಿಷನ್‌; ಮುಂದಿನ ನಿಲ್ದಾಣ ಎಲ್‌ 1 ಕಕ್ಷೆ

Aditya L 1 Mission Success

ISRO Successfully Launches Aditya L1 Mission From Sriharikota

ಶ್ರೀಹರಿಕೋಟ: ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಸಾಹಸ ಕೈಗೊಂಡಿದೆ. ಸೂರ್ಯ ಮೇಲ್ಮೈ ವಾತಾವರಣದ ಅಧ್ಯಯನಕ್ಕಾಗಿ ಕೈಗೊಂಡಿರುವ ಆದಿತ್ಯ ಎಲ್‌ 1 ಮಿಷನ್‌ ಯಶಸ್ವಿಯಾಗಿ ಉಡಾವಣೆಯಾಗಿದೆ. ಇದರೊಂದಿಗೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಆದಿತ್ಯ ಎಲ್‌ 1 ಮಿಷನ್‌ನ ಕ್ಷಣಕ್ಷಣದ (Aditya L1 Launch Live Updates) ಮಾಹಿತಿ ಇಲ್ಲಿದೆ.

B Somashekhar

ಉಡಾವಣೆ ಬಳಿಕ ವೆಹಿಕಲ್‌ ಸಂಚಾರ ಸುಗಮ ಎಂದ ಇಸ್ರೋ

ಆದಿತ್ಯ ಎಲ್‌ 1 ಮಿಷನ್‌ ಹೊತ್ತುಕೊಂಡು ನಭಕ್ಕೆ ಹಾರಿದ 16 ನಿಮಿಷಗಳ ಬಳಿಕವೂ ಪಿಎಸ್‌ಎಲ್‌ವಿ ಸಿ-57 ರಾಕೆಟ್‌ ಸಂಚಾರ ಸಾಮಾನ್ಯವಾಗಿದೆ ಎಂದು ಇಸ್ರೋ ತಿಳಿಸಿದೆ.

B Somashekhar

ಯಶಸ್ವಿಯಾಗಿ ಬೇರ್ಪಟ್ಟ ನೌಕೆ

ಪಿಎಸ್‌ಎಲ್‌ವಿ ಸಿ-57 ರಾಕೆಟ್‌ ನಿಗದಿತ ಕಕ್ಷೆಯಲ್ಲಿ ಸಾಗುತ್ತಿದ್ದು, ಮೊದಲ ಹಾಗೂ ಎರಡನೇ ಹಂತದಲ್ಲಿ ನೌಕೆಯು ಯಶಸ್ವಿಯಾಗಿ ರಾಕೆಟ್‌ನಿಂದ ಬೇರ್ಪಟ್ಟಿದೆ. ಇದರೊಂದಿಗೆ ಸೂರ್ಯಯಾನ ಕೈಗೊಂಡ ಜಗತ್ತಿನ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದೆ.

B Somashekhar

ಉಡಾವಣೆಯ ವಿಡಿಯೊ ನೋಡಿ

B Somashekhar

ಆದಿತ್ಯ ಎಲ್‌ ಮಿಷನ್‌ ಉಡಾವಣೆ ಯಶಸ್ವಿ

ಶ್ರೀಹರಿಕೋಟ: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಮಿಷನ್‌ (Chandrayaan 3) ನೌಕೆಯನ್ನು ಸಾಫ್ಟ್‌ ಲ್ಯಾಂಡ್‌ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಇಸ್ರೋ ಈಗ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಸೂರ್ಯನ ಮೇಲ್ಮೈ ವಾತಾವರಣದ ಅಧ್ಯಯನಕ್ಕಾಗಿ ಕೈಗೊಂಡ ಆದಿತ್ಯ ಎಲ್‌ 1 ಮಿಷನ್‌ (Aditya L1 Launch) ಉಡಾವಣೆ ಯಶಸ್ವಿಯಾಗಿದೆ. ಭಾರತದ ಮೊದಲ ಸೂರ್ಯಯಾನ ಇದಾಗಿದ್ದು, ಉಡಾವಣೆ ಬಳಿಕ ಇಸ್ರೋ ವಿಜ್ಞಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

B Somashekhar

ಸೂರ್ಯನ ಅಂಗಳಕ್ಕೆ ಇಳಿಯಲಿದೆಯೇ?

ಚಂದ್ರನ ಅಂಗಳಕ್ಕೆ ಇಳಿದು ಚಂದ್ರಯಾನ 3 ನೌಕೆಯು ಅಧ್ಯಯನ ನಡೆಸಿದಂತೆ ಆದಿತ್ಯ ಎಲ್‌ 1 ಮಿಷನ್‌ ಸೂರ್ಯನ ಅಂಗಳಕ್ಕೆ ಇಳಿಯುವುದಿಲ್ಲ ಹಾಗೂ ಸೂರ್ಯನಿಗೆ ತುಂಬ ಹತ್ತಿರದಲ್ಲಿ ಅಧ್ಯಯನ ನಡೆಸುವುದಿಲ್ಲ. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್‌ 1 ಮಿಷನ್‌ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್‌ ಸಂಚರಿಸಿ ಅಧ್ಯಯನ ನಡೆಸಲಿದೆ. ಭೂಮಿಯಿಂದ 15 ಲಕ್ಷ ಕಿಲೊಮೀಟರ್‌ ಅಂದರೆ, ಭೂಮಿಯಿಂದ ಸೂರ್ಯನಿಗಿರುವ ದೂರದಲ್ಲಿ ಶೇ.1ರಷ್ಟು ಮಾತ್ರ ಕ್ರಮಿಸಿದಂತೆ.

Exit mobile version