ಶ್ರೀಹರಿಕೋಟ: ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಸಾಹಸ ಕೈಗೊಂಡಿದೆ. ಸೂರ್ಯ ಮೇಲ್ಮೈ ವಾತಾವರಣದ ಅಧ್ಯಯನಕ್ಕಾಗಿ ಕೈಗೊಂಡಿರುವ ಆದಿತ್ಯ ಎಲ್ 1 ಮಿಷನ್ ಯಶಸ್ವಿಯಾಗಿ ಉಡಾವಣೆಯಾಗಿದೆ. ಇದರೊಂದಿಗೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಆದಿತ್ಯ ಎಲ್ 1 ಮಿಷನ್‌ನ ಕ್ಷಣಕ್ಷಣದ (Aditya L1 Launch Live Updates) ಮಾಹಿತಿ ಇಲ್ಲಿದೆ.
ಆದಿತ್ಯ ಎಲ್ 1 ಮಿಷನ್ ವೆಚ್ಚ ಎಷ್ಟು?
ಆದಿತ್ಯ-L1 ಅನ್ನು ಸೂರ್ಯ-ಭೂಮಿಯ ನಡುವಿನ ವ್ಯವಸ್ಥೆಯ L1 (ಲಾಗ್ರೇಂಜಿಯನ್) ಕಕ್ಷೆಯಲ್ಲಿ ಇರಿಸಲಾಗುತ್ತದೆ. ಅಲ್ಲಿ ಎರಡೂ ಆಕಾಶಕಾಯಗಳ ಗುರುತ್ವಾಕರ್ಷಣೆಯ ಪರಿಣಾಮಗಳು ಪರಸ್ಪರ ರದ್ದುಗೊಳ್ಳುತ್ತವೆ. ಬಾಹ್ಯಾಕಾಶದಲ್ಲಿನ ಆ ʼನಿಲುಗಡೆ ಸ್ಥಳʼವು ಗುರುತ್ವಾಕರ್ಷಣೆಯ ಬಲಗಳನ್ನು ಸಮತೋಲನಗೊಳಿಸುವುದರಿಂದ, ಬಾಹ್ಯಾಕಾಶ ನೌಕೆಯನ್ನು ಯಾವುದೇ ಇಂಧನ ಬಳಕೆ ಮಾಡದೆಯೇ ಅಲ್ಲಿಡಬಹುದು. ಈ ಕಕ್ಷೆಯನ್ನು ತಲುಪಲು ಅದು ಸುಮಾರು ನಾಲ್ಕು ತಿಂಗಳು ತೆಗೆದುಕೊಳ್ಳಲಿದೆ. 2019ರಲ್ಲಿ ಆದಿತ್ಯ-L1 ಮಿಷನ್‌ಗಾಗಿ ಕೇಂದ್ರವು ಸುಮಾರು 380 ಕೋಟಿ ರೂ. ನೀಡಿದೆ. ಇದುವರೆಗೆ ಆಗಿರುವ ವೆಚ್ಚದ ಬಗ್ಗೆ ಇಸ್ರೋ ಅಧಿಕೃತ ವಿವರ ನೀಡಿಲ್ಲ.
ಆದಿತ್ಯ ಎಲ್1 ಮಿಷನ್ ಭಾರತಕ್ಕೆ ಏಕೆ ಪ್ರಮುಖ?
ಆಗಸ್ಟ್‌ನಲ್ಲಿ ಚಂದ್ರನ ದಕ್ಷಿಣ ಧ್ರುವದ ಸಮೀಪ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶವಾದ ನಂತರ ಭಾರತದ ಸಾಧನೆಗೆ ಇದು ಮತ್ತೊಂದು ಕಿರೀಟವಾಗಲಿದೆ. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಆದಿತ್ಯ-L1 ಐದು ಲಾಗ್ರೇಂಜ್ ಪಾಯಿಂಟ್‌ಗಳಲ್ಲಿ ಒಂದರ ಸುತ್ತ ಹಾಲೋ ಕಕ್ಷೆಗೆ ಪ್ರವೇಶಿಸುತ್ತದೆ. ಅಲ್ಲಿಂದ ಆದಿತ್ಯ-L1 ಸೂರ್ಯನ ಅಡೆತಡೆಯಿಲ್ಲದ ನೋಟವನ್ನು ಪಡೆದು ಭೂಮಿ ಮತ್ತು ಇತರ ಗ್ರಹಗಳ ಸುತ್ತಮುತ್ತಲಿನ ಪರಿಸರ ಪರಿಸ್ಥಿತಿಗಳ ಮೇಲೆ ಅಧ್ಯಯನ ನಡೆಸಬೇಕು. ಇಸ್ರೋದ ಈ ಬಾಹ್ಯಾಕಾಶ ನೌಕೆಯು ವಿಜ್ಞಾನಿಗಳಿಗೆ ಭೂಮಿಯ ಹವಾಮಾನದ ಇತಿಹಾಸವನ್ನು ಶೋಧಿಸಲು ಸಹಾಯ ಮಾಡಲಿದೆ. ಏಕೆಂದರೆ ಸೌರ ಚಟುವಟಿಕೆಗಳು ಭೂಗ್ರಹದ ವಾತಾವರಣದ ಮೇಲೆ ಪ್ರಭಾವ ಬೀರುತ್ತವೆ.
ಆದಿತ್ಯ ಎಲ್ 1 ಉಡಾವಣೆಯ ಲೈವ್ ವೀಕ್ಷಣೆ ಮಾಡಿ
ISRO Website: ಇಸ್ರೊ
Facebook: https://facebook.com/ISRO
YouTube: https://youtube.com/watch?v=_IcgGYZTXQw
DD National TV channel
from 11:20 Hrs
ಎಷ್ಟು ಗಂಟೆಗೆ ಉಡಾವಣೆ?
ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್ 1 ಮಿಷನ್ ಉಡಾವಣೆಯಾಗಲಿದೆ. ಶನಿವಾರ ಬೆಳಗ್ಗೆ 11.50ಕ್ಕೆ ಉಡಾವಣೆ ಆಗಲಿದ್ದು, ಪಿಎಸ್‌ಎಲ್‌ವಿ-ಸಿ 57 (PSLV-C57) ರಾಕೆಟ್ ಆದಿತ್ಯ ಮಿಷನ್‌ಅನ್ನು ಹೊತ್ತುಕೊಂಡು ಸಾಗಲಿದೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿ ಎಲ್ 1 ಮಿಷನ್ ಸೂರ್ಯನ ಮೇಲ್ಮೈ ವಾತಾವರಣದ ಅಧ್ಯಯನ ಮಾಡಲಿದೆ.