ಪಟನಾ: ಸೇನಾ ನೇಮಕಾತಿಯ ಹೊಸ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಬಿಹಾರದಲ್ಲಿ ಶನಿವಾರ ಬಂದ್‌ಗೆ ಕರೆ ನೀಡಲಾಗಿದೆ.
ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್, 24 ಗಂಟೆಗಳ ಬಂದ್‌ಗೆ ಕರೆ ನೀಡಿದೆ. ಅಗ್ನಿಪಥ್ ಯೋಜನೆಯನ್ನು ಕೂಡಲೇ ಹಿಂತೆಗೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಬಂದ್ ಗೆ ಆರ್‌ಜೆಡಿಯ ಮಾಜಿ ಸಿಎಂ ಜಿತಿನ್ ರಾಮ್ ಮಾಂಜಿ ಅವರ ಪಕ್ಷ ಹಿಂದೂಸ್ಥಾನ್ ಅವಾಮ್ ಮೋರ್ಷಾ-ಸೆಕ್ಯುಲರ್ ಬೆಂಬಲ ಸೂಚಿಸಿದೆ. ಇದು ಬಿಜೆಪಿಯ ಮಿತ್ರ ಪಕ್ಷವಾಗಿದೆ.
ಬಿಹಾರದಲ್ಲಿ ಅಗ್ನಿಪಥ್ ವಿರೋಧಿಸಿ ತೀವ್ರ ಹಿಂಸಾಚಾರ ನಡೆದಿದೆ. ಬಿಹಾರದ ಡಿಸಿಎಂ ರೇಣು ದೇವಿ, ಬಿಹಾರ ಬಿಜೆಪಿ ಅಧ್ಯಕ್ಷ ಎಂಪಿ ಸಂಜಯ್ ಜೈಸ್ವಾಲ್ ನಿವಾದ ಮೇಲೆ ದಾಳಿ ನಡೆದಿದೆ. ರೈಲ್ವೆ ಬೋಗಿಗಳಿಗೆ ಬೆಂಕಿ ಹಚ್ಚಲಾಗಿದೆ. ರೈಲ್ವೆ ನಿಲ್ದಾಣದಿಂದ 3 ಲಕ್ಷ ರೂ. ಲೂಟಿ ಹೊಡೆಯಲಾಗಿದೆ.
ಬಿಹಾರದ 12 ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಂಟರ್‌ನೆಟ್ ಸೇವೆಯನ್ನು ರದ್ದುಪಡಿಸಲಾಗಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಅಗ್ನಿಪಥ್ ಯೋಜನೆ ಬಗ್ಗೆ ಮರು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Agneepath | ಕೇಂದ್ರಕ್ಕೆ ʼಅಗ್ನಿʼ ಪರೀಕ್ಷೆ ತಂದೊಡ್ಡಿದ ಅಗ್ನಿಪಥ್ ಬಗ್ಗೆ ನಿಮಗೆಷ್ಟು ಗೊತ್ತು?