Site icon Vistara News

AIADMK: ಬಿಜೆಪಿ ಜತೆ ಎಐಎಡಿಎಂಕೆ ದೋಸ್ತಿ ಖತಂ! ಇದಕ್ಕೆಲ್ಲಾ ಅಣ್ಣಾಮಲೈ ಕಾರಣ

K Annamalai and Jaykumar

ಚೆನ್ನೈ, ತಮಿಳುನಾಡು: ಭಾರತೀಯ ಜನತಾ ಪಾರ್ಟಿ(BJP) ಮತ್ತು ಎಐಎಡಿಎಂಕೆ (AIADMK) ನಡುವಿನ ಮೈತ್ರಿ ಮುರಿದು ಬಿದ್ದಿದೆ. ತಮಿಳುನಾಡು ಚುನಾವಣೆಯಲ್ಲಿ (Tamil Nadu Election) ಈ ಎರಡೂ ಪಕ್ಷಗಳು ಒಗ್ಗಟ್ಟಾಗಿ ಹೋರಾಡಲು ನಿರ್ಧರಿಸಿದ್ದವು. ಆದರೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (Tamil Nadu BJP President K. Annamalai) ಅವರು ಮಾಡುತ್ತರುವ ಟೀಕೆಗಳಿಂದ ಬೇಸತ್ತಿರುವ ಎಐಎಡಿಎಂಕೆಯನ್ನು ಮೈತ್ರಿಯನ್ನು ಮುಂದುವರಿಸದಿರಲು ನಿರ್ಧರಿಸಿದೆ. ಈ ವಿಷಯವನ್ನು ಸ್ವತಃ ಎಐಎಡಿಎಂಕೆಯ ಹಿರಿಯ ನಾಯಕ ಡಿ ಜಯಕುಮಾರ್ ಅವರು ತಿಳಿಸಿದ್ದಾರೆ. ಇದರೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎದಲ್ಲಿನ (NDA) ಭಿನ್ನಾಭಿಪ್ರಾಯವೂ ತೀವ್ರಗೊಂಡಿದೆ.

ತಮಿಳುನಾಡಿನ ಹಿರಿಯ ನಾಯಕ ಅಣ್ಣಾದೊರೈ, ಸಮಾಜ ಸುಧಾರಕ ಪೆರಿಯಾರ್ ಮತ್ತು ಎಐಎಡಿಎಂಕೆ ಸಂಸ್ಥಾಪಕ ಎಂಜಿಆರ್ ಅವರ ಕುರಿತು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ ನಾವು ಅವರ(ಬಿಜೆಪಿ) ಜತೆ ಹೋಗದಿರಲು ನಿರ್ಧರಿಸಿದ್ದೇವೆ. ಸದ್ಯಕ್ಕಂತೂ ಮೈತ್ರಿ ಖತಂ ಆಗಿದೆ. ಚುನಾವಣೆ ಸಂದರ್ಭದಲ್ಲಿ ಈ ಬಗ್ಗೆ ಯೋಚಿಸೋಣ ಎಂದು ಎಐಎಡಿಎಂಕೆ ನಾಯಕ ಡಿ ಜಯಕುಮಾರ್ ಅವರು ಹೇಳಿದ್ದಾರೆ.

ಅಣ್ಣಾಮಲೈ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಲು ಅಯೋಗ್ಯರಾಗಿದ್ದಾರೆ. ಅವರು ತಮ್ಮನ್ನ ತಾವು ಪ್ರೊಜೆಕ್ಟ್ ಮಾಡಿಕೊಳ್ಳಲು ತಮಿಳುನಾಡಿನ ಹಿರಿಯ ನಾಯಕರನ್ನು ಹೀಯಾಳಿಸುತ್ತಿದ್ದಾರೆ ಎಂದು ಎಐಎಡಿಎಂಕೆ ಜಯಕುಮಾರ್ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: K Annamalai: ರಾಹುಲ್ ಗಾಂಧಿ ರೀತಿ ‘ನನ್ನ ಭೂಮಿ ನನ್ನ ಜನ’ ಎಂದು ಪಾದಯಾತ್ರೆ ಹೊರಟ ಬಿಜೆಪಿ ನಾಯಕ ಅಣ್ಣಾಮಲೈ

ಈ ಹಿಂದೆ, ಪಕ್ಷದ ಧೀಮಂತ ನಾಯಕಿ ಜಯಲಲಿತಾ ಅವರ ಕುರಿತು ಅಣ್ಣಾಮಲೈ ಅವರು ಟೀಕೆ ಮಾಡಿದ್ದರು. ಎಐಎಡಿಎಂಕೆ ಕುರಿತು ಟೀಕೆಗಳನ್ನು ಮಾಡದಂತೆ ಅಣ್ಣಾಮಲೈ ಅವರನ್ನು ನಿರ್ಬಂಧಿಸಬೇಕು ಎಂದು ಎಐಎಡಿಎಂಕೆ ನಾಯಕರು ಬಿಜೆಪಿಯ ಹಿರಿಯ ನಾಯಕರಿಗೆ ಕೋರಿದ್ದರು. ನಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿಗಳನ್ನು ಹೀಯಾಳಿಸುವುದನ್ನು ಪಕ್ಷದ ಕಾರ್ಯಕರ್ತರು ಇನ್ನು ಸಹಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೆ ಇಷ್ಟವಿದ್ದರೂ, ಅಣ್ಣಾಮಲೈ ಅವರಿಗೆ ಎಐಎಡಿಎಂಕೆ ಜತೆ ಮೈತ್ರಿ ಇಷ್ಟವಿಲ್ಲ. ನಮ್ಮ ನಾಯಕರನ್ನು ಟೀಕಿಸುವುದನ್ನು ನಾವು ಸಹಿಸಿಕೊಳ್ಳಬೇಕೇ? ನಾವು ಯಾಕೆ ಅವರನ್ನು ಹೊತ್ತೊಕೊಂಡು ಹೋಗಬೇಕು. ತಮಿಳುನಾಡಿನಲ್ಲಿ ನಿಮಗೆ ಹೆಜ್ಜೆ ಇಡಲು ಸಾಧ್ಯವಿಲ್ಲ. ನಿಮ್ಮ ವೋಟ್ ಬ್ಯಾಂಕ್ ಎಲ್ಲರಿಗೂ ಗೊತ್ತಿದೆ. ತಮಿಳುನಾಡಿನಲ್ಲಿ ನಮ್ಮಿಂದಲೇ ನಿಮಗೆ ಐಡೆಂಟಿಟಿ ದೊರೆತಿದೆ ಎಂದು ಅವರು ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version