ಮುಂಬೈ, ಮಹಾರಾಷ್ಟ್ರ: 25 ವರ್ಷದ ಗಗನಸಖಿ ರೂಪಾಲ್ ಓಗ್ರೆ (Air Hostess Rupal Ogrey) ಅವರನ್ನು ಕೊಂದ ಆರೋಪದಲ್ಲಿ ಬಂಧಿತರಾಗಿದ್ದ 40 ವರ್ಷದ ಆರೋಪಿ ಶುಕ್ರವಾರ ಮುಂಜಾನೆ ಮುಂಬೈ ಪೊಲೀಸರ ಕಸ್ಟಡಿಯಲ್ಲಿ (Mumbai Police Custody) ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ವಿಕ್ರಮ್ ಅಥ್ವಾಲ್ ಅಂಧೇರಿ ಪೊಲೀಸ್ ಠಾಣೆಯ ಶೌಚಾಲಯದಲ್ಲಿ ಪ್ಯಾಂಟ್ ಅನ್ನು ನೇಣು ಬಿಗಿದುಕೊಂಡು (Suicide) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು(Air Hostess Murder).
25 ವರ್ಷದ ರೂಪಲ್ ಓಗ್ರೆ ಅವರು ಭಾನುವಾರ ತಡರಾತ್ರಿ ಅಂಧೇರಿಯ ಮರೋಲ್ ಪ್ರದೇಶದ ಬಾಡಿಗೆ ಫ್ಲಾಟ್‌ನಲ್ಲಿ ಕುತ್ತಿಗೆ ಸೀಳಿ ಶವವಾಗಿ ಪತ್ತೆಯಾಗಿದ್ದರು. ಛತ್ತೀಸ್‌ಗಢ ಮೂಲದ ರೂಪಲ್ ಓಗ್ರೆ ಅವರು ಕಳೆದ ಏಪ್ರಿಲ್‌ನಲ್ಲಿ ಪ್ರಮುಖ ಖಾಸಗಿ ಏರ್‌ಲೈನ್‌ನಲ್ಲಿ ತರಬೇತಿಗಾಗಿ ಮುಂಬೈಗೆ ಬಂದಿದ್ದರು.
ಓಗ್ರೆ ವಾಸಿಸುತ್ತಿದ್ದ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ಕಳೆದ ಒಂದು ವರ್ಷದಿಂದ ಮನೆಗೆಲಸ ಮಾಡುತ್ತಿದ್ದ ವಿಕ್ರಮ್ ಅಥ್ವಾಲ್ ಅವರನ್ನು ಕೊಲೆ ಆರೋಪದ ಮೇಲೆ ಸೋಮವಾರ ಬಂಧಿಸಲಾಗಿತ್ತು. ಸ್ಥಳೀಯ ನ್ಯಾಯಾಲಯ ಅವರನ್ನು ಸೆಪ್ಟೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ತನಿಖೆಯ ಸಮಯದಲ್ಲಿ, ಪೊಲೀಸರು ಅಪರಾಧದ ಸಮಯದಲ್ಲಿ ಅವರು ಧರಿಸಿದ್ದ ಬಟ್ಟೆಯ ಜೊತೆಗೆ ರೂಪಲ್ ಓಗ್ರೆಯನ್ನು ಕೊಲ್ಲಲು ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದರು.
ಈ ಸುದ್ದಿಯನ್ನೂ ಓದಿ: Mumbai Murder Case: ತನ್ನ ಲಿವ್ ಇನ್ ಸಂಗಾತಿಯನ್ನು ತುಣುಕುಗಳಾಗಿ ಕತ್ತರಿಸಿ, ಕುಕ್ಕರ್‌ನಲ್ಲಿ ಕುದಿಸಿದ ಮುಂಬೈ ವ್ಯಕ್ತಿ
ವಿಕ್ರಮ್ ಅಥ್ವಾಲ್ ಮತ್ತು ರೂಪಲ್ ಓಗ್ರೆ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ, ಅವರ ಪ್ರಾಥಮಿಕ ತನಿಖೆಯ ಪ್ರಕಾರ, ಕಸದ ಚೀಲವನ್ನು ಎತ್ತಿಕೊಂಡು ಕಮೋಡ್ ಅನ್ನು ಸ್ವಚ್ಛಗೊಳಿಸುವ ನೆಪದಲ್ಲಿ ಅಥ್ವಾಲ್ ಓಗ್ರೇ ಅವರ ಫ್ಲಾಟ್‌ಗೆ ಬಂದಿದ್ದರು. ಈ ವೇಳೆ, ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಓಗ್ರೆಯನ್ನು ಅಥ್ವಾಲ್ ಅವರು ಕೊಲೆ ಮಾಡಿದ್ದಾರೆ.