Site icon Vistara News

Air India Alcohol Policy: ಡಿಜಿಸಿಎ ಭಾರಿ ದಂಡದ ಬೆನ್ನಲ್ಲೇ ಆಲ್ಕೋಹಾಲ್‌ ನೀತಿ ಬದಲಿಸಿದ ಏರ್‌ ಇಂಡಿಯಾ, ಏನಿದು?

air india alcohol policy

ನವದೆಹಲಿ: ಏರ್‌ ಇಂಡಿಯಾ (Air India) ವಿಮಾನದಲ್ಲಿ ಇತ್ತೀಚೆಗೆ ಪ್ರಯಾಣಿಕರು ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಗಳು ಜಾಸ್ತಿಯಾದ ಕಾರಣ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (DGCA) ಭಾರಿ ಪ್ರಮಾಣದ ದಂಡ ವಿಧಿಸಿದ ಬೆನ್ನಲ್ಲೇ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯು ವಿಮಾನದಲ್ಲಿ ಮದ್ಯ ಪೂರೈಕೆ ನೀತಿಯನ್ನೇ (Air India Alcohol Policy) ಬದಲಾಯಿಸಿದೆ.

“ಪ್ರಯಾಣಿಕರು ವಿಮಾನ ಹತ್ತುವಾಗಲೇ ತಂದ ಮದ್ಯವನ್ನು ವಿಮಾನದಲ್ಲಿ ಕುಡಿಯುವಂತಿಲ್ಲ. ಹಾಗೆಯೇ, ಬ್ಯಾಗ್‌ನಲ್ಲಿ ತಂದ ಮದ್ಯವನ್ನು ಕುಡಿಯದಂತೆ ವಿಮಾನದ ಸಿಬ್ಬಂದಿಯು ಗಮನ ಹರಿಸಬೇಕು, ಹೆಚ್ಚಿನ ನಿಗಾ ಇಡಬೇಕು. ವಿಮಾನದ ಸಿಬ್ಬಂದಿ ನೀಡುವ ಮದ್ಯವನ್ನು ಪ್ರಯಾಣಿಕರು ಕುಡಿಯಬಹುದು. ಆದರೆ, ಮದ್ಯ ಪೂರೈಸುವಾಗ ಸಿಬ್ಬಂದಿಯು ಹಲವು ಸುರಕ್ಷಿತ ಮಾನದಂಡಗಳನ್ನು ಅನುಸರಿಸಬೇಕು” ಎಂಬುದಾಗಿ ಪರಿಷ್ಕೃತ ಮದ್ಯ ಪೂರೈಕೆ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ನವೆಂಬರ್‌ನಲ್ಲಿ ಅಮೆರಿಕದ ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಶಂಕರ್‌ ಮಿಶ್ರಾ ಎಂಬಾತ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಸಿಎ ಏರ್‌ ಇಂಡಿಯಾಗೆ 30 ಲಕ್ಷ ರೂ. ದಂಡ ವಿಧಿಸಿದೆ. ಇದಾದ ಕೆಲವೇ ದಿನಗಳಲ್ಲಿ ಮತ್ತೊಂದು ಮೂತ್ರ ವಿಸರ್ಜನೆ ಪ್ರಕರಣದಲ್ಲಿ 10 ಲಕ್ಷ ರೂ. ದಂಡ ವಿಧಿಸಿದೆ. ಇದರಿಂದಾಗಿ ವಿಮಾನಯಾನ ಸಂಸ್ಥೆಯು ಆಲ್ಕೋಹಾಲ್‌ ನೀತಿಯನ್ನೇ ಬದಲಿಸಿದೆ.

ಇದನ್ನೂ ಓದಿ | ಮತ್ತೊಂದು ಮೂತ್ರ ವಿಸರ್ಜನೆ ಕೇಸ್​ ಮುಚ್ಚಿಟ್ಟ ಏರ್​ ಇಂಡಿಯಾಕ್ಕೆ ಮತ್ತೆ 10 ಲಕ್ಷ ರೂ. ದಂಡ; ಪ್ಯಾರಿಸ್​-ದೆಹಲಿ ವಿಮಾನದಲ್ಲಿ ನಡೆದಿತ್ತು ಘಟನೆ

Exit mobile version