ನವದೆಹಲಿ: ಶ್ರದ್ಧಾ ವಾಳ್ಕರ್ ಭೀಕರ ಹತ್ಯೆಯ (Shraddha Murder Case) ಕುರಿತು ದಿನ ಕಳೆದಂತೆಲ್ಲ ಭೀಕರ ಸತ್ಯಗಳು ಹೊರಬರುತ್ತಿವೆ. ಲಿವ್ ಇನ್ ರಿಲೇಷನ್‌ನಲ್ಲಿದ್ದವಳನ್ನೇ, ತನಗಾಗಿ ತಂದೆ-ತಾಯಿ ಬಿಟ್ಟು ಬಂದವಳನ್ನೇ ಅಫ್ತಾಬ್ ಅಮೀನ್ ಪೂನಾವಾಲಾನು ಏಕಾಏಕಿ ಹತ್ಯೆ ಮಾಡಿಲ್ಲ, ತುಂಬ ದಿನದಿಂದಲೂ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಶ್ರದ್ಧಾ ವಾಳ್ಕರ್ ಗೆಳೆಯ ರಾಹುಲ್ ರೈ ಎಂಬುವರು ಅಫ್ತಾಬ್ ಅಮೀನ್ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. “2020ರಲ್ಲಿಯೇ ಶ್ರದ್ಧಾ ವಾಕರ್ ಮೇಲೆ ಹಲ್ಲೆಯಾಗಿತ್ತು. ಆಕೆಗೆ ಗಾಯಗಳಾಗಿದ್ದವು. ನಾನೇ ಅವಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದೆ. ಎರಡರಿಂದ ಮೂರು ಬಾರಿ ಅಫ್ತಾಬ್ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಕುತ್ತಿಗೆ ಮೇಲೆ ಗಾಯದ ಕಲೆ ಇತ್ತು. ಆಗ ಪೊಲೀಸರೇ ಶ್ರದ್ಧಾಳನ್ನು ಮನೆಗೆ ಕಳುಹಿಸಿದ್ದರು” ಎಂದು ಹೇಳಿದ್ದಾರೆ. ಹಾಗೆಯೇ, 2020ರಲ್ಲಿ ತೆಗೆದ ಶ್ರದ್ಧಾಳ ಫೋಟೊವನ್ನು ಹಂಚಿಕೊಂಡಿದ್ದಾರೆ.
ತನಿಖೆ ವೇಳೆ ಅಫ್ತಾಬ್ ಬಾಯ್ಬಿಟ್ಟಿದ್ದೇನು?
ಪೊಲೀಸರ ತನಿಖೆ ವೇಳೆ ಅಫ್ತಾಬ್ ಅಮೀನ್ ಹತ್ತಾರು ವಿಷಯಗಳ ಕುರಿತು ಬಾಯಿ ಬಿಟ್ಟಿದ್ದಾನೆ. ಶ್ರದ್ಧಾಳನ್ನು ಹತ್ಯೆಗೈದ ಬಳಿಕ ಆಕೆಯ ಗುರುತು ಸಿಗಬಾರದು ಎಂದು ಮುಖ ಸುಟ್ಟಿದ್ದು, ಶವವನ್ನು ಹೇಗೆ ಡಿಸ್ಪೋಸ್ ಮಾಡಬೇಕು ಎಂಬುದನ್ನು ಇಂಟರ್‌ನೆಟ್‌ನಲ್ಲಿ ಹುಡುಕಿದ್ದು, ಡಿಎನ್‌ಎ ಸಿಗಬಾರದು ಎಂದು ಶವವನ್ನು 35 ಭಾಗಗಳಾಗಿ ತುಂಡರಿಸಿದ್ದು ಸೇರಿ ಹತ್ತಾರು ವಿಷಯಗಳನ್ನು ಪೊಲೀಸರಿಗೆ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Shraddha Case | ಅಫ್ತಾಬ್ಗೆ ತಿಂಗಳಿಗೆ ಬೇಕಾಗುತ್ತಿತ್ತು 20 ಸಾವಿರ ಲೀ.ಗೂ ಅಧಿಕ ನೀರು; ವಾಟರ್ ಬಿಲ್ ಕೂಡ ಸಾಕ್ಷಿ!