Site icon Vistara News

Congress: ಶಿವಸೇನೆ ಬಂಡಾಯದ ಬೆನ್ನಲ್ಲೇ ಸಾವರ್ಕರ್ ಟೀಕೆಗೆ ಕಾಂಗ್ರೆಸ್ ಬ್ರೇಕ್, ಪವಾರ್ ಪ್ಯಾಚ್‌ಅಪ್

After

ನವದೆಹಲಿ: ವೀರ ಸಾವರ್ಕರ್ ಅವರನ್ನು ರಾಹಲ್ ಗಾಂಧಿ (Rahul Gandhi ಟೀಕಿಸಿದ ಬೆನ್ನಲ್ಲೇ, ಕಾಂಗ್ರೆಸ್-ಶಿವಸೇನೆ- ಎನ್‌ಸಿಪಿ ಪಕ್ಷಗಳ ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ(MVA)ಯಲ್ಲಿ ಬಿರುಕು ಮೂಡಿತ್ತು. ವಿಶೇಷವಾಗಿ ಶಿವಸೇನೆಯ ಬಂಡಾಯವನ್ನು ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ತಣ್ಣಗಾಗಿಸಿದ್ದಾರೆ. ಸಾವರ್ಕರ್ ವಿಷಯವನ್ನು ಮುಂದುವರಿಸದಿರಲು ಕಾಂಗ್ರೆಸ್ (Congress) ಪಕ್ಷವು ಪವಾರ್ ಅವರಿಗೆ ಸಮ್ಮತಿಸಿದೆ. ವೀರ ಸಾವರ್ಕರ್‌ ಅವರಿಗೆ ಅವಮಾನಿಸುವುದನ್ನು ಸಹಿಸಿಕೊಳ್ಳಲಾಗುವುದಿಲ್ಲ. ಅಗತ್ಯ ಬಿದ್ದರೆ ಕೂಟದಿಂದ ಹೊರಬರಲು ಸಿದ್ಧ ಎಂದು ಶಿವಸೇನೆ ಹೇಳಿತ್ತು.

ಮತ್ತೊಂದೆಡೆ, ವೀರ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಅವರು, ರಾಹುಲ್ ಗಾಂಧಿ ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರು ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮೈತ್ರಿ ಕೂಟದ ಪಾಲುದಾರರಾದ ಎನ್‌ಸಿಪಿ ಮತ್ತು ಶಿವಸೇನೆಯಲ್ಲಿ ಅಸಮಾಧಾನಕ್ಕೆ ಕಾರಣವಾದ ಸಾವರ್ಕರ್ ವಿರುದ್ಧದ ಟೀಕೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಒಪ್ಪಿಕೊಂಡಿದೆ ಎನ್ನಲಾಗಿದೆ.

ಸೋಮವಾರ ಸಂಜೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಕ್ಷಗಳ ನಾಯಕರ ಸಭೆಯನ್ನು ಕರೆದಿದ್ದರು. ಈ ಸಭೆಗೆ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಪಾಲ್ಗೊಂಡಿದ್ದರು. ಈ ವೇಳೆ ಅವರು, ಸಾವರ್ಕರ್ ವಿಷಯವು ಹೇಗೆ ಮಹಾರಾಷ್ಟ್ರದಲ್ಲಿ ತಮ್ಮ ಮೈತ್ರಿಕೂಟ ಮುಳುವಾಗಲಿದೆ ಎಂಬ ಸಂಗತಿಯನ್ನು ಕಾಂಗ್ರೆಸ್ ನಾಯಕತ್ವಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಸಭೆಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೂ ಹಾಜರಾಗಿದ್ದರು.

ಇದನ್ನೂ ಓದಿ: ಸಾವರ್ಕರ್​​ಗೆ ಪದೇಪದೆ ಅವಮಾನಿಸಿದರೆ ನಮ್ಮ ಮೈತ್ರಿಯೇ ಮುರಿದು ಬಿದ್ದೀತು; ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದ ಉದ್ಧವ್ ಠಾಕ್ರೆ

ಸಾವರ್ಕರ್ ಎಂದಿಗೂ ಆರೆಸ್ಸೆಸ್ ಸದಸ್ಯರಾಗಿರಲಿಲ್ಲ. ಹಾಗಾಗಿ, ಪ್ರತಿಪಕ್ಷಗಳ ನಿಜವಾದ ಹೋರಾಟವು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ್ದಾಗಿದೆ ಎಂಬ ಸಂಗತಿಯನ್ನು ರಾಹುಲ್ ಗಾಂಧಿ ಅವರಿಗೆ ಶರದ್ ಪವಾರ್ ಮನವರಿಕೆ ಮಾಡಿಕೊಟ್ಟಿದ್ದಾರೆಂದು ಹೇಳಲಾಗುತ್ತಿದೆ.

Exit mobile version