Site icon Vistara News

Aligarh | ಜೋಶಿಮಠ ಆಯ್ತು, ಈಗ ಅಲಿಗಢದಲ್ಲೂ ಮನೆಗಳಿಗೆ ಬಿರುಕು! ಏನು ಕಾರಣ?

House cracking @ Algarh

ಅಲಿಗಢ: ಉತ್ತರಾಖಂಡದ ಜೋಶಿಮಠದ ಬೆನ್ನಲ್ಲೇ ಉತ್ತರ ಪ್ರದೇಶದ ಅಲಿಗಢದಲ್ಲೂ (Aligarh) ಮನೆಗಳು ಬಿರುಕು ಬಿಡುವ ಪ್ರಕರಣಗಳು ವರದಿಯಾಗಿವೆ. ಅಲಿಗಢನ ಕನ್ವರಿಗಂಜ್ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಮನೆಗಳು ಬಿರುಕು ಬಿಡಲಾರಂಭಿಸಿದ್ದು, ಸ್ಥಳೀಯರು ಭಯಭೀತಗೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ನಮ್ಮ ಮನೆಗಳು ಬಿರುಕು ಬಿಡುತ್ತಿವೆ. ಇದರಿಂದಾಗಿ ನಾವು ಭಯದಲ್ಲಿ ದಿನಗಳನ್ನು ದೂಡುವಂತಾಗಿದೆ. ಈ ಬಗ್ಗೆ ನಾವು ದೂರು ನೀಡಿದ್ದೇವೆ. ಆದರೆ, ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಯಾವುದೇ ಪರಿಹಾರವನ್ನು ಕಂಡು ಹಿಡಿಯುವ ಪ್ರಯತ್ನ ಮಾಡಿಲ್ಲ. ಈ ಮನೆಗಳು ಕುಸಿಯಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಪೈಪ್ ಲೈನ್ ಹಾಕಲಾಗಿದೆ. ಈ ಪೈಪ್‌ಲೈನ್ ಸೋರುತ್ತಿರುವುದರ ಪರಿಣಾಮವಾಗಿ ಮನೆಗಳು ಬಿರುಕು ಬಿಡುತ್ತಿವೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಕೆಲವು ಮನೆಗಳು ಬಿರುಕು ಬಿಡುತ್ತಿರುವ ಬಗ್ಗೆ ನಾವು ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ಸ್ಥಳಕ್ಕೆ ತಂಡಗಳನ್ನು ಕಳುಹಿಸಿ, ಪರಿಶೀಲನೆ ನಡೆಸಿದ ಬಳಿಕ, ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅಲಿಗಢ ಮುನ್ಸಿಪಲ್ ಕಾರ್ಪೊರೇಷನ್ ಹೇಳಿದೆ.

ಇದನ್ನೂ ಓದಿ | Joshimath Sinking | ಮುಳುಗುತ್ತಿರುವ ಜೋಶಿಮಠ: ಕೇಂದ್ರ ಸಭೆ, ಸೋಮವಾರ ಅಧಿಕಾರಿಗಳ ಭೇಟಿ, ಇಲ್ಲಿದೆ ಸಮಗ್ರ ವರದಿ

Exit mobile version