ಇಟಾನಗರ: ಅರುಣಾಚಲ ಪ್ರದೇಶದ ಮಿಗ್ಗಿಂಗ್ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಪತನ(Helicopter Crashed)ವಾದ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್(ಎಎಲ್ಎಚ್)ನಲ್ಲಿದ್ದ ಐವರೂ ಮೃತಪಟ್ಟಿರುವುದು ಖಚಿತಪಟ್ಟಿದೆ. ದುರ್ಗಮ ಪ್ರದೇಶದಿಂದ ಕೂಡಿರುವ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಶುಕ್ರವಾರ ಇಬ್ಬರ ಶವ ಪತ್ತೆಯಾಗಿದ್ದವು. ಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಕಾಪ್ಟರ್‌ನಲ್ಲಿದ್ದ ಐವರೂ ಮೃತಪಟ್ಟಿದ್ದಾರೆ.
ಇಬ್ಬರು ಪೈಲಟ್ ಸೇರಿದಂತೆ ಐವರು ಸೇನಾ ಸಿಬ್ಬಂದಿಯನ್ನು ಈ ಹೆಲಿಕಾಪ್ಟರ್ ಹೊತ್ತೊಯ್ಯುತ್ತಿತ್ತು. ಈ ಕಾಪ್ಟರ್ ಚೀನಾ ಗಡಿಯಿಂದ 35 ದೂರದಲ್ಲಿ ಪತನವಾಗಿದೆ ಎಂದು ಡಿಫೆನ್ಸ್ ವಕ್ತಾರರಾಗಿರುವ ಲೆಫ್ಟಿನೆಂಟ್ ಕರ್ನಲ್ ಎ ಎಸ್ ವಾಲಿಯಾ ಅವರು ತಿಳಿಸಿದ್ದಾರೆ. ಮೇಜರ್ ವಿಕಾಸ್ ಭಂಬು, ಮೇಜರ್ ಮುಸ್ತಾಫಾ ಬೋಹರಾ, ಸಿಎಫ್ಎನ್ ಟೆಕ್ ಎವಿಎನ್(ಎಇಎನ್) ಅಶ್ವಿನಿ ಕೆ. ವಿ., ಹವಾಲ್ದಾರ್(ಒಪಿಆರ್) ಬೀರೇಶ್ ಸಿನ್ಹಾ ಮತ್ತು ರೋಹಿತಾಶ್ವ ಕುಮಾರ್ ಮೃತ ಸೇನಾ ಸಿಬ್ಬಂದಿಯಾಗಿದ್ದಾರೆ. ಕಾಪ್ಟರ್ ಪತನಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪ್ಪರ್ ಸಿಯಾಂಗ್ ಜಿಲ್ಲೆಯ ಟುಟಿಂಗ್ ಸೇನಾ ಕಚೇರಿಯಿಂದ 25 ಕಿ.ಮೀ. ದೂರದಲ್ಲಿ ಈ ಕಾಪ್ಟರ್ ಪತನವಾಗಿದೆ. ಪತನವಾಗಿರುವ ಜಾಗಕ್ಕೆ ಯಾವುದೇ ರಸ್ತೆ ಸಂಪರ್ಕಗಳಿಲ್ಲ. ರಕ್ಷಣಾ ಕಾರ್ಯಾಚರಣೆಯ ತಂಡಗಳನ್ನು ಕಳುಹಿಸಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ಈ ಹಿಂದೆ ಬಿಡುಗಡೆ ಮಾಡಲಾದ ಡಿಫೆನ್ಸ್ ಪಿಆರ್‌ಒ ಹೇಳಿಕೆಯಲ್ಲಿ ತಿಳಿಸಲಾಗಿತ್ತು
ದನ್ನೂ ಓದಿ | Helicopter Crash | ಕೇದಾರನಾಥ್‌ನಲ್ಲಿ ಹೆಲಿಕಾಪ್ಟರ್ ಪತನ, 6 ಮಂದಿ ಸಾವು