ನವದೆಹಲಿ: ಗಲ್ವಾನ್ ಕಣಿವೆಯಲ್ಲಿ (Galwan Clash) ಭಾರತ ಮತ್ತು ಚೀನಾ (India and China) ಯೋಧರ ಮಧ್ಯೆ ಸಂಘರ್ಷ ನಡೆದ ಬಳಿಕ, ಸುಮಾರು 68 ಸಾವಿರ ಯೋಧರು, 90 ಟ್ಯಾಂಕ್ಸ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಭಾರತೀಯ ವಾಯುಪಡೆಯು ವಿಮಾನದ ಮೂಲಕ (Air Lift) ಪೂರ್ವ ಲಡಾಕ್‌ಗೆ (Eastern Ladakh) ಸ್ಥಳಾಂತರಿಸಿತ್ತು ಎಂಬ ಮಾಹಿತಿ ಹೊರ ಬಿದ್ದಿದೆ. ಜತೆಗೆ, ಯೋಧರನ್ನು ವಾಸ್ತವಿಕ ಗಡಿ ರೇಖೆ(LAC)ಗುಂಟ ನಿಯೋಜನೆ ಮಾಡಿತ್ತು ಎಂದು ರಕ್ಷಣಾ ಮತ್ತು ಭದ್ರತಾ ಸಂಸ್ಥೆಗಳಲ್ಲಿನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಗಲ್ವಾನ್ ಸಂಘರ್ಷದ ಹಿನ್ನೆಲೆಯಲ್ಲಿ ಯುದ್ಧ ಸಿದ್ಧತೆಯಲ್ಲಿ ಹಲವು ಯುದ್ಧವಿಮಾನಗಳಿದ್ದವು ಮತ್ತು ಶತ್ರುಗಳ ನಿರ್ಮಾಣದ ಮೇಲೆ ಸತತ ಕಣ್ಗಾವಲು ಇಡಲು ಮತ್ತು ಗುಪ್ತಚರ ಸಂಗ್ರಹಣೆಗಾಗಿ ಭಾರತೀಯ ವಾಯು ಪಡೆಯು ತನ್ನ Su-30 MKI ಮತ್ತು ಜಾಗ್ವಾರ್ ಜೆಟ್ ವಿಮಾನಗಳನ್ನು ಈ ಪ್ರದೇಶದಲ್ಲಿ ನಿಯೋಜಿಸಿತ್ತು. 2020ರ ಜೂನ್ 15ರಂದು ನಡೆದ ಗಲ್ವಾನ್ ಸಂಘರ್ಷವು ದಶಕಗಳಲ್ಲೇ ಚೀನಾ ಮತ್ತು ಭಾರತ ನಡುವಿನ ಅತ್ಯಂತ ಗಂಭೀರ ಸೇನಾ ಸಂಘರ್ಷ ಎಂದು ಬಿಂಬಿತವಾಗಿದೆ.
ವಿಶೇಷ ಕಾರ್ಯಾಚರಣೆಯಡಿಯಲ್ಲಿ ವಾಸ್ತವಿಕ ಗಡಿ ರೇಖೆ(ಎಲ್‌ಎಸಿ) ಉದ್ದಕ್ಕೂ ವಿವಿಧ ಪ್ರದೇಶಗಳಲ್ಲಿ ತ್ವರಿತ ನಿಯೋಜನೆಗಾಗಿ, ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತೀಯ ವಾಯು ಪಡೆಯು ಸಾರಿಗೆ ವಿಮಾನಗಳ ಮೂಲಕ ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಈ ಕಾರ್ಯತಂತ್ರವು ಭಾರತದ ಏರ್‌ಲಿಫ್ಟ್ ಸಾಮರ್ಥ್ಯವು ಹೇಗೆ ಹೆಚ್ಚಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ದೃಷ್ಟಿಯಿಂದ, ಚೀನಾದ ಚಟುವಟಿಕೆಗಳ ಮೇಲೆ ಕಣ್ಣಿಡಲು ಐಎಎಫ್ ಸಾಕಷ್ಟು ಸಂಖ್ಯೆಯ ದೂರದ ಪೈಲಟ್ ವಿಮಾನಗಳನ್ನು (ಆರ್‌ಪಿಎ) ಈ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: MiG-29: ಪಾಕ್- ಚೀನಾ ಬೆದರಿಕೆಗೆ ಭಾರತದ ಉತ್ತರ; ಶ್ರೀನಗರದಲ್ಲಿ ಮಿಗ್- 29 ಸ್ಕ್ವಾಡ್ರನ್
ಭಾರತೀಯ ವಾಯುಪಡೆ ವಿಮಾನವು ಭಾರತೀಯ ಸೇನೆಯ ಬಹು ವಿಭಾಗಗಳನ್ನು ಗಮ್ಯ ಸ್ಥಾನಕ್ಕೆ ಸೇರಿಸಿತ್ತು. ಒಟ್ಟು 68,000 ಪಡೆಗಳು, 90ಕ್ಕೂ ಹೆಚ್ಚು ಟ್ಯಾಂಕ್‌ಗಳು, ಸುಮಾರು 330 BMP ಪದಾತಿ ದಳದ ಯುದ್ಧ ವಾಹನಗಳು, ರಾಡಾರ್ ವ್ಯವಸ್ಥೆಗಳು, ಫಿರಂಗಿ ಬಂದೂಕುಗಳು ಮತ್ತು ಇತರ ಹಲವು ಉಪಕರಣಗಳು ಏರ್ ಲಿಫ್ಟ್ ಮಾಡಲಾಗಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.